ರಾಜಮಾತೆ ಸ್ಮರಣಾರ್ಥ ಇಂದು ಬಿಡುಗಡೆಯಾಗಲಿದೆ 100 ರೂ ನಾಣ್ಯ..

| Updated By: ಸಾಧು ಶ್ರೀನಾಥ್​

Updated on: Oct 12, 2020 | 10:12 AM

ದೆಹಲಿ: ರಾಜಮಾತೆ ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸ್ಮರಣಾರ್ಥ ಇಂದು ಪ್ರಧಾನಿ ನರೇಂದ್ರ ಮೋದಿ 100 ರೂ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡಲಾಗುತ್ತೆ. ಈ ಮೂಲಕ ರಾಜಮಾತೆಗೆ ಗೌರವ ಸಮರ್ಪಣೆ ಮಾಡಲಾಗುತ್ತೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯರಾಜೇ ಸಿಂಧಿಯಾ ಅವರು ಗ್ವಾಲಿಯರ್‌ನ ರಾಜಮಾತಾ ಎಂದೇ ಜನಪ್ರಿಯರು. ವಿಜಯರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ. […]

ರಾಜಮಾತೆ ಸ್ಮರಣಾರ್ಥ ಇಂದು ಬಿಡುಗಡೆಯಾಗಲಿದೆ 100 ರೂ ನಾಣ್ಯ..
Follow us on

ದೆಹಲಿ: ರಾಜಮಾತೆ ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸ್ಮರಣಾರ್ಥ ಇಂದು ಪ್ರಧಾನಿ ನರೇಂದ್ರ ಮೋದಿ 100 ರೂ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡಲಾಗುತ್ತೆ. ಈ ಮೂಲಕ ರಾಜಮಾತೆಗೆ ಗೌರವ ಸಮರ್ಪಣೆ ಮಾಡಲಾಗುತ್ತೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯರಾಜೇ ಸಿಂಧಿಯಾ ಅವರು ಗ್ವಾಲಿಯರ್‌ನ ರಾಜಮಾತಾ ಎಂದೇ ಜನಪ್ರಿಯರು. ವಿಜಯರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಸಂಭ್ರಮಾಚರಣೆಯ ಅಂಗವಾಗಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಹಣಕಾಸು ಸಚಿವಾಲಯ ಮುದ್ರಿಸಿದ್ದು, ದಿವಂಗತ ವಿಜಯರಾಜೇ ಸಿಂಧಿಯಾ ಕುಟುಂಬ ಸದಸ್ಯರು ಮತ್ತು ಇತರ ಗಣ್ಯರು ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ದೇಶದ ವಿವಿಧ ಸ್ಥಳಗಳಿಂದ ಸಮಾರಂಭಕ್ಕೆ ಸೇರಲಿದ್ದಾರೆ. ವಿಜಯರಾಜೇ ಸಿಂಧಿಯಾ ಅವರು ಲೋಕಸಭೆಗೆ 7 ಬಾರಿ ಮತ್ತು ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು.

Published On - 7:46 am, Mon, 12 October 20