ನಾಗಾಲ್ಯಾಂಡ್ ಸಿಎಂ ಪುತ್ರಿಯ ಮದುವೆಯಲ್ಲಿ ಕುಣಿದ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ವಿಡಿಯೊ ವೈರಲ್

ಪದಗಳಲ್ಲಿ ಹೇಳಲಾಗದ್ದನ್ನು ದೇಹ ಹೇಳುತ್ತದೆ. ಗೌರವಾನ್ವಿತ ಮುಖ್ಯಮಂತ್ರಿ ನೆಫಿಯು ರಿಯೊ ಜಿ ಅವರ ಮಗಳ ಮದುವೆಯಲ್ಲಿ ನಾನು ಕುಣಿದೆ ಎಂದು ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ಬರೆದಿದ್ದಾರೆ

ನಾಗಾಲ್ಯಾಂಡ್ ಸಿಎಂ ಪುತ್ರಿಯ ಮದುವೆಯಲ್ಲಿ ಕುಣಿದ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ವಿಡಿಯೊ ವೈರಲ್
ಟೆಮ್ಜೆನ್ ಇಮ್ನಾ ಅಲೋಂಗ್
Edited By:

Updated on: Nov 15, 2022 | 1:04 PM

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ (Temjen Imna Along) ಅವರ ಹಾಸ್ಯ ಪ್ರಜ್ಞೆ ನೆಟಿಜನ್‌ಗಳಿಗೆ ಚಿರಪರಿಚಿತ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಆಗಾಗ್ಗೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತವೆ. ಈಗ ಅವರು ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದು ನೆಟ್ಟಿಗರು ಇದನ್ನು ನೋಡಿ ಅರೇ ವಾಹ್ ಎಂದಿದ್ದಾರೆ. ವಿಷಯ ಏನಪ್ಪಾ ಅಂದರೆ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ (Neiphiu Rio) ಅವರ ಮಗಳ ವಿವಾಹ ಸಮಾರಂಭದಲ್ಲಿ ಅವರು ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಅದು. ನಿರೀಕ್ಷೆಯಂತೆ, ಇದು ಜನರ ಮನಸ್ಸು ಹೃದಯಗಳನ್ನು ಗೆದ್ದಿದ್ದು, ನೆಟ್ಟಿಗರು ಚಪ್ಪಾಳೆ ತಟ್ಟಿದ್ದಾರೆ. ಪದಗಳಲ್ಲಿ ಹೇಳಲಾಗದ್ದನ್ನು ದೇಹ ಹೇಳುತ್ತದೆ. ಗೌರವಾನ್ವಿತ ಮುಖ್ಯಮಂತ್ರಿ ನೆಫಿಯು ರಿಯೊ ಜಿ ಅವರ ಮಗಳ ಮದುವೆಯಲ್ಲಿ ನಾನು ಕುಣಿದೆ ಎಂದು ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ಬರೆದಿದ್ದಾರೆ. ತೆಮ್ಜೆನ್ ಇಮ್ನಾ ಅಲೋಂಗ್, ಕುರ್ತಾ ಪೈಜಾಮ ಮತ್ತು ಸದ್ರಿ ಧರಿಸಿ, ಮದುವೆಯಲ್ಲಿ ಇತರ ಅತಿಥಿಗಳೊಂದಿಗೆ ಮನಬಿಚ್ಚಿ ಕುಣಿಯುತ್ತಿರುವುದು ಈ ವಿಡಿಯೊದಲ್ಲಿದೆ.

ಈ ವಿಡಿಯೊವನ್ನು ಒಂದು ದಿನದ ಹಿಂದೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.  ಅಂದಿನಿಂದ ಇಲ್ಲಿಯವರೆಗೆ 1.9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದು 14000 ಕ್ಕೂ ಹೆಚ್ಚು ಲೈಕ್ ಮತ್ತು ಹಲವಾರು ರೀಟ್ವೀಟ್‌ಗಳನ್ನು ಪಡೆದಿದೆ.


ಅದಕ್ಕಾಗಿಯೇ ನೀವು ಈಶಾನ್ಯದ ಜನಪ್ರಿಯ ಯುವ ನಾಯಕರಾಗಿದ್ದೀರಿ ಎಂದು ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಬಂಗಾಳದಿಂದ ನಿಮಗೆ ಸಾಕಷ್ಟು ಪ್ರೀತಿ ಮತ್ತು ಗೌರವ ಸರ್  ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. “ಅದ್ಭುತ, ಮುಂದಿನ ಬಾರಿ ಪ್ಲೀಸ್ ಮೂನ್‌ವಾಕ್ ಅನ್ನು ಪ್ರಯತ್ನಿಸಿ” ಎಂದು ಇನ್ನೊಬ್ಬರು ಹೇಳಿದ್ದಾರೆ. “ಇಮ್ನಾ ಸರ್, ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ…. ನಿಮ್ಮ ನೃತ್ಯವು ಅನೇಕ ಹೃದಯಗಳನ್ನು ಗೆಲ್ಲುತ್ತಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಎರಡಕ್ಕಿಂತ ಹೆಚ್ಚು ಹೆಜ್ಜೆಗಳು ಇಲ್ಲಿದೆ ಎಂದು ಮತ್ತೊಬ್ಬರು ನಗುವ ಎಮೋಟಿಕಾನ್ ಹಾಕಿದ್ದಾರೆ.