ಜನರು ಇಂದಿರಾಜೀ ಅವರನ್ನು ಕ್ಷಮಿಸಿಲ್ಲ, ಮೋದಿಯವರನ್ನೂ ಕ್ಷಮಿಸಲಾರರು: ಮಮತಾ ಬ್ಯಾನರ್ಜಿ

Mamata Banerjee ಈಗ ರದ್ದಾದ ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಜನರು ಮೋದಿಯನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.

ಜನರು ಇಂದಿರಾಜೀ ಅವರನ್ನು ಕ್ಷಮಿಸಿಲ್ಲ, ಮೋದಿಯವರನ್ನೂ ಕ್ಷಮಿಸಲಾರರು: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 02, 2021 | 6:39 PM

ಮುಂಬೈ: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು ರಾಷ್ಟ್ರೀಯ  ವೇದಿಕೆಯನ್ನು ನಿರ್ಮಿಸುವಲ್ಲಿ ಮುಂಬೈನಲ್ಲಿ ನಿರತರಾಗಿದ್ದಾರೆ. ಈಗ ರದ್ದಾದ ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಅವರು ಜನರು ಮೋದಿಯನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.  ಬಿಜೆಪಿಯ ವಿರೋಧ ಪಕ್ಷವಾಗಿ ಪ್ರಮುಖ ಸ್ಥಾನಗಳಿಸುವ ಉದ್ದೇಶದಿಂದ ಕಾಂಗ್ರಸ್ ವಿರುದ್ಧವೂ ವಾಗ್ದಾಳಿ ನಡೆಸುತ್ತಿರುವ ಮಮತಾ, ಶಾರುಖ್ ಖಾನ್ ಅವರ ಮಗ ಆರ್ಯನ್ ಒಳಗೊಂಡ ಡ್ರಗ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು ಬಿಜೆಪಿ “ಕ್ರೂರ ಮತ್ತು ಪ್ರಜಾಪ್ರಭುತ್ವ ವಿರೋಧಿ ಪಕ್ಷ” ಎಂದಿದ್ದಾರೆ. “ಇಂದಿರಾ ಜೀ ಅತ್ಯಂತ ಶಕ್ತಿಶಾಲಿ ನಾಯಕಿಯಾಗಿದ್ದರು, ಆದರೆ ಸಂದೇಶ ತಲುಪಿತು – ‘ತುರ್ತು, ತುರ್ತು, ತುರ್ತು ‘. ಅವರು 1977 ರಲ್ಲಿ ಕ್ಷಮೆಯಾಚಿಸಿದರು ಆದರೆ ಜನರು ಅವರನ್ನು ಕ್ಷಮಿಸಲಿಲ್ಲ. ನಮ್ಮ ಪ್ರಧಾನಿ ರೈತರಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ ಸಂದೇಶ ಈಗಾಗಲೇ ತಲುಪಿದೆ, ಆದ್ದರಿಂದ ಅವರನ್ನೂ ಜನರು ಕ್ಷಮಿಸುವುದಿಲ್ಲ ಎಂದು ಮಮತಾ ಹೇಳಿದ್ದಾರೆ.  “ಇಂದು ಅವರು ಚರ್ಚೆಯಿಲ್ಲದೆ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದಾರೆ. ಆದರೆ ಅವರು ಕೃಷಿ ಕಾನೂನುಗಳನ್ನು ರದ್ದು ಗೊಳಿಸಲು ಉತ್ತರ ಪ್ರದೇಶ ಚುನಾವಣೆಯೇ ಕಾರಣ. ಅದು ಎಲ್ಲರಿಗೂ ತಿಳಿದಿದೆ. ಅವರೂ ಭಯಪಡುತ್ತಾರೆ. ಅವರು (ಬಿಜೆಪಿ) ತುಂಬಾ ಸುರಕ್ಷಿತವಾಗಿದ್ದಾರೆ ಎಂದು ಭಾವಿಸಬೇಡಿ. ದೇಶವನ್ನು ಉಳಿಸಬೇಕು, ಚಿಂತಿಸಬೇಡಿ, ಎಲ್ಲವೂ ಸರಿಹೋಗಲಿದೆ ಎಂದು ಅವರು ಹೇಳಿದರು. ಈ ವಾರ ಸಂಸತ್ ಹಿಂದೆಗೆದುಕೊಂಡ ಮೂರು ಕೃಷಿ ಕಾನೂನುಗಳನ್ನು ಪ್ರತಿಭಟಿಸಿ ಸುಮಾರು 15 ತಿಂಗಳುಗಳನ್ನು ಕಳೆದ ಹತ್ತಾರು ರೈತರಿಗೆ ಪ್ರಧಾನಿ ಮೋದಿ ಕಳೆದ ತಿಂಗಳು ಕ್ಷಮೆಯಾಚಿಸಿದ್ದರು. ಕೃಷಿ ಕಾನೂನುಗಳರದ್ದತಿಯನ್ನು ದೃಢೀಕರಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ ಅಂಕಿತ ಹಾಕಿದರು.

ಪ್ರಧಾನಿಯವರು “(ನನ್ನ) ದೇಶದ ಜನರಲ್ಲಿ ಶುದ್ಧ ಮತ್ತು ಪ್ರಾಮಾಣಿಕ ಹೃದಯದಿಂದ ಕ್ಷಮೆಯಾಚಿಸುತ್ತಿದ್ದೇನೆ” ಎಂದು ಹೇಳಿದ್ದರು. ಕಾನೂನನ್ನು ಒಪ್ಪಿಕೊಳ್ಳುವಂತೆ ರೈತರನ್ನು ಮನವೊಲಿಸುವ ತಮ್ಮ ಸರ್ಕಾರದ ಪ್ರಯತ್ನಗಳಲ್ಲಿ “ಕೆಲವು ಕೊರತೆಗಳಿತ್ತು ಎಂದು ಒಪ್ಪಿಕೊಂಡಿದ್ದರು.

ಯುಪಿಎ ವಿರುದ್ಧ ವಾಗ್ದಾಳಿ ನಡೆಸಿದ್ದ ಮಮತಾ ಬಿಜೆಪಿಗಿಂತ ಮೊದಲು ಅಧಿಕಾರದಲ್ಲಿದ್ದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ನೇತೃತ್ವದ ಕಾಂಗ್ರೆಸ್ “ಚಾಲ್ತಿಯಲ್ಲಿರುವ ಫ್ಯಾಸಿಸಂ” ವಿರುದ್ಧ ಹೋರಾಡುತ್ತಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಅಸ್ತವ್ಯಸ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. “ಏನು ಯುಪಿಎ? ಈಗ ಯುಪಿಎ ? ಯುಪಿಎ ಎಂದರೇನು? ನಾವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಮಗೆ ಬಲವಾದ ಪರ್ಯಾಯ ಬೇಕು” ಎಂದು ಮುಂಬೈನಲ್ಲಿ ಎನ್‌ಸಿಪಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಅವರು ಹೇಳಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ನಾಯಕತ್ವ ದೈವಿಕ ಹಕ್ಕು ಅಲ್ಲ: ರಾಹುಲ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್