ಐಎಎಸ್ ನಿಯಮದಡಿಯಲ್ಲಿ ಅಲ್ಲ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಆಲಾಪನ್ ಬಂದೋಪಧ್ಯಾಯ್​ಗೆ ಶೋಕಾಸ್ ನೋಟಿಸ್ ಕಳಿಸಿತ್ತು ಕೇಂದ್ರ

| Updated By: ರಶ್ಮಿ ಕಲ್ಲಕಟ್ಟ

Updated on: Jun 02, 2021 | 11:28 AM

Alapan Bandyopadhyay: ದೆಹಲಿಗೆ ತೆರಳಲು ನಿರಾಕರಿಸಿದ ಆಲಾಪನ್​ ಬಂದೋಪಾಧ್ಯಾಯ್ ಅವರಿಗೆ ಕೇಂದ್ರ ಸರ್ಕಾರ ಶೋಕಾಸ್​ ನೋಟಿಸ್​ ನೀಡಿದ್ದು, ಮಂಗಳವಾರ ಬೆಳಗ್ಗೆ 10ಗಂಟೆಗೆ ದೆಹಲಿಯ ನಾರ್ತ್​ಬ್ಲಾಕ್​​ನಲ್ಲಿರುವ ಗೃಹಸಚಿವಾಲಯದ ಕಚೇರಿಯಲ್ಲಿ ಹಾಜರಿರಲು ಸೂಚಿಸಲಾಗಿತ್ತು

ಐಎಎಸ್ ನಿಯಮದಡಿಯಲ್ಲಿ ಅಲ್ಲ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಆಲಾಪನ್ ಬಂದೋಪಧ್ಯಾಯ್​ಗೆ ಶೋಕಾಸ್ ನೋಟಿಸ್ ಕಳಿಸಿತ್ತು ಕೇಂದ್ರ
ಮಮತಾ ಬ್ಯಾನರ್ಜಿ ಜತೆ ಆಲಾಪನ್ ಬಂದೋಪಧ್ಯಾಯ್
Follow us on

ದೆಹಲಿ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಧ್ಯಾಯ್ ಅವರ ಅವರ ನಿವೃತ್ತಿಯ ಸಿಂಧುತ್ವವನ್ನು ಸ್ವೀಕರಿಸಲು ನಿರಾಕರಿಸಿದ ನರೇಂದ್ರ ಮೋದಿ ಸರ್ಕಾರ ಅವರಿಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಶೋಕಾಸ್ ನೋಟಿಸ್ ನೀಡಿದೆ. ಮಂಗಳವಾರ  ಆಲಾಪನ್ ಅವರಿಗೆ  ಕೇಂದ್ರ ಶೋಕಾಸ್ ನೀಡಿತ್ತು.

ದೆಹಲಿಗೆ ತೆರಳಲು ನಿರಾಕರಿಸಿದ ಆಲಾಪನ್​ ಬಂದೋಪಾಧ್ಯಾಯ್ ಅವರಿಗೆ ಕೇಂದ್ರ ಸರ್ಕಾರ ಶೋಕಾಸ್​ ನೋಟಿಸ್​ ನೀಡಿದ್ದು, ಮಂಗಳವಾರ ಬೆಳಗ್ಗೆ 10ಗಂಟೆಗೆ ದೆಹಲಿಯ ನಾರ್ತ್​ಬ್ಲಾಕ್​​ನಲ್ಲಿರುವ ಗೃಹಸಚಿವಾಲಯದ ಕಚೇರಿಯಲ್ಲಿ ಹಾಜರಿರಲು ಸೂಚಿಸಲಾಗಿತ್ತು. ಆದರೆ ಯಾಕೆ ಸೇರ್ಪಡೆಯಾಗಲಿಲ್ಲ ಎಂಬುದಕ್ಕೆ ವಿವರಣೆ ಕೊಡಬೇಕು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಸಭೆಯಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಸರಿಯಾದ ವಿವರಣೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಸರ್ಕಾರದ ಮೂಲಗಳ ಪ್ರಕಾರ, ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಯಾಸ್ ಚಂಡಮಾರುತ ಪರಿಶೀಲನಾ ಸಭೆಯಲ್ಲಿ ಗೈರುಹಾಜರಾಗಿದ್ದಕ್ಕೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ದ ಐಎಎಸ್ ಅಧಿಕಾರಿ, ಮುಖ್ಯ ಕಾರ್ಯದರ್ಶಿ ಆಲಾಪನ್ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಿತ್ತು. ಮಮತಾ ಬ್ಯಾನರ್ಜಿ ಅವರ ಸರ್ಕಾರ ಆಲಾಪನ್ ಅವರ ನಿವೃತ್ತಿ ಘೋಷಣೆಗೆ ಮುನ್ನವೇ ಕೇಂದ್ರ ಶಿಸ್ತುಕ್ರಮಗಳನ್ನು ಕೈಗೊಂಡಿತ್ತು.

ಕೇಂದ್ರವು ಈಗ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 51 (ಬಿ) ಅನ್ವಯ ಆಲಾಪನ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಇದರ ಪ್ರಕಾರ “ಯಾರು, ಸಮಂಜಸವಾದ ಕಾರಣವಿಲ್ಲದೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಪರವಾಗಿ ಅಥವಾ ಪರವಾಗಿ ನೀಡಿದ ಯಾವುದೇ ನಿರ್ದೇಶನವನ್ನು ಅನುಸರಿಸಲು ನಿರಾಕರಿಸುತ್ತಾರೆ. ಅಥವಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಅಥವಾ ರಾಜ್ಯ ಕಾರ್ಯಕಾರಿ ಸಮಿತಿ ಅಥವಾ ಜಿಲ್ಲಾ ಪ್ರಾಧಿಕಾರದ ನಿರ್ದೇಶನವನ್ನು ನಿರಾಕರಿಸಿದರೆ ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಅಖಿಲ ಭಾರತ ಸೇವೆ (ಎಐಎಸ್) ನಿಯಮಗಳ ಅಡಿಯಲ್ಲಿ ರಾಜ್ಯ ಸರ್ಕಾರದೊಂದಿಗೆ ನೇಮಕ ಮಾಡಲಾದ ಮಾಡಲಾದ ಐಎಎಸ್ ಅಧಿಕಾರಿಯ ವಿರುದ್ಧ ಕೇಂದ್ರವು ಏಕಪಕ್ಷೀಯವಾಗಿ ಶಿಸ್ತು ಕ್ರಮಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲವಾದರೂ, ಸರ್ಕಾರವು ಸಾಮಾನ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ( NDMA) ಯನ್ನು ಬಳಸಿದೆ. ಅದರ ಅಡಿಯಲ್ಲಿ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ ಯಾರನ್ನೂ ಬೇಕಾದರೂ ವಿಚಾರಣೆಗೆ ಒಳಪಡಿಸಬಹುದು.

 ಆಲಾಪನ್  ಅವರನ್ನು ಬಿಟ್ಟು ಕೊಡುವುದಿಲ್ಲ ಎಂದಿದ್ದರು ಮಮತಾ

ನಮ್ಮ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಧ್ಯಾಯ್ ಅವರು ಮೇ 31ರಂದು ನಿವೃತ್ತರಾದರು. ನಿವೃತ್ತರಾದ ಮೇಲೆ  ಆಲಾಪನ್ ಅವರನ್ನು  ಮುಖ್ಯ ಸಲಹೆಗಾರರಾಗಿ  ಮಮತಾ ಬ್ಯಾನರ್ಜಿ ನೇಮಕ ಮಾಡಿದ್ದರು. ಜೂನ್ 1ರಂದು ಮಂಗಳವಾರ ಅವರನ್ನು ನಾರ್ತ್ ಬ್ಲಾಕ್‌ಗೆ ಬರುವಂತೆ ಕೇಂದ್ರವು ಹೇಳಿತ್ತು. ಆದರೆ ರಾಜ್ಯ ಆಡಳಿತದ ಅನುಮತಿಯಿಲ್ಲದೆ ಅಧಿಕಾರಿಯೊಬ್ಬರು ಸೇರಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಕೇಂದ್ರದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ರಾಜ್ಯ ಸರ್ಕಾರವು ಆಲಾಪನ್ ಅವರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಮತ್ತು ಈ ನಿರ್ಣಾಯಕ ಸಮಯದಲ್ಲಿ ತನ್ನ ಉನ್ನತ ಅಧಿಕಾರಿಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಪ್ರತಿಪಾದಿಸಿದರು.

2021 ರ ಮೇ 28 ರಂದು ಭಾರತ ಸರ್ಕಾರವು ನಮಗೆ ಕಳುಹಿಸಿದ ಏಕಪಕ್ಷೀಯ ಆದೇಶದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಬೆರಗಾಗಿದ್ದೇನೆ . ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಐಎಎಸ್ ಆಲಾಪನ್ ಬಂದೋಪಾಧ್ಯಾಯ್ ಅವರನ್ನು ಬಿಟ್ಟುಕೊಡುವಂತೆ ಸರ್ಕಾರ ಹೇಳಿದ್ದು 2021 ರ ಮೇ 31 ರಂದು ಅವರು ಕೇಂದ್ರದ ಕೆಲಸಕ್ಕೆ ಹಾಜರಾಗಬೇಕಿದೆ . ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ಇಲ್ಲದೆ  ಏಕಪಕ್ಷೀಯ ‘ಆದೇಶ’ , ಅಧಿಕಾರಿಯ ಯಾವುದೇ ಇಚ್ಛೆ/ ಆಯ್ಕೆಯಿಲ್ಲದೆ, ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳು, 1954, ಮತ್ತು ಇತರ ಅನ್ವಯವಾಗುವ ಯಾವುದೇ ಪೂರ್ವ ಷರತ್ತುಗಳನ್ನು ಪೂರೈಸದೆ ಬರುತ್ತದೆ. ಏಕಪಕ್ಷೀಯ ಆದೇಶ / ನಿರ್ದೇಶನವು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ. ಇದು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆಎಂದು ಬ್ಯಾನರ್ಜಿ ಪತ್ರದಲ್ಲಿ ಬರೆದಿದ್ದಾರೆ.

“ಆದ್ದರಿಂದ ನಿಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಲು, ವಾಪಸ್ ಪಡೆಯಲು, ಮರುಪರಿಶೀಲಿಸಲು ಮತ್ತು  ಸಾರ್ವಜನಿಕ ಹಿತದೃಷ್ಟಿಯಿಂದ ಇತ್ತೀಚಿನ ಆದೇಶವನ್ನು ರದ್ದುಗೊಳಿಸಲು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ ಕಾನೂನುಬದ್ಧ ಸಮಾಲೋಚನೆಯ ನಂತರ ಹೊರಡಿಸಲಾದ ವಿಸ್ತರಣೆಯ ಹಿಂದಿನ ಆದೇಶವು ಕಾರ್ಯಕಾರಿ ಮತ್ತು ಮಾನ್ಯವಾಗಿ ಉಳಿದಿದೆ ಎಂಬ ನಮ್ಮ ತಿಳುವಳಿಕೆಯ ಆಧಾರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರವು ಈ ನಿರ್ಣಾಯಕ ಗಳಿಗೆಯಲ್ಲಿ ಅದರ ಮುಖ್ಯ ಕಾರ್ಯದರ್ಶಿಯನ್ನು  ಬಿಟ್ಟುಕೊಡಲು ಸಾಧ್ಯವಿಲ್ಲ. ಇತ್ತೀಚಿನ ಆದೇಶವು ಅನ್ವಯವಾಗುವ ಕಾನೂನುಗಳ ಉಲ್ಲಂಘನೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ: ಇದು ಯಾವುದೇ ಸಂದರ್ಭದಲ್ಲಿ ಅನೂರ್ಜಿತವಾಗಿದೆ ಎಂದಿದ್ದಾರೆ ಮಮತಾ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರನ ಬೆನ್ನು ಬಿಡದ ಕೇಂದ್ರ ಸರ್ಕಾರ; ಆಲಾಪನ್ ಬಂಡೋಪಾಧ್ಯಾಯರಿಗೆ ಶೋಕಾಸ್ ನೋಟಿಸ್​

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ಆಲಾಪನ್ ಬಂದೋಪಧ್ಯಾಯ್ ನಿವೃತ್ತಿ; ಮಮತಾ ಬ್ಯಾನರ್ಜಿಯ ಮುಖ್ಯ ಸಲಹೆಗಾರರಾಗಿ ನೇಮಕ

(Narendra Modi government has issued a show cause notice to West Bengal Chief Secretary Alapan Bandyopadhyay under disaster law)