ದೇಶದ ಮತದಾರರಿಗೆ ಪ್ರಧಾನಿ ಮೋದಿ ಪತ್ರ: ಮತದಾರರಾಗುವ ಕ್ಷಣವನ್ನ ಸಂಭ್ರಮಿಸುವಂತೆ ಯುವಜನತೆಗೆ ಕರೆ
National Voters' Day: ರಾಷ್ಟ್ರೀಯ ಮತದಾರರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈ-ಭಾರತ್ ಸ್ವಯಂಸೇವಕರಿಗೆ ಹಾಗೂ ಯುವಜನತೆಗೆ ಪತ್ರ ಬರೆದಿದ್ದಾರೆ. ಮತದಾನದ ಹಕ್ಕು ಮತ್ತು ಹೊಣೆಗಾರಿಕೆ ಬಗ್ಗೆ ಪ್ರಧಾನಿ ಮೋದಿ ಒತ್ತಿ ಹೇಳಿದ್ದು, ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರದ ಮಹತ್ವ ತಿಳಿಸಿಕೊಟ್ಟಿದ್ದಾರೆ.

ದೆಹಲಿ, ಜನವರಿ 25: ರಾಷ್ಟ್ರೀಯ ಮತದಾರರ ದಿನದ (National Voters’ Day) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ನಾನಾ ಭಾಗಗಳಲ್ಲಿರುವ ಮೈ-ಭಾರತ್ ಸ್ವಯಂಸೇವಕರು ಹಾಗೂ ಯುವಜನತೆಗೆ ಪತ್ರ ಬರೆದಿದ್ದಾರೆ. ಮತದಾರರಾಗುವ ಕ್ಷಣವನ್ನು ಹಾಗೂ ತಮ್ಮ ಸುತ್ತಮುತ್ತಲಿನವರು ಮತದಾರರಾಗುವ ಸಂದರ್ಭವನ್ನು ಸಂಭ್ರಮದಿಂದ ಆಚರಿಸಬೇಕೆಂದು ಯುವಜನತೆಗೆ ಕರೆ ನೀಡಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮತದಾರರಾಗಿರುವುದು ಅತ್ಯಂತ ಮಹತ್ವದ ಹಕ್ಕು ಮತ್ತು ದೊಡ್ಡ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ಒತ್ತಿ ಹೇಳಿದ್ದಾರೆ. ಜೊತೆಗೆ, ವಿದ್ಯಾರ್ಥಿಗಳು ಮತದಾರರಾಗುವ ಕ್ಷಣವನ್ನು ಶಿಕ್ಷಣ ಸಂಸ್ಥೆಗಳು ವಿಶೇಷವಾಗಿ ಆಚರಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಬರೆದ ಪತ್ರದಲ್ಲೇನಿದೆ?
ಪ್ರಿಯ ನಾಗರಿಕರೇ. ರಾಷ್ಟ್ರೀಯ ಮತದಾರರ ದಿನದಂದು ನಿಮಗೆ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಶುಭಾಶಯಗಳು. ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಅಪಾರ ಹೆಮ್ಮೆಪಡುವ ಸಹ ನಾಗರಿಕನಾಗಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನನಗೆ ಸಂತೋಷವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್
Becoming a voter is an occasion of celebration!
Today, on #NationalVotersDay, penned a letter to MY-Bharat volunteers on how we all must rejoice when someone around us has enrolled as a voter. pic.twitter.com/zDBfNqQ6S2
— Narendra Modi (@narendramodi) January 25, 2026
ಭಾರತವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಕರೆಯಲಾಗುತ್ತದೆ ಮತ್ತು ಅದು ಸತ್ಯವೂ ಹೌದು. ಅದೇ ಸಮಯದಲ್ಲಿ, ಶತಮಾನಗಳ ಇತಿಹಾಸ ಹೊಂದಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲಕ ಭಾರತವನ್ನು ‘ಪ್ರಜಾಪ್ರಭುತ್ವದ ತಾಯಿ’ ಎಂದು ಕರೆಯುವ ಹೆಮ್ಮೆಯೂ ನಮಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ, ವಾದ–ವಿವಾದ ಮತ್ತು ಸಂವಾದಗಳು ನಮ್ಮ ನಾಗರಿಕತೆಯಲ್ಲೇ ಆಳವಾಗಿ ಬೆರೆತಿವೆ.
ಇದನ್ನೂ ಓದಿ: ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರ ಗುಡ್ ನ್ಯೂಸ್: ವೇತನ ಪರಿಷ್ಕರಣೆಗೆ ಅಸ್ತು
1951ರಲ್ಲಿ ಆರಂಭಗೊಂಡ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ 75 ವರ್ಷಗಳನ್ನು ಈ ವರ್ಷ ಸ್ಮರಿಸಲಾಗುತ್ತಿದೆ. 1952ರಲ್ಲಿ ಪೂರ್ಣಗೊಂಡ ಈ ಚುನಾವಣೆ, ಭಾರತದ ಜನರಲ್ಲಿ ಅಡಗಿರುವ ಪ್ರಜಾಪ್ರಭುತ್ವ ಮನೋಭಾವವನ್ನು ಸ್ಪಷ್ಟವಾಗಿ ತೋರಿಸಿತ್ತು.
ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮತದಾರರಾಗಿರುವುದು ಅತ್ಯಂತ ದೊಡ್ಡ ಹಕ್ಕು ಹಾಗೂ ಮಹತ್ತರ ಹೊಣೆಗಾರಿಕೆಯಾಗಿದೆ. ಮತದಾನವು ಪವಿತ್ರ ಸಂವಿಧಾನಾತ್ಮಕ ಹಕ್ಕಾಗಿದ್ದು, ಭಾರತದ ಭವಿಷ್ಯ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಸಂಕೇತವಾಗಿದೆ. ಅಭಿವೃದ್ಧಿಯ ಪಯಣದಲ್ಲಿ ಮತದಾರರೇ ನಮ್ಮ ಭಾಗ್ಯ ವಿಧಾತ. ಮತದಾನದ ವೇಳೆ ಬೆರಳಿಗೆ ಹಾಕಲಾಗುವ ಮಸಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಜೀವಂತತೆ ಹಾಗೂ ಉದ್ದೇಶಪೂರ್ಣತೆಯನ್ನು ಕಾಯ್ದುಕೊಳ್ಳುವ ಗೌರವದ ಗುರುತಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
