AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಇತಿಹಾಸದಲ್ಲೇ ದೊಡ್ಡ ಕಾರ್ಯಚರಣೆ: 5 ಮಹಿಳೆಯರು ಸೇರಿಸಿ 17 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಛತ್ತೀಸ್‌ಗಢದ ಅಬುಜ್‌ಮಡ್ ಅರಣ್ಯದಲ್ಲಿ ನಡೆದ 'ಆಪರೇಷನ್ ಮೇಘಬೂರು' ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 17 ನಕ್ಸಲರನ್ನು ಹತ್ಯೆ ಮಾಡಿವೆ. DRG, STF ಮತ್ತು CRPF ಪಡೆಗಳು ನಡೆಸಿದ ಈ ಜಂಟಿ ಕಾರ್ಯಾಚರಣೆ ನಕ್ಸಲ್ ಇತಿಹಾಸದಲ್ಲೇ ಅತಿ ದೊಡ್ಡದು. ಇದು ಬಸ್ಟರ್ ವಲಯದಲ್ಲಿ ನಕ್ಸಲ್ ನೆಟ್‌ವರ್ಕ್‌ಗೆ ದೊಡ್ಡ ಹೊಡೆತ ನೀಡಿದ್ದು, ಪ್ರಮುಖ ಕಮಾಂಡರ್‌ಗಳು ಹತರಾಗಿದ್ದಾರೆ.

ದೇಶದ ಇತಿಹಾಸದಲ್ಲೇ ದೊಡ್ಡ ಕಾರ್ಯಚರಣೆ: 5 ಮಹಿಳೆಯರು ಸೇರಿಸಿ 17 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 24, 2026 | 4:42 PM

Share

ಛತ್ತೀಸ್‌ಗಢ, ಜ.24: ನಾರಾಯಣಪುರ-ದಂತೇವಾಡ ಗಡಿಭಾಗದ ಅಬುಜ್‌ಮಡ್ (Abujhmad) ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಬಹುದೊಡ್ಡ ಕಾರ್ಯಚರಣೆಯನ್ನು ಮಾಡಿದೆ. ಇದು ‘ಆಪರೇಷನ್ ಮೇಘಬೂರು’ (Operation Meghburu)ನ ಭಾಗವಾಗಿದ್ದು, ಇದೀಗ ಈ ಮೂಲಕ ನಕ್ಸಲ್ ನಿಗ್ರಹ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಒಟ್ಟು 17 ನಕ್ಸಲರನ್ನು ಹೊಡೆದುರುಳಿಸಿವೆ. ಇದರಲ್ಲಿ 5 ಮಂದಿ ಮಹಿಳಾ ನಕ್ಸಲರು ಸೇರಿದ್ದಾರೆ ಎಂದು ಹೇಳಲಾಗಿದೆ. ಡಿಆರ್‌ಜಿ (DRG), ಎಸ್‌ಟಿಎಫ್ (STF) ಮತ್ತು ಸಿಆರ್‌ಪಿಎಫ್ (CRPF) ನ ಕೋಬ್ರಾ ಘಟಕದ ಸುಮಾರು 1,500 ಕ್ಕೂ ಹೆಚ್ಚು ಜವಾನರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ದಟ್ಟವಾದ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ ಅಬುಜ್‌ಮಡ್ ಪ್ರದೇಶ. ಇದು ನಕ್ಸಲರ ಪ್ರಮುಖ ತರಬೇತಿ ಕೇಂದ್ರ ಮತ್ತು ಅಡಗುತಾಣವಾಗಿದೆ.

ಈ ಎನ್​​​ಕೌಂಟರ್​​ ನಡೆದ ಸ್ಥಳದಲ್ಲಿ ಎಕೆ-47 ರೈಫಲ್‌ಗಳು, ಎಸ್‌ಎಲ್‌ಆರ್ (SLR) ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ನಕ್ಸಲ್ ಬರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟ ನಕ್ಸಲರಲ್ಲಿ ಹಲವರು ಲಕ್ಷಾಂತರ ರೂಪಾಯಿ ಬಹುಮಾನ ಹೊಂದಿದ್ದ ಕುಖ್ಯಾತ ಕಮಾಂಡರ್‌ಗಳಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಟ್ಟ ಅರಣ್ಯದಲ್ಲಿ ನಕ್ಸಲರ ಚಲನವಲನ ಪತ್ತೆಹಚ್ಚಲು ಡ್ರೋನ್ ಮತ್ತು ಸುಧಾರಿತ ಸ್ಯಾಟಲೈಟ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಕಾರ್ಯಾಚರಣೆಯು ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ನಕ್ಸಲರ ನೆಟ್‌ವರ್ಕ್‌ಗೆ ದೊಡ್ಡ ಹೊಡೆತ ನೀಡಿದೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಸರಣಿ ಕಾರ್ಯಾಚರಣೆಗಳಲ್ಲಿ ಇದು ಅತಿ ಹೆಚ್ಚು ನಕ್ಸಲರು ಮೃತಪಟ್ಟ ಘಟನೆಯಾಗಿದೆ. ಸರ್ಕಾರವು “ನಕ್ಸಲ್ ಮುಕ್ತ ಭಾರತ” ಗುರಿಯೊಂದಿಗೆ ಇಂತಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದು, ನಕ್ಸಲರಿಗೆ ಶರಣಾಗಲು ಅವಕಾಶವನ್ನು ಕೂಡ ನೀಡಿದೆ.

ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಕಾಂಗ್ರೆಸ್​​​​​ ನಿಯಮವನ್ನು ಉಲ್ಲಂಘಿಸಿಲ್ಲ: ಈ ವಿಚಾರದಲ್ಲಿ ಕೇಂದ್ರವನ್ನು ಬೆಂಬಲಿಸುವೆ ಎಂದ ಶಶಿ ತರೂರ್

ಮೃತಪಟ್ಟ ಪ್ರಮುಖ ನಕ್ಸಲ್ ಕಮಾಂಡರ್‌ಗಳು:

ರಾಮ್‌ಲಾಲ್ (DVC ಸದಸ್ಯ): ಇವನು ದಂತೇವಾಡ-ನಾರಾಯಣಪುರ ಡಿವಿಜನಲ್ ಕಮಿಟಿಯ ಪ್ರಭಾವಿ ನಾಯಕನಾಗಿದ್ದು, ಇವನ ಹತ್ಯೆಗೆ 8 ಲಕ್ಷ ರೂ. ಬಹುಮಾನವಿತ್ತು. ಹಲವು ಐಇಡಿ (IED) ಸ್ಫೋಟಗಳ ಮಾಸ್ಟರ್ ಮೈಂಡ್

ಸುಮತಿ (ಮಹಿಳಾ ಕಮಾಂಡರ್): ಐವರು ಮೃತ ಮಹಿಳೆಯರಲ್ಲಿ ಈಕೆ ಪ್ರಮುಖಳು. ಈಕೆ ನಕ್ಸಲರ ಮಹಿಳಾ ಘಟಕದ ತರಬೇತಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದಳು. ಈಕೆಯ ಹತ್ಯೆಗೆ 5 ಲಕ್ಷ ರೂ. ಬಹುಮಾನವಿತ್ತು.

ಸುಮತಿ (ಮಹಿಳಾ ಕಮಾಂಡರ್): ಐವರು ಮೃತ ಮಹಿಳೆಯರಲ್ಲಿ ಈಕೆ ಪ್ರಮುಖಳು. ಈಕೆ ನಕ್ಸಲರ ಮಹಿಳಾ ಘಟಕದ ತರಬೇತಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದಳು. ಈಕೆಯ ಮೇಲೆ 5 ಲಕ್ಷ ರೂ. ಬಹುಮಾನವಿತ್ತು.

ಸುರೇಶ್ ಬೋಗಾಮಿ: ಬಸ್ತಾರ್ ವಲಯದ ಪ್ರಮುಖ ಸದಸ್ಯ. ಭದ್ರತಾ ಪಡೆಗಳ ಮೇಲಿನ ಅನಿರೀಕ್ಷಿತ ದಾಳಿಗಳನ್ನು ಸಂಘಟಿಸುವುದರಲ್ಲಿ ಇವನು ನಿಸ್ಸೀಮನಾಗಿದ್ದನು.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಜವಾನರ ಹೆಲ್ಮೆಟ್ ಕ್ಯಾಮೆರಾಗಳಲ್ಲಿ (Bodycam) ಸೆರೆಯಾದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದರಲ್ಲಿ ಭೀಕರ ಗುಂಡಿನ ಚಕಮಕಿ ಮತ್ತು ಜವಾನರು ಶತ್ರುಗಳನ್ನು ಸುತ್ತುವರೆಯುವ ತಂತ್ರಗಾರಿಕೆಯನ್ನು ಕಾಣಬಹುದು.ನಕ್ಸಲರು ಅಡಗಿದ್ದ ಬಂಕರ್‌ಗಳನ್ನು ಡ್ರೋನ್ ಮೂಲಕ ಪತ್ತೆಹಚ್ಚಿ ಲೇಸರ್ ಸಹಾಯದಿಂದ ದಾಳಿ ಮಾಡಿರುವುದನ್ನು ವಿಡಿಯೋ ತುಣುಕುಗಳು ತೋರಿಸುತ್ತವೆ. ಕಾರ್ಯಾಚರಣೆ ಮುಗಿಸಿ ಹಿಂತಿರುಗಿದ ಜವಾನರನ್ನು ಸ್ಥಳೀಯ ಗ್ರಾಮಸ್ಥರು ಹೂಮಳೆ ಸುರಿಸುವ ಮೂಲಕ ಬರಮಾಡಿಕೊಂಡ ದೃಶ್ಯಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ