PM Modi in Rajasthan: ಪುಷ್ಕರ್ ಬ್ರಹ್ಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಬುಧವಾರ ರಾಜಸ್ಥಾನಕ್ಕೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಪುಷ್ಕರ್ ನಲ್ಲಿರುವ ಬ್ರಹ್ಮ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಜ್ಮೀರ್‌ಗೆ ತೆರಳಿ ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

PM Modi in Rajasthan: ಪುಷ್ಕರ್ ಬ್ರಹ್ಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಬ್ರಹ್ಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ಮೋದಿ
Follow us
|

Updated on:May 31, 2023 | 5:10 PM

ಪುಷ್ಕರ್: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ರಾಜಸ್ಥಾನಕ್ಕೆ (Rajasthan) ತಲುಪಿದ್ದು, ಪುಷ್ಕರ್‌ನಲ್ಲಿರುವ ಬ್ರಹ್ಮ ದೇವಾಲಯದಲ್ಲಿ (Brahma temple )ಪ್ರಾರ್ಥನೆ ಸಲ್ಲಿಸಿದ್ದಾರೆ.  ಪುಷ್ಕರ್ ಬಳಿಕ ಅಜ್ಮೇರ್‌ಗೆ ತೆರಳಿ ಅಲ್ಲಿ ಮೋದಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಬ್ರಹ್ಮ ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ. ಪ್ರಧಾನಿಯವರು ಸಾರ್ವಜನಿಕ ರ್ಯಾಲಿಗಾಗಿ ಹೆಲಿಕಾಪ್ಟರ್‌ನಲ್ಲಿ ಜೈಪುರ ರಸ್ತೆಯಲ್ಲಿರುವ ಕಯಾದ್ ವಿಶ್ರಮ್ ಸ್ಥಲಿಗೆ ಪ್ರಯಾಣಿಸಲಿದ್ದಾರೆ. ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಕೈಲಾಶ್ ಚೌಧರಿ ಮತ್ತು ರಾಜಸ್ಥಾನದ ಇತರ ಬಿಜೆಪಿ ನಾಯಕರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿಯವರು  ಬಿಜೆಪಿಯ ತಿಂಗಳ ಅವಧಿಯ ಪ್ಯಾನ್-ಇಂಡಿಯಾ ಪ್ರಚಾರ ಕಾರ್ಯಕ್ರಮ, ‘ಮಹಾ ಜನಸಂಪರ್ಕ್’ ಗೆ ಇಲ್ಲಿ ಚಾಲನೆ ನೀಡಲಿದ್ದಾರೆ.

ಇದರ ಭಾಗವಾಗಿ 51 ಕ್ಕೂ ಹೆಚ್ಚು ಬೃಹತ್ ರ್ಯಾಲಿಗಳು, 500 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು 500 ಕ್ಕೂ ಹೆಚ್ಚು ಲೋಕಸಭೆ ಮತ್ತು 4000 ವಿಧಾನಸಭಾ ಕ್ಷೇತ್ರಗಳಲ್ಲಿ 600 ಕ್ಕೂ ಹೆಚ್ಚು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು. 5 ಲಕ್ಷಕ್ಕೂ ಹೆಚ್ಚು ಪ್ರತಿಷ್ಠಿತ ಕುಟುಂಬಗಳನ್ನು ಸಂಪರ್ಕಿಸಲಾಗುವುದು.

ಇದನ್ನೂ ಓದಿMaha Jansampark: ಇಂದಿನಿಂದ 1 ತಿಂಗಳ ಕಾಲ ಬಿಜೆಪಿಯಿಂದ ‘ಮಹಾ ಜನಸಂಪರ್ಕ’ ಅಭಿಯಾನ, ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಚಾಲನೆ

ಎಲ್ಲಾ 543 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಗುರಿಯನ್ನು ಈ ಪ್ರಚಾರ ಅಭಿಯಾನ ಹೊಂದಿದೆ. ಮೇ 31 ರಿಂದ ಜೂನ್ 30ರವರೆಗೆ ಮಹಾ ಜನ ಸಂಪರ್ಕ ಅಭಿಯಾನದಡಿ ದೇಶಾದ್ಯಂತ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಬಿಜೆಪಿ ಇತಿಹಾಸದಲ್ಲಿಯೇ ಅತಿ ದೊಡ್ಡ ಕಾರ್ಯಕ್ರಮ ಇದಾಗಿದ್ದು, ಅದರ ವಿವರಗಳನ್ನು ಬಿಜೆಪಿ ಹಂಚಿಕೊಂಡಿದೆ. ಒಟ್ಟು 288 ಬಿಜೆಪಿ ನಾಯಕರು ಮತ್ತು 16 ಲಕ್ಷ ಪಕ್ಷದ ಕಾರ್ಯಕರ್ತರ ಹತ್ತು ಲಕ್ಷ ಬೂತ್​ಗಳಲ್ಲಿ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಮತ್ತು ಕೇಂದ್ರದಲ್ಲಿ ಪಕ್ಷದ 9 ವರ್ಷಗಳ ಆಡಳಿತದಲ್ಲಿನ ಸಾಧನೆಗಳ ಸಂದೇಶವನ್ನು ರವಾನಿಸಲು ಎಲ್ಲಾ ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ 144 ಕ್ಲಸ್ಟರ್​ಗಳನ್ನು ಸ್ಥಾಪನೆ ಮಾಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Wed, 31 May 23