Video: ಗಿಡಮೂಲಿಕೆ ತರಲು ಹೋಗಿ, ನದಿ ದಾಟಲಾಗದೆ 7 ತಾಸು ಪರದಾಡಿದ ನಾಲ್ವರನ್ನು ರಕ್ಷಿಸಿದ ಐಟಿಬಿಪಿ
12 ಸಾವಿರ ಅಡಿ ಎತ್ತರದಲ್ಲಿ ಸಿಲುಕಿದ್ದವರನ್ನು ಸೆಪ್ಟೆಂಬರ್ 1ರಂದು ಮಧ್ಯಾಹ್ನ 2ಗಂಟೆಗೆ ಐಟಿಬಿಪಿಯ 14ನೇ ಬೆಟಾಲಿಯನ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಉತ್ತರಾಖಂಡ್ನ ಮಿಲಮ್ ಸಮೀಪದಲ್ಲಿ, ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದಲ್ಲಿ ಸಿಲುಕಿದ್ದ ನಾಲ್ವರನ್ನು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಅದ್ಯಾವುದೋ ಔಷಧೀಯ ಗಿಡಮೂಲಿಕೆ ತರಲೆಂದು ಸಮೀಪದ ಪರ್ವತ ಹತ್ತಿದ್ದರು. ಆದರೆ ಆ ಪರ್ವತದ ಮೂಲಕ ಹರಿಯುವ ನದಿ ಒಮ್ಮೆಲೇ ಉಕ್ಕಿ ಹರಿದಿದ್ದರಿಂದ ಅವರು ಅಲ್ಲಿಯೇ ಸಿಲುಕಿದ್ದರು. ಸುಮಾರು 7 ತಾಸು ಅಲ್ಲಿಯೇ ಇದ್ದ ಆ ನಾಲ್ವರನ್ನೂ ಇದೀಗ ರಕ್ಷಿಸಲಾಗಿದ್ದು, ವಿಡಿಯೋ ವೈರಲ್ ಆಗಿದೆ.
12 ಸಾವಿರ ಅಡಿ ಎತ್ತರದಲ್ಲಿ ಸಿಲುಕಿದ್ದವರನ್ನು ಸೆಪ್ಟೆಂಬರ್ 1ರಂದು ಮಧ್ಯಾಹ್ನ 2ಗಂಟೆಗೆ ಐಟಿಬಿಪಿಯ 14ನೇ ಬೆಟಾಲಿಯನ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮೂವರು ಪುರುಷರು ಮತ್ತು ಓರ್ವ ಮಹಿಳೆ ಇದ್ದರು. ಈ ಎಲ್ಲರನ್ನೂ ನದಿಯ ಆಚೆ ಬದಿಯಿಂದ ಈ ಕಡೆಗೆ ಹಗ್ಗದ ಮೂಲಕ ಕರೆತರಲಾಗಿದೆ.
ಗ್ರಾಮಸ್ಥರು ಒಂದಷ್ಟು ಗಿಡಮೂಲಿಕೆಗಳನ್ನು ತರಲು ಹೋಗಿದ್ದರು. ಆದರೆ ವಾಪಸ್ ಬರುವಾಗ ದಾರಿ ತಪ್ಪಿದ್ದಾರೆ. ಈ ನದಿ ತುಂಬಿ ಹರಿದಿದ್ದರಿಂದ ವಾಪಸ್ ಬರಲಾಗದೆ ಕಷ್ಟಪಟ್ಟಿದ್ದಾರೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.
#WATCH | ITBP personnel rescue four locals near Milam, Uttarakhand from an altitude of 12,000 feet. These people were stranded across a mountain river for hours. pic.twitter.com/KZeMRMRKyb
— ANI (@ANI) September 2, 2021
ಇದನ್ನೂ ಓದಿ: ‘ಈಗಾಗಲೇ ಸಾಮಾನ್ಯ ಜನರು ಬಡತನ, ನಿರುದ್ಯೋಗದ ಕಾರಣ 3ನೇ ಅಲೆಯನ್ನು ಅನುಭವಿಸುತ್ತಿದ್ದಾರೆ’: ಸೋನು ಸೂದ್
ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಗೃಹ ಸಚಿವ ಅಮಿತ್ ಶಾ ಘೋಷಣೆ