
ದೆಹಲಿ, ಜ.26: ಇಡೀ ದೇಶವೇ 77 ಗಣರಾಜ್ಯೋತ್ಸವವನ್ನು (Republic Day) ಅದ್ಧೂರಿಯನ್ನು ಆಚರಣೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಅವರು ಇಂದು ದೇಶದ ಜನರನ್ನದ್ದೇಶಿ ಮಾತನಾಡುತ್ತಿದ್ದಾರೆ. ಇದೀಗ ಇದಕ್ಕೂ ಮುನ್ನ ಅಂದರೆ ನೆನ್ನೆ (ಜ.25) ರಾಜಸ್ಥಾನದಲ್ಲಿ ಉಗ್ರರು ಸಂಚು ರೂಪಿಸಿರುವ ಅಘಾತಕಾರಿ ಸುದ್ದಿ ಬಹಿರಂಗವಾಗಿದೆ. ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಈ ಸಂಚು ವಿಫಲವಾಗಿದೆ. ರಾಜಸ್ಥಾನದ ನಾಗೌರ್ (Nagaur) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಕಾರ್ಯಚರಣೆ ಎಂದು ಹೇಳಲಾಗಿದೆ. ಸುಮಾರು 10,000 ಕೆಜಿ (9,550 ಕೆಜಿ ನಿಖರವಾಗಿ) ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೋನಿಯಂ ನೈಟ್ರೇಟ್‌ನೊಂದಿಗೆ ದೊಡ್ಡ ಪ್ರಮಾಣದ ಡೆಟೋನೇಟರ್‌ಗಳು, ಫ್ಯೂಸ್ ವೈರ್‌ಗಳು ಮತ್ತು ಇತರ ಸ್ಫೋಟಕ ಸಾಮಗ್ರಿಗಳನ್ನು ಹೊಂದಿದ್ದ 187 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಗೌರ್ ಜಿಲ್ಲೆಯ ಹರ್ಸೋರ್ (Harsore) ಗ್ರಾಮದ ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್‌ಹೌಸ್ ಮೇಲೆ ಜಿಲ್ಲಾ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ವೇಳೆ ಈ ಸ್ಫೋಟಕಗಳು ಸಿಕ್ಕಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೇಮಾನ್ ಖಾನ್ (50) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಹರ್ಸೋರ್ ಗ್ರಾಮದ ನಿವಾಸಿಯಾಗಿದ್ದು, ಇವನ ವಿರುದ್ಧ ಈಗಾಗಲೇ ಸ್ಫೋಟಕ ಕಾಯ್ದೆಯಡಿ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿಯು ಈ ಸ್ಫೋಟಕಗಳನ್ನು ಅಕ್ರಮ ಗಣಿಗಾರಿಕೆ ಉದ್ದೇಶಕ್ಕಾಗಿ ಪೂರೈಸಲು ಸಂಗ್ರಹಿಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಗಣರಾಜ್ಯೋತ್ಸವದ ಮುನ್ನಾದಿನ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕ ಸಿಕ್ಕಿರುವುದು ಭದ್ರತಾ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಕಳೆದ ವರ್ಷ (ನವೆಂಬರ್ 2025) ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದ ಮಾದರಿಯಲ್ಲೇ ಈ ಸ್ಫೋಟಕಗಳೂ ಇರುವುದರಿಂದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
🚨 BIG! Nagpur Police arrest Suleman Khan with 10,000 kg of AMMONIUM NITRATE. Officials also seize:
— Detonators
— Detonating wire
— Other blasting materials used in miningAuthorities call it one of the largest seizures under the Explosives Act in Raj🤯 pic.twitter.com/hJQsjh9vTS
— The Analyzer (News Updates🗞️) (@Indian_Analyzer) January 26, 2026
ಪ್ರಕರಣದ ಗಂಭೀರತೆ ಅರಿತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ಪ್ರಕರಣದ ಗಂಭೀರತೆ ಮತ್ತು ಸ್ಫೋಟಕಗಳ ಬೃಹತ್ ಪ್ರಮಾಣವನ್ನು ಗಮನಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಇಂಟೆಲಿಜೆನ್ಸ್ ಬ್ಯೂರೋ (IB) ಈಗಾಗಲೇ ತನಿಖೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿವೆ. ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದಲ್ಲಿ ಬಳಸಲಾಗಿದ್ದ ಅದೇ ಮಾದರಿಯ ಅಮೋನಿಯಂ ನೈಟ್ರೇಟ್ ಮತ್ತು ಡೆಟೋನೇಟರ್‌ಗಳು ಇಲ್ಲಿಯೂ ಸಿಕ್ಕಿರುವುದರಿಂದ, ಇವೆರಡಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ NIA ತನಿಖೆ ನಡೆಸುತ್ತಿದೆ. ಸ್ಫೋಟಕಗಳ ವಶದ ನಂತರ ದೇಶಾದ್ಯಂತ, ವಿಶೇಷವಾಗಿ ದೆಹಲಿ ಮತ್ತು ರಾಜಸ್ಥಾನದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಈತ ನಾಗೌರ್ ಜಿಲ್ಲೆಯ ಹರ್ಸೋರ್ (Harsore) ಗ್ರಾಮದ ನಿವಾಸಿಯಾಗಿದ್ದು, 58 ವರ್ಷ ವಯಸ್ಸಿನವನು. ಮೇಲ್ನೋಟಕ್ಕೆ ಈತ ಕೃಷಿ ಮತ್ತು ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ. ಈತನ ಮೇಲೆ ಈ ಹಿಂದೆ ಸ್ಫೋಟಕ ಕಾಯ್ದೆಯಡಿ (Explosives Act) ಮೂರು ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಈತ ಖುಲಾಸೆಗೊಂಡಿದ್ದರೂ, ಉಳಿದ ಪ್ರಕರಣಗಳು ಈತನಿಗೆ ಸ್ಫೋಟಕಗಳ ಅಕ್ರಮ ವ್ಯವಹಾರದಲ್ಲಿ ದೀರ್ಘಕಾಲದ ನಂಟು ಇರುವ ಬಗ್ಗೆ ಹೇಳಲಾಗಿದೆ. ಈ ಹಿಂದೆ ಈತನ ಬಳಿ ಅಧಿಕೃತ ಸ್ಫೋಟಕಗಳ ಪರವಾನಗಿ ಇತ್ತಾದರೂ, ನಿಗದಿಪಡಿಸಿದ ಸುರಕ್ಷಿತ ಕಟ್ಟಡದ ಬದಲು ಬೇರೆ ಕಡೆ (ತನ್ನ ಫಾರ್ಮ್‌ಹೌಸ್‌ನಲ್ಲಿ) ಸ್ಫೋಟಕಗಳನ್ನು ಸಂಗ್ರಹಿಸುವ ಮೂಲಕ ನಿಯಮಗಳನ್ನು ಗಾಳಿಕೆಗೆ ತೂರಿದ್ದನು.
ಇದನ್ನೂ ಓದಿ: ದೇಶದ ಇತಿಹಾಸದಲ್ಲೇ ದೊಡ್ಡ ಕಾರ್ಯಚರಣೆ: 5 ಮಹಿಳೆಯರು ಸೇರಿಸಿ 17 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಸ್ಫೋಟಕಗಳ ಬೃಹತ್ ಪ್ರಮಾಣವನ್ನು (10,000 ಕೆಜಿ) ಗಮನಿಸಿದ ಗೃಹ ಸಚಿವಾಲಯ, ಈ ಪ್ರಕರಣವನ್ನು ಸ್ಥಳೀಯ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವರ್ಗಾಯಿಸಲು ಸೂಚಿಸಿದೆ. ಕೇವಲ ಗಣಿಗಾರಿಕೆಯ ಉದ್ದೇಶಕ್ಕಾಗಿ ಇಷ್ಟು ದೊಡ್ಡ ಮೊತ್ತದ ಅಪಾಯಕಾರಿ ವಸ್ತುಗಳನ್ನು ಸಂಗ್ರಹಿಸಿಡುವುದು ಅಸಾಧ್ಯ ಎಂಬುದು ಸಚಿವಾಲಯದ ಅಭಿಪ್ರಾಯ. ಗಣರಾಜ್ಯೋತ್ಸವದ ಸಮಯದಲ್ಲಿ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಯಾವುದೇ ಸಂಚನ್ನು ಹತ್ತಿಕ್ಕಲು ಸಚಿವಾಲಯವು ಕಠಿಣ ಸೂಚನೆ ನೀಡಿದೆ. “ಇದು ಕೇವಲ ನಿಯಮ ಉಲ್ಲಂಘನೆಯಲ್ಲ, ಬದಲಿಗೆ ದೇಶದ ವಿರುದ್ಧದ ದೊಡ್ಡ ಸಂಚಿನ ಭಾಗವಾಗಿರಬಹುದು” ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸ್ಫೋಟಕಗಳು ಯಾವ ರಾಜ್ಯದಿಂದ ಪೂರೈಕೆಯಾದವು ಎಂಬುದನ್ನು ಪತ್ತೆಹಚ್ಚಲು ನೆರೆಯ ರಾಜ್ಯಗಳಾದ ಹರಿಯಾಣ, ಪಂಜಾಬ್ ಮತ್ತು ದೆಹಲಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಲು ಸಚಿವಾಲಯವು ನಿರ್ದೇಶನ ನೀಡಿದೆ. ಇದರ ಜತೆಗೆ ಕಳೆದ ವರ್ಷದ ಘಟನೆಗಳನ್ನು ಉಲ್ಲೇಖಿಸಿರುವ ಸಚಿವಾಲಯ, ಸ್ಫೋಟಕಗಳ ಅಕ್ರಮ ಚಲನವಲನದ ಮೇಲೆ ನಿಗಾ ಇಡಲು ‘ಎಕ್ಸ್‌ಪ್ಲೋಸಿವ್ಸ್ ಟ್ರ್ಯಾಕಿಂಗ್ ಸಿಸ್ಟಮ್’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯಗಳಿಗೆ ಸೂಚಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ