ಲಡಾಖ್ ನವೆಂಬರ್ 10: ಅನಿರೀಕ್ಷಿತವಾದ ಮತ್ತು ಆಶ್ಚರ್ಯಕರವಾದ ವಿದ್ಯಮಾನವೊಂದು ಆಕಾಶದಲ್ಲಿ ನಡೆದಿದ್ದು, ಲಡಾಖ್‌ನ (Ladakh) ಹಾನ್ಲೆ ಮತ್ತು ಮೆರಾಕ್‌ನಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯವು (IAO) ಆಕಾಶದಲ್ಲಿ ಕಂಡು ಬಂದ ಅಪರೂಪದ ಕೆಂಪು ಬಣ್ಣದ ಚಿತ್ರಗಳನ್ನು ಸೆರೆಹಿಡಿದಿದೆ. ನವೆಂಬರ್ 5 ರ ರಾತ್ರಿ ಕೆಂಪು-ಬಣ್ಣದ ಅರೋರಲ್ ಚಟುವಟಿಕೆಯು ಪ್ರಾರಂಭವಾಗಿದ್ದು ಇದು ಸ್ಟೇಬಲ್ ಅರೋರಲ್ ರೆಡ್ (SAR) ಘಟನೆಗೆ ಕಾರಣವಾಗಿದೆ, ಇದು ಅಪರೂಪದ ವಾತಾವರಣದ ವಿದ್ಯಮಾನವಾಗಿದ್ದು, ಇದು ಆಕಾಶದಲ್ಲಿ ಕೆಂಪು ಬಣ್ಣದ ಛಾಯೆಗೆ ಕಾರಣವಾಗುತ್ತದೆ. ಇದು ಹೆಚ್ಚು ಸಾಮಾನ್ಯವಾದ ಹಸಿರು ಮತ್ತು ನೀಲಿ ಬಣ್ಣಗಳಿಂದ ಭಿನ್ನವಾಗಿರುತ್ತವೆ
SAR ಘಟನೆಯು ಭೂಕಾಂತೀಯ ಚಂಡಮಾರುತದಿಂದ ಪ್ರಚೋದಿಸಲ್ಪಟ್ಟಿದೆ, ಇದು ಸೌರ ಚಂಡಮಾರುತದಿಂದ ಉಂಟಾದ ಭೂಮಿಯ ಮ್ಯಾಗ್ನೆಟೋಸ್ಪಿಯರ್ನ ಪ್ರಮುಖ ಅಡಚಣೆಯಾಗಿದೆ. ಕೆಂಪು ಅರೋರಾ ವಿದ್ಯಮಾನವು ಉತ್ತರ ದಿಗಂತದ ಕಡೆಗೆ ರಾತ್ರಿ 10 ರಿಂದ ಮಧ್ಯರಾತ್ರಿಯವರೆಗೆ ಗೋಚರಿಸಿತು, ಅದರ ತೀವ್ರತೆಯು ರಾತ್ರಿ 10:40 ರ ಸುಮಾರಿಗೆ ತಲುಪಿತು.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ನಿರ್ವಹಿಸುತ್ತಿರುವ IAO, ಈ ಅಸಾಧಾರಣ ಘಟನೆಯನ್ನು ಸೆರೆಹಿಡಿಯಲು ಆಲ್-ಸ್ಕೈ ಕ್ಯಾಮೆರಾವನ್ನು ಬಳಸಿದೆ. ಕ್ಯಾಮೆರಾವು ಸಂಪೂರ್ಣ ಆಕಾಶ ಗೋಳವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ, ಅಂತಹ ಅಪರೂಪದ ಘಟನೆಗಳನ್ನು ದಾಖಲಿಸಲು ಅನುವು ಮಾಡಿಕೊಡುತ್ತದೆ.
Red auroral activity, attributed to a SAR event, was seen on 5 November from our observatories in Hanle and Merak in Ladakh! This was due to a geomagnetic storm caused by a solar storm #Aurora #RedAurora @dstindia @asipoec @cessi_iiserkol @dorje1974 @NASASun @spaceweather pic.twitter.com/BlsrMRif9j
— IIAstrophysics (@IIABengaluru) November 9, 2023
ಪ್ಯಾಂಗೊಂಗ್ ತ್ಸೋ ದಡದಲ್ಲಿರುವ ಲಡಾಖ್‌ನ ಮತ್ತೊಂದು ಸ್ಥಳವಾದ ಮೆರಾಕ್ ಈ ಅದ್ಭುತ ಆಕಾಶ ವಿದ್ಯಮಾನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.ಮೆರಾಕ್ ನ ನೋಟವು ಈ ಪ್ರದೇಶದಲ್ಲಿ ಎತ್ತರದ ಪರ್ವತಗಳ ಉಪಸ್ಥಿತಿಯಿಂದ ಭಾಗಶಃ ಅಸ್ಪಷ್ಟವಾಗಿದೆ.
ಈ SAR ವಿದ್ಯಮಾನ ಹಾನ್ಲೆ ಮತ್ತು ಮೆರಾಕ್‌ಗೆ ಮಾತ್ರ ಮೀಸಲಾಗಿರಲಿಲ್ಲ. ಪ್ರಪಂಚದಾದ್ಯಂತದ ಅನೇಕ ಸ್ಥಳಗಳು ಈ ಅಪರೂಪದ ದೃಶ್ಯವನ್ನು ವೀಕ್ಷಿಸಿದವು, ಇದು ಜಾಗತಿಕ ಖಗೋಳ ಘಟನೆಯಾಗಿದೆ.
33 ಡಿಗ್ರಿ ಉತ್ತರದಲ್ಲಿ ನೆಲೆಗೊಂಡಿರುವ ಲಡಾಖ್‌ನಂತಹ ಕೆಳಗಿನ ಅಕ್ಷಾಂಶಗಳಲ್ಲಿ ಇಂತಹ ಅರೋರಲ್ ಹೊರಸೂಸುವಿಕೆಯು ಅಪರೂಪದ ಮತ್ತು ರೋಮಾಂಚಕಾರಿ ಘಟನೆಯಾಗಿದೆ, ಇದು ಖಗೋಳ-ಪ್ರವಾಸೋದ್ಯಮ ಮತ್ತು ವೈಜ್ಞಾನಿಕ ಸಂಶೋಧನೆಯ ಕೇಂದ್ರವಾಗಿ ಹ್ಯಾನ್ಲೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಸೂರ್ಯನ ಸಕ್ರಿಯ ಅವಧಿಗಳಲ್ಲಿ ಹಾನ್ಲೆಯಿಂದ ಇಂತಹ ಹೆಚ್ಚಿನ ಅರೋರಲ್ ಚಟುವಟಿಕೆಗಳನ್ನು ಅಧ್ಯಯನ ಮಾಡುವ ಬಗ್ಗೆ IIA ಉತ್ಸುಕತೆಯನ್ನು ವ್ಯಕ್ತಪಡಿಸಿತು. ಈ ಅಪರೂಪದ ಆಕಾಶ ಘಟನೆಗಳು ಖಗೋಳಶಾಸ್ತ್ರದ ಉತ್ಸಾಹಿಗಳಿಗೆ ಮತ್ತು ಸಂಶೋಧಕರಿಗೆ ಸಮಾನವಾಗಿ ಹಾನ್ಲೆಯ ಆಕರ್ಷಣೆಯನ್ನು ಹೆಚ್ಚಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ