AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eight Billionth Baby 800 ಕೋಟಿ ದಾಟಿದ ಜಾಗತಿಕ ಜನಸಂಖ್ಯೆ; ಮನಿಲಾದಲ್ಲಿ ದಾಖಲೆಯ ಮಗು ಜನನ

ವಿನಿಸ್ ಮಾಬನ್ಸಾಗ್ ಎಂಬ ಹೆಸರಿರುವ ಈ ಮಗು ಡಾ ಜೋಸ್ ಫ್ಯಾಬೆಲ್ಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 1:29 ಕ್ಕೆ (ಸ್ಥಳೀಯ ಸಮಯ) ಜನಿಸಿದೆ.

Eight Billionth Baby 800 ಕೋಟಿ ದಾಟಿದ ಜಾಗತಿಕ ಜನಸಂಖ್ಯೆ; ಮನಿಲಾದಲ್ಲಿ ದಾಖಲೆಯ ಮಗು ಜನನ
TV9 Web
| Edited By: |

Updated on:Nov 15, 2022 | 3:46 PM

Share

ಜಾಗತಿಕ ಜನಸಂಖ್ಯೆ 800 ಕೋಟಿ ದಾಟಿದ್ದು ಮನಿಲಾದ (Manila) ಟೊಂಡೋದಲ್ಲಿ ಜನಿಸಿದ ಹೆಣ್ಣು ಮಗುವನ್ನು ವಿಶ್ವದ ಸಾಂಕೇತಿಕ 800 ಕೋಟಿಯ ಮಗು (Eight Billionth Baby) ಎಂದು ಪರಿಗಣಿಸಲಾಗಿದೆ. ವಿನಿಸ್ ಮಾಬನ್ಸಾಗ್ ಎಂಬ ಹೆಸರಿರುವ ಈ ಮಗು ಡಾ ಜೋಸ್ ಫ್ಯಾಬೆಲ್ಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 1:29 ಕ್ಕೆ (ಸ್ಥಳೀಯ ಸಮಯ) ಜನಿಸಿದೆ. ಫಿಲಿಪೈನ್ಸ್‌ನ ಜನಸಂಖ್ಯೆ ಮತ್ತು ಅಭಿವೃದ್ಧಿ ಆಯೋಗವು ಈ ಹೆಣ್ಣು ಮಗು ಮತ್ತು ಆಕೆಯ ತಾಯಿಯ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಜಾಗತಿಕ ಜನಸಂಖ್ಯೆಗೆ 100 ಕೋಟಿ ಆಗಲು 12 ವರ್ಷಗಳೇ ಬೇಕಾಗಿಬಂತು. ಮುಂದಿನ ವರ್ಷ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ.

ಮನಿಲಾದ ಟೊಂಡೋದಲ್ಲಿ ಜನಿಸಿದ ಹೆಣ್ಣು ಮಗುವನ್ನು ಸಾಂಕೇತಿಕವಾಗಿ ವಿಶ್ವದ 800 ಕೋಟಿ ವ್ಯಕ್ತಿ ಎಂದು ಗುರುತಿಸಿದ್ದು ಜಗತ್ತು ಮತ್ತೊಂದು ಜನಸಂಖ್ಯೆಯ ಮೈಲಿಗಲ್ಲನ್ನು ತಲುಪಿದೆ” ಎಂದು ಫಿಲಿಪೈನ್ಸ್ ಜನಸಂಖ್ಯೆ ಮತ್ತು ಅಭಿವೃದ್ಧಿ ಆಯೋಗವು ಫೇಸ್‌ಬುಕ್ ನಲ್ಲಿ ಪೋಸ್ಟ್‌ ಮಾಡಿದೆ. ನವೆಂಬರ್ 15 ರಂದು ಡಾ ಜೋಸ್ ಫ್ಯಾಬೆಲ್ಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ದಾದಿಯರು ಮತ್ತು ಜನಸಂಖ್ಯೆ ಮತ್ತು ಅಭಿವೃದ್ಧಿ ಆಯೋಗದ ಪ್ರತಿನಿಧಿಗಳು ಬೇಬಿ ವಿನಿಸ್ ನ್ನು ಸ್ವಾಗತಿಸಿದರು ಎಂದು ಅದರಲ್ಲಿ ಬರೆಯಲಾಗಿದೆ.

ಜಾಗತಿಕ ಮೈಲಿಗಲ್ಲು ಸಾರ್ವಜನಿಕ ಆರೋಗ್ಯದಲ್ಲಿನ ಪ್ರಮುಖ ಸುಧಾರಣೆಗಳನ್ನು ಸೂಚಿಸುತ್ತದೆ. ಅದು ಸಾವಿನ ಅಪಾಯವನ್ನು ಕಡಿಮೆ ಮಾಡಿದೆ ಮತ್ತು ಜೀವಿತಾವಧಿಯನ್ನು ಹೆಚ್ಚಿಸಿದೆ. ಆದರೆ ಈ ಕ್ಷಣವು ಸಂಖ್ಯೆಗಳನ್ನು ಮೀರಿ ನೋಡಲು ಮತ್ತು ಜನರು ಮತ್ತು ಗ್ರಹವನ್ನು ರಕ್ಷಿಸುವ ತನ್ನ ಜವಾಬ್ದಾರಿಯನ್ನು ಪೂರೈಸಲು ಮಾನವೀಯತೆಗೆ ಸ್ಪಷ್ಟವಾದ ಕರೆಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

“800 ಕೋಟಿ ಭರವಸೆಗಳು. 800 ಕೋಟಿ ಕನಸುಗಳು. 800 ಕೋಟಿ ಸಾಧ್ಯತೆಗಳು. ನಮ್ಮ ಗ್ರಹವು ಈಗ 8 ಶತಕೋಟಿ ಜನರಿಗೆ ನೆಲೆಯಾಗಿದೆ” ಎಂದು ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ (UNFPA) ಟ್ವೀಟ್ ಮಾಡಿದೆ.

ಕಳೆದ ಶತಮಾನದಲ್ಲಿ ವಿಶ್ವದ ಜನಸಂಖ್ಯೆಯ ಹೆಚ್ಚಳವು ಸಾಕಷ್ಟು ವೇಗವಾಗಿದೆ. ಅದೇ ವೇಳೆ ಬೆಳವಣಿಗೆಯ ವೇಗದಲ್ಲಿ ಕ್ರಮೇಣ ನಿಧಾನಗತಿಯ ಹೊರತಾಗಿಯೂ, ಜಾಗತಿಕ ಜನಸಂಖ್ಯೆಯು 2037 ರ ಸುಮಾರಿಗೆ 9 ಶತಕೋಟಿ ಮತ್ತು 2058 ರ ಸುಮಾರಿಗೆ 10 ಶತಕೋಟಿ ಮೀರುತ್ತದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Tue, 15 November 22