ಬತ್ನಾಹಾ-ನೇಪಾಳ ರೈಲಿಗೆ ಜಂಟಿಯಾಗಿ ಚಾಲನೆ ನೀಡಿದ ಪ್ರಧಾನಿ ಮೋದಿ, ನೇಪಾಳದ ಪಿಎಂ ಪುಷ್ಪ ಕಮಲ್ ದಹಲ್ ಪ್ರಚಂಡ
ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಜಂಟಿಯಾಗಿ ರೈಲ್ವೆಯ ಕುರ್ತಾ-ಬಿಜಾಲ್‌ಪುರ ವಿಭಾಗದ ಇ-ಫಲಕವನ್ನು ಅನಾವರಣಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಭಾರತದ ಪ್ರವಾಸದಲ್ಲಿರುವ ನೇಪಾಳದ (Nepal) ಪ್ರಧಾನಿ ಪುಷ್ಪಕಮಲ್ ದಹಲ್ ‘ಪ್ರಚಂಡ’ (Pushpa Kamal Dahal ‘Prachanda’ )ಅವರು ಗುರುವಾರ ಇಂಧನ, ಸಂಪರ್ಕ ಮತ್ತು ವ್ಯಾಪಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತ-ನೇಪಾಳ ಸಹಕಾರವನ್ನು ಹೆಚ್ಚಿಸುವ ಕುರಿತು ಮಾತುಕತೆ ನಡೆಸಿದರು. ನೇಪಾಳದ ಪ್ರಧಾನಿ ಬುಧವಾರ ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ದೆಹಲಿ ತಲುಪಿದ್ದಾರೆ. ಇಂದು (ಗುರುವಾರ) ಮೋದಿ ಮತ್ತು ಪುಷ್ಪ ಕಮಲ್ ದಹಲ್ ಪ್ರಚಂಡ ಜಂಟಿಯಾಗಿ ರೈಲ್ವೆಯ ಕುರ್ತಾ-ಬಿಜಾಲ್‌ಪುರ ವಿಭಾಗದ ಇ-ಫಲಕವನ್ನು ಅನಾವರಣಗೊಳಿಸಿದ್ದಾರೆ. ಇಬ್ಬರು ಪ್ರಧಾನ ಮಂತ್ರಿಗಳು ಜಂಟಿಯಾಗಿ ಬತ್ನಾಹಾದಿಂದ ನೇಪಾಳ ಕಸ್ಟಮ್ ಯಾರ್ಡ್‌ಗೆ ಭಾರತೀಯ ರೈಲ್ವೆ ಕಾರ್ಗೋ ರೈಲಿಗೆ ಚಾಲನೆ ನೀಡಿದ್ದಾರೆ.
#WATCH | Prime Minister Narendra Modi and Nepal Prime Minister Pushpa Kamal Dahal ‘Prachanda’ jointly unveil the e-plaque of the Kurtha-Bijalpura section of the Railway. Both the Prime Ministers jointly flag off the Indian Railway cargo train from Bathnaha to Nepal Custom yard. pic.twitter.com/gBm62Uk26o
— ANI (@ANI) June 1, 2023
68ರ ಹರೆಯದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಮಾವೋವಾದಿ (ಸಿಪಿಎನ್-ಮಾವೋವಾದಿ) ನಾಯಕ ಅವರು ಡಿಸೆಂಬರ್ 2022 ರಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ನಂತರ ಇದು ಮೊದಲ ದ್ವಿಪಕ್ಷೀಯ ವಿದೇಶ ಪ್ರವಾಸವಾಗಿದೆ. ಭಾರತ ಮತ್ತು ನೇಪಾಳ ನಡುವಿನ ನಾಗರಿಕ ಸಂಬಂಧಗಳನ್ನು ಸಹಕಾರದೊಂದಿಗೆ ಪರಿವರ್ತಿಸುವುದು, ಸಂಪರ್ಕ, ಆರ್ಥಿಕತೆ, ಇಂಧನ ಮತ್ತು ಮೂಲಸೌಕರ್ಯವು ಮೋದಿ ಮತ್ತು ಪ್ರಚಂಡ ನಡುವಿನ ಮಾತುಕತೆಯ ಅಜೆಂಡಾ ಆಗಿದೆ ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ.
ಈ ಪ್ರದೇಶದಲ್ಲಿನ ತನ್ನ ಒಟ್ಟಾರೆ ಕಾರ್ಯತಂತ್ರದ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ನೇಪಾಳವು ಭಾರತಕ್ಕೆ ಮುಖ್ಯವಾಗಿದೆ. ಉಭಯ ದೇಶಗಳ ನಾಯಕರು ಎರಡು ದೇಶಗಳ ಜನರ ನಡುವಿನ ಗಡಿಯಾಚೆಗಿನ ವಿವಾಹ ಸಂಬಂಧಗಳನ್ನು ಉಲ್ಲೇಖಿಸುವ ಹಳೆಯ “ರೋಟಿ-ಬೇಟಿ” ಸಂಬಂಧವನ್ನು ಹೆಚ್ಚಾಗಿ ಗಮನಿಸಿದ್ದಾರೆ. ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ – ಐದು ಭಾರತೀಯ ರಾಜ್ಯಗಳೊಂದಿಗೆ ನೇಪಾಳ 1,850 ಕಿಮೀ ಗಡಿಯನ್ನು ಹಂಚಿಕೊಂಡಿದೆ.
ಭೂ ಆವೃತವಾಗಿರುವ ನೇಪಾಳವು ಸರಕು ಮತ್ತು ಸೇವೆಗಳ ಸಾಗಣೆಗಾಗಿ ಭಾರತವನ್ನು ಹೆಚ್ಚು ಅವಲಂಬಿಸಿದೆ. ನೇಪಾಳವು ಸಮುದ್ರಕ್ಕೆ ಭಾರತದ ಮೂಲಕ ಪ್ರವೇಶವನ್ನು ಹೊಂದಿದೆ. ಇದು ಭಾರತದಿಂದ ಮತ್ತು ಅದರ ಮೂಲಕ ತನ್ನ ಅಗತ್ಯತ ವಸ್ತುಗಳ ಪ್ರಧಾನ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತದೆ.
ಇದನ್ನೂ ಓದಿ: ಗುರುನಾನಕ್ ಥಾಯ್ಲೆಂಡ್‌ಗೆ ಹೋಗಿದ್ದರು ಎಂದ ರಾಹುಲ್; ಇದೆಲ್ಲ ಎಲ್ಲಿ ಓದಿದ್ದು? ಎಂದು ಕೇಳಿದ ಬಿಜೆಪಿ
1950 ರ ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದವು ಎರಡು ದೇಶಗಳ ನಡುವಿನ ವಿಶೇಷ ಸಂಬಂಧಗಳ ತಳಹದಿಯನ್ನು ರೂಪಿಸುತ್ತದೆ. ಪ್ರಚಂಡ ಅವರ ನಿಯೋಗದ ಭಾಗವಾಗಿರುವ ನೇಪಾಳದ ವಿದೇಶಾಂಗ ಸಚಿವ ಎನ್‌ಪಿ ಸೌದ್ ಅವರು ವ್ಯಾಪಾರ, ಸಾರಿಗೆ, ಸಂಪರ್ಕ ಮತ್ತು ಗಡಿ ಸಮಸ್ಯೆಗಳು ಸೇರಿದಂತೆ ಹಲವಾರು ವಿಷಯಗಳು ದ್ವಿಪಕ್ಷೀಯ ಮಾತುಕತೆಗಳಲ್ಲಿ ಕಂಡುಬರುತ್ತವೆ ಎಂದು ಬುಧವಾರ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Thu, 1 June 23