Pariksha Pe Charcha 2021: ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಲು ಪೋಷಕರು ಮತ್ತು ಶಿಕ್ಷಕರಿಗೆ ಅವಕಾಶ

|

Updated on: Feb 18, 2021 | 6:51 PM

Narendra Modi: ಪರೀಕ್ಷಾ ಪೇ ಚರ್ಚಾ 2021 ಮರಳಿ ಬಂದಿದೆ. ಈ ಬಾರಿ ಇದು ಆನ್ ಲೈನ್ ಆಗಿದ್ದು ಜಗತ್ತಿನ ಎಲ್ಲ ಮಕ್ಕಳಿಗೆ ಮುಕ್ತವಾಗಿ ಭಾಗವಹಿಸುವ ಅವಕಾಶವಿದೆ.

Pariksha Pe Charcha 2021: ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಲು ಪೋಷಕರು ಮತ್ತು ಶಿಕ್ಷಕರಿಗೆ ಅವಕಾಶ
ವಿದ್ಯಾರ್ಥಿಗಳೊಂದಿಗೆ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ದೆಹಲಿ: ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಪರೀಕ್ಷಾ ಪೇ ಚರ್ಚಾ ಸಂವಾದ ಗುರುವಾರ ಆರಂಭವಾಗಿದೆ. ವಿಶೇಷವೇನೆಂದರೆ ಈ ಬಾರಿಯ ಸಂವಾದದಲ್ಲಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಭಾಗವಹಿಸಬಹುದಾಗಿದೆ.

ಕೊವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರೀಕ್ಷಾ ಪೇ ಚರ್ಚಾ ಸಂವಾದವು ಆನ್​ಲೈನ್​ನಲ್ಲಿಯೇ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

ನಮ್ಮ ಧೈರ್ಯವಂತ ಎಕ್ಸಾಮ್ ವಾರಿಯರ್ ಗಳು ಪರೀಕ್ಷಾ ಸಿದ್ದತೆಯಲ್ಲಿ ತೊಡಗಿದ್ದಾರೆ. ಪರೀಕ್ಷಾ ಪೇ ಚರ್ಚಾ 2021 ಮರಳಿ ಬಂದಿದೆ. ಈ ಬಾರಿ ಇದು ಆನ್ ಲೈನ್ ಆಗಿದ್ದು ಜಗತ್ತಿನ ಎಲ್ಲ ಮಕ್ಕಳಿಗೆ ಮುಕ್ತವಾಗಿ ಭಾಗವಹಿಸುವ ಅವಕಾಶವಿದೆ. ಯಾವುದೇ ಒತ್ತಡವಿಲ್ಲದೆ ನಗುತ್ತಾ ಪರೀಕ್ಷೆ ಬರೆಯಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಬಹುಜನರ ಬೇಡಿಕೆ ಮೇರೆಗೆ ಪರೀಕ್ಷಾ ಪೇ ಚರ್ಚಾ 2021 ರಲ್ಲಿ ಪೋಷಕರು ಮತ್ತು ಶಿಕ್ಷಕರು ಭಾಗಿಯಾಗಬಹುದು. ಇದು ತಮಾಷೆಭರಿತ ಚರ್ಚೆಯಾಗಿರುತ್ತದೆ. ನನ್ನ ವಿದ್ಯಾರ್ಥಿ ಮಿತ್ರರು, ಅವರ ಪೋಷಕರು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದಿದ್ದಾರೆ ಮೋದಿ.

ಮಾರ್ಚ್​ನಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ 9-12 ತರಗತಿಯ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಫೆಬ್ರವರಿ 18ರಂದು ಆರಂಭವಾದ ಈ ಸಂವಾದ ಮಾರ್ಚ್ 14ರಂದು ಮುಕ್ತಾಯಗೊಳ್ಳಲಿದೆ. ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಪರೀಕ್ಷಾ ಪೇ ಚರ್ಚಾ ಮೊದಲ ಸಂವಾದವು 2018 ಫೆಬ್ರವರಿ 16ರಂದು ನವದೆಹಲಿಯ ತಾಲಕಟೊರಾ ಸ್ಟೇಡಿಯಂನಲ್ಲಿ ನಡೆದಿತ್ತು.

ಸಂವಾದದಲ್ಲಿ ಭಾಗಿಯಾಗುವುದು ಹೇಗೆ?
innovateindia.mygov.in/ppc-2021 ಎಂಬ ವೆಬ್​ಸೈಟ್​ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಸರು ನೋಂದಣಿ ಮಾಡುವ ಅವಕಾಶವಿದೆ.

ಪರೀಕ್ಷಾ ಪೇ ಚರ್ಚಾ

ಥೀಮ್ (ವಿದ್ಯಾರ್ಥಿಗಳಿಗೆ) : ಪರೀಕ್ಷೆಗಳು ಹಬ್ಬದಂತೆ ಆಚರಿಸಿ
ಭಾರತ ಅತುಲ್ಯ, ಪ್ರಯಾಣ ಮಾಡಿ
ಒಂದು ಪ್ರಯಾಣ ಮುಗಿದಾಗ ಇನ್ನೊಂದು ಶುರುವಾಗುತ್ತದೆ
ಆಕಾಂಕ್ಷೆ ಇರಬೇಕು, ಸಾಧನೆಗೆ
ಕೃತಜ್ಞರಾಗಿರಬೇಕು
ಪ್ರಧಾನಿಗೆ ಪ್ರಶ್ನೆ
ಪೋಷಕರಿಗೆ: ನಿಮ್ಮ ಮಾತುಗಳೇ ಮಕ್ಕಳ ಜಗತ್ತು, ಸದಾ ಪ್ರೋತ್ಸಾಹಿಸಿ
ನಿಮ್ಮ ಮಕ್ಕಳ ಗೆಳೆಯರಾಗಿರಿ- ಖಿನ್ನತೆಯಿಂದ ದೂರವಿರಿಸಿ
ಶಿಕ್ಷಕರಿಗೆ
ಆನ್ ಲೈನ್ ಶಿಕ್ಷಣ ವ್ಯವಸ್ಥೆ- ಅದರ ಲಾಭ ಮತ್ತು ಅದನ್ನು ಮತ್ತಷ್ಟು ಉತ್ತಮ ಪಡಿಸುವುದು ಹೇಗೆ
ಈ ಬಗ್ಗೆ ಬರೆದು ಕಳುಹಿಸಿಕೊಡಬೇಕು

ಇದನ್ನೂ ಓದಿ: Modi in Assam: ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಶಕೆ: ನರೇಂದ್ರ ಮೋದಿ

Published On - 6:49 pm, Thu, 18 February 21