Narendra Modi: ಅಮೆರಿಕನ್ ಪೋಡ್​​ಕ್ಯಾಸ್ಟರ್ ಲೆಕ್ಸ್ ಫ್ರೀಡ್​​ಮ್ಯಾನ್​​ಗೆ ಮೂರು ಗಂಟೆ ಹದಿನೇಳು ನಿಮಿಷ ನರೇಂದ್ರ ಮೋದಿ ಸುದೀರ್ಘ ಸಂದರ್ಶನ

Lex Fridman podcast with Narendra Modi: ಅಮೆರಿಕದ ಖ್ಯಾತ ಪೋಡ್​​ಕ್ಯಾಸ್ಟರ್ ಲೆಕ್ಸ್ ಫ್ರೀಡ್​​ಮ್ಯಾನ್ ಅವರಿಗೆ ನರೇಂದ್ರ ಮೋದಿ ನೀಡಿದ ಸುದೀರ್ಘ ಸಂದರ್ಶನದಲ್ಲಿ ಹಲವು ವಿಚಾರಗಳ ಚರ್ಚೆಯಾಗಿದೆ. ತಮ್ಮ ವೈಯಕ್ತಿಕ ವಿಚಾರಗಳಿಂದ ಹಿಡಿದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳವರೆಗೆ ನರೇಂದ್ರ ಮೋದಿ ಮಾತನಾಡಿದ್ದಾರೆ. ಲೆಕ್ಸ್ ಫ್ರೀಡ್​ಮ್ಯಾನ್ ಈ ಸಂದರ್ಶನದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋವನ್ನು ಲೇಖನದ ಕೊನೆಯಲ್ಲಿ ಎಂಬೆಡ್ ಮಾಡಲಾಗಿದೆ.

Narendra Modi: ಅಮೆರಿಕನ್ ಪೋಡ್​​ಕ್ಯಾಸ್ಟರ್ ಲೆಕ್ಸ್ ಫ್ರೀಡ್​​ಮ್ಯಾನ್​​ಗೆ ಮೂರು ಗಂಟೆ ಹದಿನೇಳು ನಿಮಿಷ ನರೇಂದ್ರ ಮೋದಿ ಸುದೀರ್ಘ ಸಂದರ್ಶನ
ನರೇಂದ್ರ ಮೋದಿ

Updated on: Mar 16, 2025 | 6:22 PM

ನವದೆಹಲಿ, ಮಾರ್ಚ್ 16: ಅಮೆರಿಕದ ಸಂಶೋಧಕ ವಿಜ್ಞಾನಿ ಹಾಗೂ ಖ್ಯಾತ ಪೋಡ್​​ಕ್ಯಾಸ್ಟರ್ ಆದ ಲೆಕ್ಸ್ ಫ್ರೀಡ್​​ಮ್ಯಾನ್ (Lex Fridman) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಸಂದರ್ಶನ ನೀಡಿದ್ದಾರೆ. ಫ್ರೀಡ್​​ಮ್ಯಾನ್ ತಮ್ಮ ಯೂಟ್ಯೂಬ್ ಚಾನಲ್​​ನಲ್ಲಿ ಈ ಪೋಡ್​​ಕ್ಯಾಸ್ಟ್ ಅಪ್​​ಲೋಡ್ ಮಾಡಿದ್ದಾರೆ. ಈ ವಿಡಿಯೋ ಬರೋಬ್ಬರಿ 3 ಗಂಟೆ 17 ನಿಮಿಷದಷ್ಟು ಸುದೀರ್ಘವಾಗಿದೆ. ವಿದೇಶೀ ಖಾಸಗಿ ಮಾಧ್ಯಮವೊಂದಕ್ಕೆ ನರೇಂದ್ರ ಮೋದಿ (PM Narendra Modi) ನೀಡಿದ ಮೊದಲ ಸಂದರ್ಶನ ಇದಾಗಿದೆ. ಭಾರತದಲ್ಲಿ ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರಿಗೆ ಪ್ರಧಾನಿಗಳು ಇತ್ತೀಚೆಗೆ ಸಂದರ್ಶನ ನೀಡಿದ್ದರು. ಈಗ ವಿದೇಶೀ ಪೋಡ್​​ಕ್ಯಾಸ್ಟರ್​​ಗೆ ಅದಕ್ಕಿಂತಲೂ ಸುದೀರ್ಘವಾದ ಮಹಾ ಸಂದರ್ಶನ ನೀಡಿದ್ದಾರೆ.

ನರೇಂದ್ರ ಮೋದಿ ಅವರು ಲೆಕ್ಸ್ ಫ್ರೀಡ್​​ಮ್ಯಾನ್ ಅವರಿಗೆ ನೀಡಿರುವ ಈ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಹೋರಾಟದ ದಿನಗಳವರೆಗೆ, ಹಾಗು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಪ್ರಧಾನಿಯಾಗುವವರೆಗಿನ ರಾಜಕೀಯ ಬೆಳವಣಿಗೆಯ ಹಂತಗಳು ಇವೆಲ್ಲದರ ಬಗ್ಗೆ ಮೋದಿ ಮಾತನಾಡಿದ್ದಾರೆ.

ಈ ಸಂದರ್ಶನದ ಪೂರ್ಣ ವಿಡಿಯೋ, ಸುದ್ದಿಯ ಕೊನೆಯಲ್ಲಿ ಎಂಬೆಡ್ ಮಾಡಲಾಗಿದೆ, ಗಮನಿಸಿ…

ಇದನ್ನೂ ಓದಿ: ಉದ್ಯಮಶೀಲತೆ ಗುಜರಾತ್​ ಜನರ ಡಿಎನ್​ಎಯಲ್ಲಿದೆ: ಟಿವಿ9 ಎಂಡಿ ಬರುಣ್​ ದಾಸ್

ಉಕ್ರೇನ್ ರಷ್ಯಾ ಬಿಕ್ಕಟ್ಟು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದ ಸೂಕ್ಷ್ಮತೆ, ಚೀನಾ ಜೊತೆಗಿನ ಸಂಬಂಧ ಇತ್ಯಾದಿ ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಹಿಂದಿಯಲ್ಲೇ ಹೆಚ್ಚಾಗಿ ಮಾತನಾಡಿರುವ ನರೇಂದ್ರ ಮೋದಿ, ತಮ್ಮ ರಾಜಕೀಯ ವಿಚಾರಗಳಿಗೆ ಆರೆಸ್ಸೆಸ್​ನಿಂದ ಯಾವ ರೀತಿ ಪ್ರಭಾವ ಆಗಿದೆ, ಆ ಸಂಘಟನೆಯೊಂದಿಗೆ ತಮ್ಮಗಿದ್ದ ನಂಟು ಯಾವ ರೀತಿಯದ್ದು ಎಂಬುದನ್ನು ಸವಿಸ್ತಾರವಾಗಿ ಮಾತನಾಡಿದ್ದಾರೆ. 2002ರ ಗೋಧ್ರಾ ಹತ್ಯಾಕಾಂಡ ಘಟನೆಯನ್ನೂ ಅವರು ಪ್ರಸ್ತಾಪಿಸಿ, ವಿಪಕ್ಷಗಳು ಮತ್ತು ವಿರೋಧಿಗಳು ತನ್ನನ್ನು ಆ ಪ್ರಕರಣ ಮುಂದಿಟ್ಟುಕೊಂಡು ಹೇಗೆ ಹಣಿಯಲು ಯತ್ನಿಸಿದರು ಎಂಬುದನ್ನು ವಿವರಿಸಿದ್ದಾರೆ.

ಗುಜರಾತ್ ಗಲಭೆಗೆ ಗೋಧ್ರಾ ರೈಲು ದುರಂತ ಘಟನೆ ಹೇಗೆ ಕಾರಣವಾಯಿತು, ಗುಜರಾತ್​​ನಲ್ಲಿ ಹಿಂದಿನಿಂದಲೂ ಗಲಭೆಗಳು ಎಷ್ಟು ಸಾಮಾನ್ಯವಾಗಿದ್ದುವು, 2002ರ ಗಲಭೆ ಬಳಿಕ 22 ವರ್ಷಗಳಿಂದ ಗುಜರಾತ್​​ನಲ್ಲಿ ಮತ್ತೆ ಗಲಭೆಯೇ ಆಗಿಲ್ಲ ಎಂಬ ಸಂಗತಿಯನ್ನು ಲೆಕ್ಸ್ ಫ್ರೀಡ್​​ಮ್ಯಾನ್ ಅವರಿಗೆ ಮೋದಿ ಅರುಹಿದ್ದಾರೆ.

ಇದನ್ನೂ ಓದಿ: ಭಾರತದ್ದೇ ಸ್ವಂತ ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣಕ್ಕೆ ಸರ್ಕಾರದ ಆಸಕ್ತಿ; ಏನಿದರ ಉಪಯೋಗ, ಇದು ಅಷ್ಟು ಸುಲಭವಾ?

2000 ಮತ್ತು 2001ರಲ್ಲಿ ದೆಹಲಿಯ ರೆಡ್ ಫೋರ್ಟ್, ಅಮೆರಿಕದ ಟ್ವಿನ್ ಟವರ್ಸ್, ಜಮ್ಮು ಕಾಶ್ಮೀರ ವಿಧಾನಸಭೆ, ದೆಹಲಿಯ ಸಂಸತ್ ಮೇಲೆ ಉಗ್​ರರು ದಾಳಿ ಮಾಡಿದ್ದನ್ನು ಸ್ಮರಿಸಿದ ನರೇಂದ್ರ ಮೋದಿ, ಹೇಗೆ ಎಲ್ಲಾ ಉಗ್ರಗಾಮಿಗಳದ್ದು ಒಂದೇ ಮನಸ್ಕ ಸ್ಥಿತಿ ಇದೆ ಎಂಬುದನ್ನು ಬಿಡಿಸಿ ಹೇಳಿದ್ದಾರೆ.

ಸಂದರ್ಶನದ ಪೂರ್ಣ ವಿಡಿಯೋ ಇಲ್ಲಿದೆ…

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ