Narada case: ಮಮತಾ ಬ್ಯಾನರ್ಜಿ ಸಲ್ಲಿಸಿದ ಮನವಿ ಆಲಿಸಲು ನಿರಾಕರಿಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಅನಿರುದ್ಧ ಬೋಸ್

| Updated By: ರಶ್ಮಿ ಕಲ್ಲಕಟ್ಟ

Updated on: Jun 22, 2021 | 1:29 PM

Mamata Banerjee: ನಾರದ ಲಂಚ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅರ್ಜಿ ಆಲಿಸಲು  ಹಿಂದೆ ಸರಿದ ಕೋಲ್ಕತ್ತಾದ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರು ಇಂದು  ನಾನು ಈ ಪ್ರಕರಣವನ್ನು ಆಲಿಸುವುದಿಲ್ಲ ಎಂದು ಹೇಳಿದ್ದಾರೆ

Narada case: ಮಮತಾ ಬ್ಯಾನರ್ಜಿ ಸಲ್ಲಿಸಿದ ಮನವಿ ಆಲಿಸಲು ನಿರಾಕರಿಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಅನಿರುದ್ಧ ಬೋಸ್
ಮಮತಾ ಬ್ಯಾನರ್ಜಿ
Follow us on

ದೆಹಲಿ: ನಾರದ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಸಿಬಿಐ ನಾಲ್ಕು ಟಿಎಂಸಿ ನಾಯಕರನ್ನು ಬಂಧಿಸಿದ ದಿನದಂದು ತಮ್ಮ ಪಾತ್ರದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಕಾನೂನು ಸಚಿವ ಮೊಲೊಯ್ ಘಾಟಕ್ ಅವರ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅನಿರುದ್ಧ ಬೋಸ್ ನಿರಾಕರಿಸಿದ್ದಾರೆ.

ನಾರದ ಲಂಚ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅರ್ಜಿ ಆಲಿಸಲು  ಹಿಂದೆ ಸರಿದ ಕೋಲ್ಕತ್ತಾದ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರು ಇಂದು (ಮಂಗಳವಾರ) ನಾನು ಈ ಪ್ರಕರಣವನ್ನು ಆಲಿಸುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ನ್ಯಾಯಾಧೀಶರಾದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ನಂತರ ಪ್ರಕರಣವನ್ನು ಮತ್ತೊಂದು ನ್ಯಾಯಪೀಠದ ಮುಂದೆ ದಾಖಲಿಸುವಂತೆ ಕೇಳಿದರು. ನ್ಯಾಯಮೂರ್ತಿ ವಿನೀತ್ ಸರನ್ ನೇತೃತ್ವದ ನ್ಯಾಯಪೀಠ ಇಂದು ಮಮತಾ ಬ್ಯಾನರ್ಜಿ ಅವರ ಮನವಿಯನ್ನು ಆಲಿಸಲಿದೆ.

ಈ ಹಿಂದೆ ಕೋಲ್ಕತ್ತಾದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಮೇ 2 ರ ರಾಜ್ಯ ಚುನಾವಣಾ ತೀರ್ಪಿನ ನಂತರ ಬಂಗಾಳದ ಕೆಲವು ಭಾಗಗಳಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಿಂದ ಹೊರಗುಳಿದಿದ್ದರು, ಅದು ಮಮತಾ ಬ್ಯಾನರ್ಜಿಗೆ ಭಾರಿ ಜಯವನ್ನು ನೀಡಿತ್ತು.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಬೋಸ್‌ ಅವರ ರಜಾ ಪೀಠವು ದಿನದ ವಿಚಾರಣೆಯನ್ನು ಪ್ರಾರಂಭಿಸಲು ಸೇರಿದಾಗ ನ್ಯಾಯಮೂರ್ತಿ ಗುಪ್ತಾ ಅವರು ನ್ಯಾಯಾಧೀಶ ಬೋಸ್ ಈ ಮನವಿಯನ್ನು ಆಲಿಸಲು ನಿರಾಕರಿಸಿರುವುದಾಗಿ ಹೇಳಿದ್ದಾರೆ.

ನ್ಯಾಯಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಗುಪ್ತಾ, ಈ ವಿಷಯವನ್ನು ಈಗ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರ ಮುಂದೆ ಇಡಲಾಗುವುದು. ಅವರು ನಿರ್ಧಾರ ತೆಗೆದುಕೊಳ್ಳಬಹುದು ಮತ್ತು ಮನವಿಯನ್ನು ಇಂದೇ ವಿಚಾರಣೆಗೆ ಪರಿಗಣಿಸಲ್ಪಡಬಹುದು ಎಂದಿದ್ದಾರೆ.

ಮೇ 17 ರಂದು ನಾಲ್ವರು ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಸಿಬಿಐ ಬಂಧಿಸಿದ ದಿನದಂದು ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಕಾನೂನು ಸಚಿವರ ಪಾತ್ರದ ಬಗ್ಗೆ ಅಫಿಡವಿಟ್ ಸಲ್ಲಿಸಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಮೇಲ್ಮನವಿ ಸೇರಿದಂತೆ ಮೂರು ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ಆಲಿಸಬೇಕಿದೆ.

ಈ ಪ್ರಕರಣದಲ್ಲಿ ನಾಲ್ವರು ನಾಯಕರನ್ನು ಬಂಧಿಸಿದ ನಂತರ ಸಿಬಿಐ ತನ್ನ ಕಾನೂನು ಕರ್ತವ್ಯ ನಿರ್ವಹಿಸುವುದನ್ನು ತಡೆಯುವಲ್ಲಿ ರಾಜ್ಯ ಆಡಳಿತ ಪಕ್ಷದ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿತ್ತು.

ಇದನ್ನೂ ಓದಿ:  Narada case: ಕಲ್ಕತ್ತಾ ಹೈಕೋರ್ಟ್​ನಿಂದ ಟಿಎಂಸಿ ನಾಯಕರಿಗೆ ಮಧ್ಯಂತರ ಜಾಮೀನು

ಇದನ್ನೂ ಓದಿ:  ಸುವೇಂದು ಅಧಿಕಾರಿ ಗೆಲುವಿನ ವಿರುದ್ಧ ಮಮತಾ ಬ್ಯಾನರ್ಜಿ ಕಾನೂನು ಹೋರಾಟ; ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ಮೇಲೆ ಡೌಟ್​

(Narada case Supreme Court judge Justice Aniruddha Bose recused himself from hearing appeals of West Bengal CM Mamata Banerjee)