Video: ನಾಗಾಲ್ಯಾಂಡ್​ನಲ್ಲಿ ಭಾರಿ ಮಳೆ, ಭೂಕುಸಿತ, ಗುಡ್ಡದಿಂದ ಜಾರಿದ ಬಂಡೆ ಕಾರುಗಳ ಮೇಲೆ ಬೀಳುತ್ತಿರುವ ಭೀಕರ ದೃಶ್ಯ

|

Updated on: Jul 05, 2023 | 9:24 AM

ನಾಗಾಲ್ಯಾಂಡ್​ನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ, ಪರಿಣಾಮ ಭೂಕುಸಿತ ಉಂಟಾಗಿದೆ. ಗುಡ್ಡದಿಂದ ಬಂಡೆಗಳು ಜಾರಿ ಕಾರುಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿವೆ.

Video: ನಾಗಾಲ್ಯಾಂಡ್​ನಲ್ಲಿ ಭಾರಿ ಮಳೆ, ಭೂಕುಸಿತ, ಗುಡ್ಡದಿಂದ ಜಾರಿದ ಬಂಡೆ ಕಾರುಗಳ ಮೇಲೆ ಬೀಳುತ್ತಿರುವ ಭೀಕರ ದೃಶ್ಯ
ನಾಗಾಲ್ಯಾಂಡ್ ಭೂಕುಸಿತ
Follow us on

ನಾಗಾಲ್ಯಾಂಡ್​ನಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ, ಪರಿಣಾಮ ಭೂಕುಸಿತ ಉಂಟಾಗಿದೆ. ಗುಡ್ಡದಿಂದ ಬಂಡೆಗಳು ಜಾರಿ ಕಾರುಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿವೆ.
ನಾಗಾಲ್ಯಾಂಡ್‌ನ ದಿಮಾಪುರ್ ಜಿಲ್ಲೆಯ ಚುಮುಕೆಡಿಮಾದಲ್ಲಿ ಭೂಕುಸಿತದಿಂದಾಗಿ ಗುಡ್ಡದಿಂದ ಬೃಹತ್ ಬಂಡೆ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಕಾರುಗಳ ಮೇಲೆ ಬಿದ್ದಿದ್ದು, ಕಾರುಗಳು ನಜ್ಜುಗುಜ್ಜಾಗಿದೆ.

ಮೊದಲು ಬಂಡೆ ಬಿದ್ದ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ, ನಂತರದಲ್ಲಿ ಮತ್ತೊಂದು ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.ಈ ಸಂಪೂರ್ಣ ಘಟನೆಯ ಐದು ಸೆಕೆಂಡುಗಳ ವಿಡಿಯೋ ವೈರಲ್ ಆಗುತ್ತಿದೆ. ಈ ಭೀಕರ ಘಟನೆ ರಸ್ತೆಯ ಹಿಂದೆ ನಿಂತಿದ್ದ ಮತ್ತೊಂದು ವಾಹನದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ಬಗ್ಗೆ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಸಂತಾಪ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಭಾರಿ ಮಳೆ ಮುನ್ಸೂಚನೆ: ಕರಾವಳಿಯ 3 ಜಿಲ್ಲೆಗಳಲ್ಲಿಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಸಂಜೆ 5 ಗಂಟೆ ಸುಮಾರಿಗೆ ದಿಮಾಪುರ್ ಮತ್ತು ಕೊಹಿಮಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಡೆಗಳು ಬಿದ್ದು 2 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸ್ಥಳವನ್ನು ಯಾವಾಗಲೂ ಪಾಕಲಾ ಪಹಾರ್ ಎಂದು ಕರೆಯಲಾಗುತ್ತದೆ, ಇದು ಭೂಕುಸಿತ ಮತ್ತು ಬಂಡೆಗಳ ಬೀಳುವಿಕೆಗೆ ಹೆಸರುವಾಸಿಯಾಗಿದೆ.

ಮೃತರ ಸಂಬಂಧಿಕರಿಗೆ 4-4 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಮತ್ತು ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ಮತ್ತು ಸಹಾಯವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ತಂತ್ರಜ್ಞಾನದ ಪ್ರಗತಿ ಮತ್ತು ಭಾರತ ಸರ್ಕಾರದ ಬಳಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ