AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಒಂದೇ ದಿನ 32,097 ಹೊಸ ಕೊವಿಡ್ ಪ್ರಕರಣ ಪತ್ತೆ, 188 ಸಾವು; ಟಿಪಿಆರ್ ಶೇ 18.41

Coronavirus Cases in Kerala: 102 ಹೊಸ ಕೊವಿಡ್ ರೋಗಿಗಳು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. 30,456 ಜನರು ಸಂಪರ್ಕದ ಮೂಲಕ ವೈರಸ್‌ಗೆ ತುತ್ತಾದರು. 1441 ರೋಗಿಗಳ ಸೋಂಕಿನ ಮೂಲವನ್ನು ಗುರುತಿಸಲಾಗಿಲ್ಲ.

ಕೇರಳದಲ್ಲಿ ಒಂದೇ ದಿನ 32,097 ಹೊಸ ಕೊವಿಡ್ ಪ್ರಕರಣ ಪತ್ತೆ, 188 ಸಾವು; ಟಿಪಿಆರ್ ಶೇ 18.41
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 02, 2021 | 8:22 PM

Share

ತಿರುವನಂತಪುರಂ: ಕೇರಳದಲ್ಲಿ ಗುರುವಾರ 32,097 ಹೊಸ ಕೊವಿಡ್ -19  (Covid-19) ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅದೇ ಅವಧಿಯಲ್ಲಿ 188 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 21,149 ಕ್ಕೆ ಏರಿದೆ. ಪರೀಕ್ಷಾ ಪಾಸಿಟಿವಿಟಿ ದರವು ಶೇ 18.41 ದಾಖಲಾಗಿದೆ. ಜಿಲ್ಲಾವಾರು ಅಂಕಿಅಂಶಗಳು: ತ್ರಿಶೂರ್- 4334, ಎರ್ನಾಕುಲಂ -3768, ಕೋಯಿಕ್ಕೋಡ್ -3531, ಪಾಲಕ್ಕಾಡ್ -2998, ಕೊಲ್ಲಂ -2908, ಮಲಪ್ಪುರಂ -2664, ತಿರುವನಂತಪುರಂ -2440, ಕೋಟ್ಟಯಂ-2121, ಅಲಪ್ಪುಳ- 1709, ಕಣ್ಣೂರು -1626, ಪತ್ತನಂತಿಟ್ಟ -1267, ಇಡುಕ್ಕಿ -1164, ವಯನಾಡ್ -1012, ಕಾಸರಗೋಡು -555. ಕಳೆದ 24 ಗಂಟೆಗಳಲ್ಲಿ ಒಟ್ಟು 1,74,307 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟಾರೆ, 3,19,01,842 ಮಾದರಿಗಳನ್ನು ಸಾಮಾನ್ಯ ಮಾದರಿ, ಸೆಂಟಿನೆಲ್ ಮಾದರಿ, CBNAAT, Truenat, POCT, PCR, RTLAMP, ಆಂಟಿಜೆನ್ ಪರೀಕ್ಷೆಗೆ ಕಳುಹಿಸಲಾಗಿದೆ.

ಸ್ಥಳೀಯ ಸಂಸ್ಥೆಗಳನ್ನು ಸಾಪ್ತಾಹಿಕ ಸೋಂಕು ಅನುಪಾತದ (WIPR) ಆಧಾರದ ಮೇಲೆ ವರ್ಗೀಕರಿಸಲಾಗಿದೆ. 295 ಸ್ಥಳೀಯ ಸಂಸ್ಥೆಗಳಲ್ಲಿ WIPR 7 ಕ್ಕಿಂತ ಹೆಚ್ಚಿದೆ. ಅವುಗಳಲ್ಲಿ 81 ಸ್ಥಳಗಳನ್ನು ನಗರ ಪ್ರದೇಶಗಳಲ್ಲಿ ಮತ್ತು 215 ಗ್ರಾಮೀಣ ಪ್ರದೇಶಗಳಲ್ಲಿ ಗುರುತಿಸಲಾಗಿದೆ.

102 ಹೊಸ ಕೊವಿಡ್ ರೋಗಿಗಳು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. 30,456 ಜನರು ಸಂಪರ್ಕದ ಮೂಲಕ ವೈರಸ್‌ಗೆ ತುತ್ತಾದರು. 1441 ರೋಗಿಗಳ ಸೋಂಕಿನ ಮೂಲವನ್ನು ಗುರುತಿಸಲಾಗಿಲ್ಲ.

ಸಂಪರ್ಕ ಪ್ರಕರಣಗಳ ಅಂಕಿಅಂಶಗಳು: ತ್ರಿಶೂರ್ -424, ಎರ್ನಾಕುಲಂ -3718, ಕೋಯಿಕ್ಕೋಡ್ -3471, ಪಾಲಕ್ಕಾಡ್- 1982, ಕೊಲ್ಲಂ -2892, ಮಲಪ್ಪುರಂ -2589, ತಿರುವನಂತಪುರಂ- 2330, ಕೋಟ್ಟಯಂ -2012, ಆಲಪ್ಪುಳ -1672, ಕಣ್ಣೂರು -1543, ಪತ್ತನಂತಿಟ್ಟ -1238, ಇಡುಕ್ಕಿ -1144, ವಯನಾಡ್ -994 ಮತ್ತು ಕಾಸರಗೋಡು -547.

98 ಆರೋಗ್ಯ ಕಾರ್ಯಕರ್ತರು ಸಹ ಕೊವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಅವರಲ್ಲಿ ತಲಾ 15 ಮಂದಿ ಪಾಲಕ್ಕಾಡ್ ಮತ್ತು ಕಣ್ಣೂರಿನವರು, ಕೊಲ್ಲಂ ಮತ್ತು ವಯನಾಡ್ ನಿಂದ 14, ಪತ್ತನಂತಿಟ್ಟದಿಂದ 13, ಕಾಸರಗೋಡಿನಿಂದ 7, ಕೋಟ್ಟಯಂ ಮತ್ತು ಎರ್ನಾಕುಲಂನಿಂದ 3, ತ್ರಿಶೂರ್ ನಿಂದ 3, ಅಲಪ್ಪುಳ ಮತ್ತು ಕೋಯಿಕ್ಕೋಡ್ ನಿಂದ ತಲಾ 2 ಮತ್ತು ಮಲಪ್ಪುರಂನಿಂದ 1 ಆಗಿದೆ.  ಏತನ್ಮಧ್ಯೆ, ರಾಜ್ಯದಲ್ಲಿ 21,634 ಮಂದಿ ಚೇತರಿಸಿಕೊಂಡಿದ್ದಾರೆ.

ಜಿಲ್ಲಾವಾರು ಚೇತರಿಕೆಯ ಅಂಕಿಅಂಶಗಳು: ತಿರುವನಂತಪುರಂ- 1501, ಕೊಲ್ಲಂ -2994, ಪತ್ತನಂತಿಟ್ಟ -497, ಆಲಪ್ಪುಳ -914, ಕೋಟ್ಟಯಂ -1822, ಇಡುಕ್ಕಿ -559, ಎರ್ನಾಕುಲಂ -2190, ತ್ರಿಶೂರ್ -2700, ಪಾಲಕ್ಕಾಡ್ -2652, ಮಲಪ್ಪುರಂ -1850, ಕೋಯಿಕ್ಕೋಡ್- 1369, ವಯನಾಡ್- 400, ಕಣ್ಣೂರು -1855 ಮತ್ತು ಕಾಸರಗೋಡು -331.

ಇದರೊಂದಿಗೆ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,40,186 ಕ್ಕೆ ತಲುಪಿದೆ. ಈವರೆಗೆ 38,60,248 ಮಂದಿ ರೋಗದಿಂದ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ 5,68,087 ಜನರು ನಿಗಾದಲ್ಲಿದ್ದಾರೆ. ಇದರಲ್ಲಿ 5,34,805 ಜನರು ಮನೆ/ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 33,282 ಜನರು ಆಸ್ಪತ್ರೆಗಳಲ್ಲಿದ್ದಾರೆ. 3112 ಜನರು ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ನ್ಯೂ ಯಾರ್ಕ್ ಎದುರಿಸುತ್ತಿರುವ ಪ್ರವಾಹದಂಥ ಸ್ಥಿತಿಯಲ್ಲಿ ಆಸ್ಪತ್ರೆ ಹೊಕ್ಕ ನೀರು ಕೊವಿಡ್ ರೋಗಿಯನ್ನು ಬೆಡ್ ಸಮೇತ ಬೀದಿಗೆಳೆದಿದೆ!

ಇದನ್ನೂ ಓದಿ: ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಜನರ ಮೇಲೆ ಯಾವುದೇ ನಿಬಂಧನೆ ಹೇರುವಂತಿಲ್ಲ: ರಾಜ್ಯ ಸರ್ಕಾರದಿಂದ ಸೂಚನೆ 

(Kerala records 32,097 new Covid-19 cases 188 deaths death toll mounted to 21,149)

Published On - 7:33 pm, Thu, 2 September 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!