AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಚುನಾವಣೆ, ಜನವರಿ 23ರಂದು ಎನ್​ಡಿಎ ಪರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

ಇದೇ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ದಿನಾಂಕ ಘೋಷಣೆಯಾಗುವ ಮುನ್ನವೇ ಎನ್​ಡಿಎ ಪ್ರಚಾರಕಾರ್ಯವನ್ನು ಆರಂಬಿಸಲು ಮುಂದಾಗಿದೆ. ಜನವರಿ 23ರಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಶುರು ಮಾಡಲಿದ್ದಾರೆ. ಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಎನ್‌ಡಿಎ ಚುನಾವಣಾ ಪ್ರಚಾರವನ್ನು ಔಪಚಾರಿಕವಾಗಿ ಪ್ರಾರಂಭಿಸುವ ಮೂಲಕ ಪ್ರಧಾನಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ತಿಳಿಸಿದ್ದಾರೆ.

ತಮಿಳುನಾಡು ಚುನಾವಣೆ, ಜನವರಿ 23ರಂದು ಎನ್​ಡಿಎ ಪರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Jan 19, 2026 | 2:13 PM

Share

ಚೆನ್ನೈ, ಜನವರಿ 19: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ(Assembly Election)ಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 23 ರಂದು ಮಧುರಾಂತಕಂನಿಂದ ಎನ್‌ಡಿಎ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಎನ್‌ಡಿಎ ಚುನಾವಣಾ ಪ್ರಚಾರವನ್ನು ಔಪಚಾರಿಕವಾಗಿ ಪ್ರಾರಂಭಿಸುವ ಮೂಲಕ ಪ್ರಧಾನಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ತಿಳಿಸಿದ್ದಾರೆ.

ಎನ್‌ಡಿಎ ಮಿತ್ರಪಕ್ಷಗಳ ಅಂತಿಮ ಪಟ್ಟಿಯ ಬಗ್ಗೆ ಕೇಳಿದಾಗ, ನಾಗೇಂದ್ರನ್ ಹೆಸರುಗಳ ಬಗ್ಗೆ ಮೌನವಾಗಿದ್ದರು ಆದರೆ ತಮ್ಮ ಪಕ್ಷವು ಬಲವಾದ ಪ್ರದರ್ಶನ ನೀಡುವ ಭರವಸೆ ನೀಡಿದರು. ಎನ್‌ಡಿಎ ಮೈತ್ರಿಕೂಟದ ಅಂತಿಮ ಪಟ್ಟಿಯಲ್ಲಿ ಟಿಟಿವಿ ದಿನಕರನ್ ಅವರ ಎಎಂಎಂಕೆ, ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ಮತ್ತು ಡಿಎಂಡಿಕೆ ಸೇರ್ಪಡೆಯಾಗುವ ಸಾಧ್ಯತೆಯ ಬಗ್ಗೆ ನಿರಂತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಾಗೇಂದ್ರನ್, ಯಾವುದೇ ನಿರ್ದಿಷ್ಟ ಪಕ್ಷ ಅಥವಾ ನಾಯಕನ ಹೆಸರನ್ನು ಹೇಳಲು ನಿರಾಕರಿಸಿದರು.

ಎಐಎಡಿಎಂಕೆ ಈಗಾಗಲೇ ಪಿಎಂಕೆಯ ಒಂದು ಬಣದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಂಸ್ಥಾಪಕ ಡಾ. ರಾಮದಾಸ್ ತಮ್ಮ ಮಗ ಅನ್ಬುಮಣಿ ರಾಮದಾಸ್ ಅವರನ್ನು ಹೊರಹಾಕಿದ ನಂತರ ಪಕ್ಷ ವಿಭಜನೆಯಾಗಿದೆ.ತಂದೆ ಇನ್ನೂ ಮೈತ್ರಿಗಳ ಬಗ್ಗೆ ತಮ್ಮ ಅಂತಿಮ ನಿಲುವನ್ನು ಬಹಿರಂಗಪಡಿಸಿಲ್ಲ, ಆದರೆ ಅನ್ಬುಮಣಿ ಈಗಾಗಲೇ ಎಐಎಡಿಎಂಕೆ ಜೊತೆ ಕೈಜೋಡಿಸಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಟಿವಿಕೆ ಡಿಎಂಕೆ ಮತ್ತು ಬಿಜೆಪಿ ಎರಡರಿಂದಲೂ ಬಹಿರಂಗವಾಗಿ ಸಮಾನ ಅಂತರ ಕಾಯ್ದುಕೊಂಡಿದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಗೆ ನಟ ವಿಜಯ್ ಸಿಎಂ ಅಭ್ಯರ್ಥಿ; ಟಿವಿಕೆ ಅಧಿಕೃತ ಘೋಷಣೆ

ಆದಾಗ್ಯೂ, ಎಐಎಡಿಎಂಕೆಯ ಒಂದು ಭಾಗ ನಾಯಕರು ವಿಜಯ್ ತಂಡದೊಂದಿಗೆ ರಹಸ್ಯ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಆಕ್ರೋಶವು ಈ ಬಾರಿ ಆಡಳಿತಾರೂಢ ಸ್ಟಾಲಿನ್ ಸರ್ಕಾರವನ್ನು ದುರ್ಬಲಗೊಳಿಸಬಹುದು ಎಂಬುದು ಬಿಜೆಪಿಯ ನಂಬಿಕೆಯಾಗಿದೆ.

ಇದನ್ನೇ ಲಾಭ ಮಾಡಿಕೊಳ್ಳಲು ಪ್ರಧಾನಿ ಮೋದಿಯವರಿಂದ ಪ್ರಚಾರವನ್ನು ಮೊದಲೇ ಪ್ರಾರಂಭಿಸಲು ಮುಂದಾಗಿದೆ. ಪ್ರಧಾನಿ ಮೋದಿ ಮುಂಬರುವ ವಾರಗಳಲ್ಲಿ ತಮಿಳುನಾಡಿನಾದ್ಯಂತ ಸರಣಿ ಪ್ರಚಾರ ಆರಂಭಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ