ಪುದುಚೇರಿ ರಾಜಕಾರಣ: ಸೋಮವಾರ ಬಹುಮತ ಸಾಬೀತು ಮಾಡುವಂತೆ ಕಾಂಗ್ರೆಸ್ಗೆ ಸೂಚಿಸಿದ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರ್ಯರಾಜನ್
ಕಿರಣ್ ಬೇಡಿಯವರನ್ನು ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರ್ಯರಾಜನ್ ಅವರನ್ನೇ ಪ್ರಭಾರ ಲೆಫ್ಟಿನೆಂಟ್ ಗವರ್ನರ್ರನ್ನಾಗಿ ಇಲ್ಲಿಗೆ ನೇಮಕ ಮಾಡಲಾಗಿದೆ.
ಪುದುಚೇರಿ: ಸದಸ್ಯ ಬಲ 14ಕ್ಕೆ ಕುಸಿದು, ಬಹುಮತ ಕಳೆದುಕೊಂಡಿರುವ ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ತನ್ನ ಸದಸ್ಯ ಬಲ ಸಾಬೀತು ಪಡಿಸಲು ಸೋಮವಾರದವರೆಗೆ ಅವಕಾಶ ನೀಡಲಾಗಿದೆ. ಸೋಮವಾರ (ಫೆ.22) ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಬೇಕು ಎಂದು ಈಗಿನ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರ್ಯರಾಜನ್ ತಿಳಿಸಿದ್ದಾರೆ.
ಕಿರಣ್ ಬೇಡಿಯವರನ್ನು ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರ್ಯರಾಜನ್ ಅವರನ್ನೇ ಪ್ರಭಾರ ಲೆಫ್ಟಿನೆಂಟ್ ಗವರ್ನರ್ರನ್ನಾಗಿ ಇಲ್ಲಿಗೆ ನೇಮಕ ಮಾಡಲಾಗಿದೆ. ಈ ಮಧ್ಯೆ ಆಡಳಿತ ರೂಢ ಪಕ್ಷ ಕಾಂಗ್ರೆಸ್ ಸದಸ್ಯರ ಸಂಖ್ಯೆ 14ಕ್ಕೆ ಕುಸಿದಿದೆ. ಪುದುಚೇರಿ ವಿಧಾನಸಭೆ 30 ಸದಸ್ಯ ಬಲ ಹೊಂದಿದ್ದು, ಅಧಿಕಾರ ಹಿಡಿಯಲು ಯಾವುದೇ ಪಕ್ಷಕ್ಕೆ 16 ಸದಸ್ಯರ ಬಲ ಇರಬೇಕು. ಕಾಂಗ್ರೆಸ್ 18 ಶಾಸಕರ ಬಲದೊಂದಿಗೆ ಪುದುಚೇರಿ ಆಡಳಿತ ಹಿಡಿದಿತ್ತು. ಆದರೆ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿಯವರ ನಡುವಿನ ವಿವಾದದಿಂದ ಈಗ ಅಲ್ಲಿನ ರಾಜಕೀಯದಲ್ಲಿ ಏಕಾಏಕಿ ಬೆಳವಣಿಗೆಗಳು ನಡೆದಿವೆ. ನಾಲ್ವರು ರಾಜೀನಾಮೆ ನೀಡಿದ್ದರೂ, ನಮಗೆ ಸಂಖ್ಯಾಬಲ ಇದೆ ಎಂದು ಮುಖ್ಯಮಂತ್ರಿ ನಾರಾಯಣಸ್ವಾಮಿ ವಾದಿಸುತ್ತಿದ್ದಾರೆ.
ಆದರೆ ನೂತನ ಲೆಫ್ಟಿನೆಂಟ್ ಗವರ್ನರ್, ಕಾಂಗ್ರೆಸ್ ಸರ್ಕಾರ ಮುಂದುವರಿಯಬೇಕು ಎಂದರೆ ಅದಕ್ಕೆ ಸಾಕಷ್ಟು ಸದಸ್ಯರ ಬಲ ಇದೆ ಎಂಬುದು ಸಾಬೀತಾಗಾಬೇಕು. ಸೋಮವಾರ ಫ್ಲೋರ್ ಟೆಸ್ಟ್ ನಡೆಯಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: Puducherry Politics | ಪುದುಚೇರಿಯ ಕ್ಷಿಪ್ರ ರಾಜಕೀಯ ಬೆಳವಣಿಗೆಯ ಹಿಂದಿದೆ ಬಿಜೆಪಿ ಮಹತ್ವಾಕಾಂಕ್ಷೆ
Published On - 6:59 pm, Thu, 18 February 21