‘ಪ್ರಧಾನಿ ಮೋದಿ ಬರುಬರುತ್ತ ಉತ್ತರ ಕೊರಿಯಾ ನಾಯಕ ಕಿಮ್​ ಜಾಂಗ್​ ಉನ್​​ರಂತಾಗುತ್ತಿದ್ದಾರೆ..’: ರಾಕೇಶ್​ ಟಿಕಾಯತ್​​

‘ಪ್ರಧಾನಿ ಮೋದಿ ಬರುಬರುತ್ತ ಉತ್ತರ ಕೊರಿಯಾ ನಾಯಕ ಕಿಮ್​ ಜಾಂಗ್​ ಉನ್​​ರಂತಾಗುತ್ತಿದ್ದಾರೆ..’: ರಾಕೇಶ್​ ಟಿಕಾಯತ್​​
ರಾಕೇಶ್ ಟಿಕಾಯತ್

ರಾಕೇಶ್​ ಟಿಕಾಯತ್​  ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ತೀವ್ರವಾಗಿ ಅಸಮಾಧಾನ ಹೊಂದಿದ್ದಾರೆ. ಮೂರು ಕಾಯ್ದೆಗಳನ್ನು ರದ್ದುಮಾಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.

TV9kannada Web Team

| Edited By: Lakshmi Hegde

Jun 02, 2021 | 1:31 PM

ದೆಹಲಿ: ದೇಶದಲ್ಲಿನ ಹಣದುಬ್ಬರ, ಆರ್ಥಿಕತೆಗೆ ಸಂಬಂಧಪಟ್ಟಂತೆ ಭಾರತೀಯ ಕಿಸಾನ್​ ಯೂನಿಯನ್​ (BKU) ರೈತಸಂಘಟನೆ ಮುಖ್ಯಸ್ಥ ರಾಕೇಶ್​ ಟಿಕಾಯತ್​ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬರುಬರುತ್ತ ಉತ್ತರ ಕೊರಿಯನ್​ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ರಂತೆ ಆಗುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಯಾರೂ ಧ್ವನಿ ಎತ್ತಲು ಸಾಧ್ಯವಿಲ್ಲದಂತೆ ಆಗುತ್ತಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಮೂರು ಕೃಷಿಕಾಯ್ದೆಗಳನ್ನು ಜಾರಿಗೊಳಿಸಿದ್ದರಿಂದ ರಾಕೇಶ್​ ಟಿಕಾಯತ್​ ಸೇರಿ ಹಲವು ಸಂಘಟನೆಗಳು ರೈತರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಸದ್ಯ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಇದೀಗ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ ರಾಕೇಶ್​ ಟಿಕಾಯತ್​, ಈಗ ರಾಜನ ವಿರುದ್ಧ ಯಾರೂ ಮಾತನಾಡುವಂತಿಲ್ಲ. ಹಾಗೆ ಮಾತನಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಉತ್ತರಕೊರಿಯಾದಲ್ಲಿ ಯಾರಾದರೂ ಸರ್ಕಾರದ ವಿರುದ್ಧ ಮಾತನಾಡಿದರೆ ಅವರಿಗೆ ಶಿಕ್ಷೆ ನೀಡಲಾಗುವಂತೆ ಭಾರತದಲ್ಲೂ ಮಾಡಲಾಗುತ್ತಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ದೇಶದಲ್ಲಿ ಹಣದುಬ್ಬರ ಒಂದೇ ಸಮನೆ ಹೆಚ್ಚುತ್ತಿದೆ. ಹಾಗಂತ ಅದನ್ನು ಯಾರೂ ಕೇಳುವಂತಿಲ್ಲ. ನಮ್ಮ ರಾಜನೂ ಕಿಮ್​ ಜಾಂಗ್​ ಉನ್​​ರಂತೆ ಆಗುತ್ತಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ರಾಕೇಶ್​ ಟಿಕಾಯತ್​  ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ತೀವ್ರವಾಗಿ ಅಸಮಾಧಾನ ಹೊಂದಿದ್ದಾರೆ. ಮೂರು ಕಾಯ್ದೆಗಳನ್ನು ರದ್ದುಮಾಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಈಗ ಮತ್ತದನ್ನೇ ಪುನರುಚ್ಚರಿಸಿರುವ ಅವರು, ಕಾಯ್ದೆಗಳ ಬಗ್ಗೆ ಮಾತುಕತೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮುಂದಾಗಬೇಕು. ಅವುಗಳನ್ನು ಹಿಂಪಡೆಯುವ ಬಗ್ಗೆ ಚರ್ಚೆ ನಡೆಯಬೇಕು ಎಂದಿದ್ದಾರೆ. ಕೊವಿಡ್​ 19 ಉಲ್ಬಣಗೊಂಡರೂ ಸರಿ ನಮ್ಮ ಬೇಡಿಕೆ ಈಡೇರುವವರೆಗೂ ಮನೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಾವಿರಾರು ರೈತರು ದೆಹಲಿಯ ವಿವಿಧ ಗಡಿಗಳಲ್ಲಿ ನವೆಂಬರ್​ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Covid 19: ಮೇ ತಿಂಗಳಲ್ಲಿ ದೆಹಲಿ, ಪಂಜಾಬ್, ಉತ್ತರಾಖಂಡದಲ್ಲಿ ಅತೀ ಹೆಚ್ಚು ಸಾವು

ಐಎಎಸ್ ನಿಯಮದಡಿಯಲ್ಲಿ ಅಲ್ಲ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಆಲಾಪನ್ ಬಂದೋಪಧ್ಯಾಯ್​ಗೆ ಶೋಕಾಸ್ ನೋಟಿಸ್ ಕಳಿಸಿತ್ತು ಕೇಂದ್ರ

Follow us on

Related Stories

Most Read Stories

Click on your DTH Provider to Add TV9 Kannada