Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi and Ambulance: ವಾರಾಣಸಿಯಲ್ಲಿ ರೋಡ್​ಶೋ ವೇಳೆ ಮೆರವಣಿಗೆ ವಾಹನ ನಿಲ್ಲಿಸಿ ಆ್ಯಂಬುಲೆನ್ಸ್​ಗೆ ದಾರಿ ಕೊಟ್ಟ ಪ್ರಧಾನಿ ಮೋದಿ

Narendra Modi at Varanasi: ವಾರಾಣಸಿಯಲ್ಲಿ ರೋಡ್ ಶೋ ವೇಳೆ ನರೇಂದ್ರ ಮೋದಿ ಇದ್ದ ಮೆರವಣಿಗೆ ವಾಹನ ಹಿಂದೆ ಬರುತ್ತಿದ್ದ ಆ್ಯಂಬುಲೆನ್ಸ್​ಗೆ ದಾರಿ ಕೊಟ್ಟ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ವಾರಾಣಸಿಗೆ ಎರಡು ದಿನದ ಭೇಟಿ ನೀಡಿದ್ದಾರೆ. ನಾಳೆ ಡಿ. 18ರಂದು ಪ್ರಧಾನಿಗಳು 19,000 ಕೋಟಿ ರೂ ಮೊತ್ತದ 37 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

Modi and Ambulance: ವಾರಾಣಸಿಯಲ್ಲಿ ರೋಡ್​ಶೋ ವೇಳೆ ಮೆರವಣಿಗೆ ವಾಹನ ನಿಲ್ಲಿಸಿ ಆ್ಯಂಬುಲೆನ್ಸ್​ಗೆ ದಾರಿ ಕೊಟ್ಟ ಪ್ರಧಾನಿ ಮೋದಿ
ಮೆರವಣಿಗೆ ವಾಹನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2023 | 7:09 PM

ವಾರಾಣಸಿ, ಡಿಸೆಂಬರ್ 17: ಆ್ಯಂಬುಲೆನ್ಸ್​ಗಳಿಗೆ ದಾರಿ ಬಿಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಈ ಹೊಣೆಗಾರಿಕೆಯಿಂದ ಪ್ರಧಾನಿಯೂ ಹೊರತಲ್ಲ ಎಂಬುದನ್ನು ನರೇಂದ್ರ ಮೋದಿ ತೋರಿಸಿದ್ದಾರೆ. ವಾರಾಣಸಿಗೆ ಭೇಟಿ ನೀಡಿದ ವೇಳೆ ರೋಡ್​ಶೋ ನಡೆಸುತ್ತಿರುವಾಗ ಪ್ರಧಾನಿ ತಾವಿದ್ದ ವಾಹನ (Cavalcade) ನಿಲ್ಲಿಸಿ ಆ್ಯಂಬುಲೆನ್ಸ್​ಗೆ ದಾರಿ ಬಿಟ್ಟ ಘಟನೆ ವರದಿಯಾಗಿದೆ. ಎಎನ್​ಐ ಸುದ್ದಿಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದೆ.

ರೋಡ್​ಶೋನದಲ್ಲಿ ನರೇಂದ್ರ ಮೋದಿ ಅವರು ವಾಹನವೊಂದರಲ್ಲಿ ಕುಳಿತು ಪಾಲ್ಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಜನರು ನೆರೆದು ಸ್ವಾಗತ ಕೋರಿದ್ದರು. ಈ ವೇಳೆ ಆ್ಯಂಬುಲೆನ್ಸ್ ಕೂಡ ಅದೇ ಹಾದಿಯಲ್ಲಿ ಸಾಗಿತ್ತು. ಮೆರಣಿಗೆ ವಾಹನದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಚಾಲಕನಿಗೆ ಹೇಳಿ ವಾಹನವನ್ನು ತುಸು ಬದಿಗೆ ಸರಿಸಿ, ಆ್ಯಂಬುಲೆನ್ಸ್ ಸಾಗಿ ಹೋಗಲು ದಾರಿ ಸಿಗಲು ಸಹಾಯ ಮಾಡಿದ್ದರು.

ನರೇಂದ್ರ ಮೋದಿ ವಾರಾಣಸಿಗೆ ಮುನ್ನ ಗುಜರಾತ್​ನ ಸೂರತ್​ನಲ್ಲಿ ಡೈಮಂಡ್ ಬೋರ್ಸ್ ಉದ್ಘಾಟನೆ ಮತ್ತು ಏರ್ಪೋರ್ಟ್ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟನೆ ಮಾಡಿದ್ದರು. ವಾರಾಣಸಿಗೆ ಅವರು ಎರಡು ದಿನ ಭೇಟಿಯಲ್ಲಿದ್ದಾರೆ. ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಅವರು ಪಾಲ್ಗೊಂಡು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ: ವಾರಾಣಸಿಯಲ್ಲಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ; ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ

ಕಾಶಿಯ ನಮೋ ಘಾಟ್​ನಲ್ಲಿ ಅವರು ಕಾಶಿ ತಮಿಳ್ ಸಂಗಮಮ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ಯಾಕುಮಾರಿಯಿಂದ ವಾರಾಣಸಿಯವರೆಗೆ ತಮಿಳ್ ಸಂಗಮಮ್ ರೈಲನ್ನು ಉದ್ಘಾಟಿಸಿದ್ದಾರೆ.

ನಾಳೆಯೂ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಒಟ್ಟು 19,000 ಕೋಟಿ ರೂ ಮೊತ್ತದ 37 ಯೋಜನೆಗಳಿಗೆ ಚಾಲನೆ ಸಿಗಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ