G20 Summit: ಜಿ20 ಶೃಂಗಸಭೆ; ಪ್ರಧಾನಿ ಮೋದಿ ಬಳಿ ಬಂದು ತಬ್ಬಿ, ಕೈ ಕುಲುಕಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್
PM Modi in Bali: ಜಿ20 ಶೃಂಗಸಭೆಯ ಆರಂಭಕ್ಕೂ ಮೊದಲು ತಮ್ಮ ಕುರ್ಚಿಗಳಲ್ಲಿ ಕುಳಿತುಕೊಳ್ಳುವಾಗ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಬಂದ ಜೋ ಬೈಡೆನ್ ಮೋದಿಯನ್ನು ತಬ್ಬಿಕೊಂಡು, ಹ್ಯಾಂಡ್ ಶೇಕ್ ಮಾಡಿದ್ದಾರೆ.
ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (Joe Biden) ಜೊತೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಿ20 ಶೃಂಗಸಭೆಯ (G20 Summit) ಆರಂಭಕ್ಕೂ ಮೊದಲು ತಮ್ಮ ಕುರ್ಚಿಗಳಲ್ಲಿ ಕುಳಿತುಕೊಳ್ಳುವಾಗ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಬಂದ ಜೋ ಬೈಡೆನ್ ಮೋದಿಯನ್ನು ತಬ್ಬಿಕೊಂಡು, ಹ್ಯಾಂಡ್ ಶೇಕ್ ಮಾಡಿದ್ದಾರೆ.
ಬಳಿಕ ಜೋ ಬೈಡೆನ್ ಜೊತೆ ತಮಾಷೆಯಾಗಿ ಮಾತನಾಡಿದ ಮೋದಿ ತಮ್ಮ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಅಮೆರಿಕದ ಅಧ್ಯಕ್ಷರಿಗೆ ಸೂಚಿಸಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕದನ ವಿರಾಮಕ್ಕೆ ಕರೆ ನೀಡಿದ ಮೋದಿ, ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಶಾಂತಿಯನ್ನು ವಾಪಾಸ್ ತರಲು ಜಗತ್ತು ಒಳ್ಳೆ ಮಾರ್ಗವನ್ನು ಕಂಡುಕೊಳ್ಳಬೇಕು. ಉಕ್ರೇನ್‌ನಲ್ಲಿನ ಯುದ್ಧ ನವೆಂಬರ್ 24ರಂದು 9 ತಿಂಗಳುಗಳನ್ನು ಪೂರ್ಣಗೊಳಿಸಲಿದೆ. ಇದು ಜಾಗತಿಕ ಆಹಾರ ಮತ್ತು ಇಂಧನ ಪೂರೈಕೆ ಸರಪಳಿಗೆ ಅಡ್ಡಿಪಡಿಸಿದೆ ಎಂದಿದ್ದಾರೆ.
#WATCH | US President Joe Biden walks over to PM Narendra Modi before the start of #G20Summit in Bali, Indonesia.
(Source: DD) pic.twitter.com/2ULTveCaqh
— ANI (@ANI) November 15, 2022
ಉಕ್ರೇನ್‌ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ನಾನು ಪದೇ ಪದೇ ಹೇಳಿದ್ದೇನೆ. ಕಳೆದ ಶತಮಾನದಲ್ಲಿ 2ನೇ ಮಹಾಯುದ್ಧ ವಿನಾಶವನ್ನು ಉಂಟುಮಾಡಿತು. ಆ ನಂತರ ಅಂದಿನ ನಾಯಕರು ಶಾಂತಿ ಮಾರ್ಗವನ್ನು ಅನುಸರಿಸಲು ಹಲವು ರೀತಿಯ ಪ್ರಯತ್ನಗಳನ್ನು ನಡೆಸಿದರು. ಈಗ ಇದು ನಮ್ಮ ಸರದಿ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: G20 Summit: ಜಿ20 ಶೃಂಗಸಭೆಗೆ ತೆರಳಿದ ಪ್ರಧಾನಿ ಮೋದಿಗೆ ಬಾಲಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಅದ್ದೂರಿ ಸ್ವಾಗತ
ಭಾರತದ ಇಂಧನ ಭದ್ರತೆಯು ಜಾಗತಿಕ ಬೆಳವಣಿಗೆಗೆ ಮುಖ್ಯವಾಗಿದೆ. ಏಕೆಂದರೆ ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ನಾವು ಶಕ್ತಿಯ ಪೂರೈಕೆಯ ಮೇಲೆ ಯಾವುದೇ ನಿರ್ಬಂಧಗಳನ್ನು ಉತ್ತೇಜಿಸಬಾರದು. ಇಂಧನದ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಬೇಕು. ಶುದ್ಧ ಇಂಧನ ಮತ್ತು ಪರಿಸರಕ್ಕೆ ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದರು.
#WATCH | Prime Minister Narendra Modi met US President Joe Biden and French President Emmanuel Macron as the #G20BaliSummit began in Indonesia this morning.
(Source: DD) pic.twitter.com/EXKz8lqSUJ
— ANI (@ANI) November 15, 2022
2030ರ ವೇಳೆಗೆ ನಮ್ಮ ಅರ್ಧದಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ. ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಸಂಕಲ್ಪವನ್ನು ಮಾಡುವುದು ಈ ಸಮಯದ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಮುಂದಿನ ವರ್ಷ ಬುದ್ಧ ಮತ್ತು ಗಾಂಧೀಜಿಯವರ ಪುಣ್ಯಭೂಮಿಯಲ್ಲಿ ಜಿ20 ಸಭೆ ನಡೆಯುವಾಗ ಜಗತ್ತಿಗೆ ಶಾಂತಿಯ ಬಲವಾದ ಸಂದೇಶವನ್ನು ಸಾರಲು ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ನನಗೆ ವಿಶ್ವಾಸವಿದೆ ಎಂದು ಮೋದಿ ಹೇಳಿದರು.