Pariksha Pe Charcha 2021: ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಲು ಪೋಷಕರು ಮತ್ತು ಶಿಕ್ಷಕರಿಗೆ ಅವಕಾಶ
Narendra Modi: ಪರೀಕ್ಷಾ ಪೇ ಚರ್ಚಾ 2021 ಮರಳಿ ಬಂದಿದೆ. ಈ ಬಾರಿ ಇದು ಆನ್ ಲೈನ್ ಆಗಿದ್ದು ಜಗತ್ತಿನ ಎಲ್ಲ ಮಕ್ಕಳಿಗೆ ಮುಕ್ತವಾಗಿ ಭಾಗವಹಿಸುವ ಅವಕಾಶವಿದೆ.

ದೆಹಲಿ: ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಪರೀಕ್ಷಾ ಪೇ ಚರ್ಚಾ ಸಂವಾದ ಗುರುವಾರ ಆರಂಭವಾಗಿದೆ. ವಿಶೇಷವೇನೆಂದರೆ ಈ ಬಾರಿಯ ಸಂವಾದದಲ್ಲಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಭಾಗವಹಿಸಬಹುದಾಗಿದೆ.
ಕೊವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರೀಕ್ಷಾ ಪೇ ಚರ್ಚಾ ಸಂವಾದವು ಆನ್ಲೈನ್ನಲ್ಲಿಯೇ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.
ನಮ್ಮ ಧೈರ್ಯವಂತ ಎಕ್ಸಾಮ್ ವಾರಿಯರ್ ಗಳು ಪರೀಕ್ಷಾ ಸಿದ್ದತೆಯಲ್ಲಿ ತೊಡಗಿದ್ದಾರೆ. ಪರೀಕ್ಷಾ ಪೇ ಚರ್ಚಾ 2021 ಮರಳಿ ಬಂದಿದೆ. ಈ ಬಾರಿ ಇದು ಆನ್ ಲೈನ್ ಆಗಿದ್ದು ಜಗತ್ತಿನ ಎಲ್ಲ ಮಕ್ಕಳಿಗೆ ಮುಕ್ತವಾಗಿ ಭಾಗವಹಿಸುವ ಅವಕಾಶವಿದೆ. ಯಾವುದೇ ಒತ್ತಡವಿಲ್ಲದೆ ನಗುತ್ತಾ ಪರೀಕ್ಷೆ ಬರೆಯಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Hon’ble PM Shri @narendramodi ji’s annual interaction with students ‘Pariksha Pe Charcha 2021’ will be held online in March this year.
— Ministry of Education (@EduMinOfIndia) February 18, 2021
ಬಹುಜನರ ಬೇಡಿಕೆ ಮೇರೆಗೆ ಪರೀಕ್ಷಾ ಪೇ ಚರ್ಚಾ 2021 ರಲ್ಲಿ ಪೋಷಕರು ಮತ್ತು ಶಿಕ್ಷಕರು ಭಾಗಿಯಾಗಬಹುದು. ಇದು ತಮಾಷೆಭರಿತ ಚರ್ಚೆಯಾಗಿರುತ್ತದೆ. ನನ್ನ ವಿದ್ಯಾರ್ಥಿ ಮಿತ್ರರು, ಅವರ ಪೋಷಕರು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದಿದ್ದಾರೆ ಮೋದಿ.
On popular demand, ‘Pariksha Pe Charcha 2021’ will also include parents and teachers. It’ll be a fun filled discussion on an otherwise serious subject. I call upon my student friends, their amazing parents and hardworking teachers to take part in #PPC2021 in large numbers.
— Narendra Modi (@narendramodi) February 18, 2021
ಮಾರ್ಚ್ನಲ್ಲಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ 9-12 ತರಗತಿಯ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಫೆಬ್ರವರಿ 18ರಂದು ಆರಂಭವಾದ ಈ ಸಂವಾದ ಮಾರ್ಚ್ 14ರಂದು ಮುಕ್ತಾಯಗೊಳ್ಳಲಿದೆ. ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಪರೀಕ್ಷಾ ಪೇ ಚರ್ಚಾ ಮೊದಲ ಸಂವಾದವು 2018 ಫೆಬ್ರವರಿ 16ರಂದು ನವದೆಹಲಿಯ ತಾಲಕಟೊರಾ ಸ್ಟೇಡಿಯಂನಲ್ಲಿ ನಡೆದಿತ್ತು.
ಸಂವಾದದಲ್ಲಿ ಭಾಗಿಯಾಗುವುದು ಹೇಗೆ? innovateindia.mygov.in/ppc-2021 ಎಂಬ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಸರು ನೋಂದಣಿ ಮಾಡುವ ಅವಕಾಶವಿದೆ.

ಪರೀಕ್ಷಾ ಪೇ ಚರ್ಚಾ
ಥೀಮ್ (ವಿದ್ಯಾರ್ಥಿಗಳಿಗೆ) : ಪರೀಕ್ಷೆಗಳು ಹಬ್ಬದಂತೆ ಆಚರಿಸಿ ಭಾರತ ಅತುಲ್ಯ, ಪ್ರಯಾಣ ಮಾಡಿ ಒಂದು ಪ್ರಯಾಣ ಮುಗಿದಾಗ ಇನ್ನೊಂದು ಶುರುವಾಗುತ್ತದೆ ಆಕಾಂಕ್ಷೆ ಇರಬೇಕು, ಸಾಧನೆಗೆ ಕೃತಜ್ಞರಾಗಿರಬೇಕು ಪ್ರಧಾನಿಗೆ ಪ್ರಶ್ನೆ ಪೋಷಕರಿಗೆ: ನಿಮ್ಮ ಮಾತುಗಳೇ ಮಕ್ಕಳ ಜಗತ್ತು, ಸದಾ ಪ್ರೋತ್ಸಾಹಿಸಿ ನಿಮ್ಮ ಮಕ್ಕಳ ಗೆಳೆಯರಾಗಿರಿ- ಖಿನ್ನತೆಯಿಂದ ದೂರವಿರಿಸಿ ಶಿಕ್ಷಕರಿಗೆ ಆನ್ ಲೈನ್ ಶಿಕ್ಷಣ ವ್ಯವಸ್ಥೆ- ಅದರ ಲಾಭ ಮತ್ತು ಅದನ್ನು ಮತ್ತಷ್ಟು ಉತ್ತಮ ಪಡಿಸುವುದು ಹೇಗೆ ಈ ಬಗ್ಗೆ ಬರೆದು ಕಳುಹಿಸಿಕೊಡಬೇಕು
ಇದನ್ನೂ ಓದಿ: Modi in Assam: ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಶಕೆ: ನರೇಂದ್ರ ಮೋದಿ
Published On - 6:49 pm, Thu, 18 February 21