ನಾಸಿಕ್: ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆ
ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಸಿಕ್ನಲ್ಲಿ ನಡೆದಿದೆ. ಇಗತ್ಪುರಿ ತಾಲೂಕಿನ ಪ್ರಮುಖ ಮಾರುಕಟ್ಟೆ ಸ್ಥಳವಾದ ನಾಸಿಕ್ನ ಘೋಟಿಯಾ ಸುಧಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 6 ರಂದು ಸಂಜೆ 7.45 ರ ಸುಮಾರಿಗೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ನಾಸಿಕ್, ಆಗಸ್ಟ್ 08: ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಸಿಕ್ನಲ್ಲಿ ನಡೆದಿದೆ. ಇಗತ್ಪುರಿ ತಾಲೂಕಿನ ಪ್ರಮುಖ ಮಾರುಕಟ್ಟೆ ಸ್ಥಳವಾದ ನಾಸಿಕ್ನ ಘೋಟಿಯಾ ಸುಧಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 6 ರಂದು ಸಂಜೆ 7.45 ರ ಸುಮಾರಿಗೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ದಿನೇಶ್ ದೇವಿದಾಸ್ ಸಾವಂತ್ ( 38) ಮತ್ತು ಅವರ ಪತ್ನಿ ವಿಶಾಖಾ ದಿನೇಶ್ ಸಾವಂತ್ ( 33) ನಾಸಿಕ್ ನಿಂದ ಇಗತ್ಪುರಿಗೆ ಹೋಗುವ ರೈಲ್ವೆ ಹಳಿಯಲ್ಲಿ ಚಲಿಸುವ ರೈಲಿನ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಬಗ್ಗೆ ದೇವಿದಾಸ್ ದೇವಾಜಿ ಸಾವಂತ್ ಘೋಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳದಲ್ಲಿ ಪಂಚನಾಮ ನಡೆಸಿ ಘೋಟಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ದುರದೃಷ್ಟಕರ ಮತ್ತು ಆಘಾತಕಾರಿ ಘಟನೆ ಇಗತ್‌ಪುರಿ ತಾಲೂಕು ಮತ್ತು ಘೋಟಿ ಪ್ರದೇಶದಲ್ಲಿ ಸಂಚಲನ ಮೂಡಿಸುತ್ತಿದೆ.
ಮತ್ತಷ್ಟು ಓದಿ: ನನ್ನ ಗಂಡನನ್ನು ಕೊಲೆ ಮಾಡದಿದ್ರೆ ಆತ್ಮಹತ್ಯೆ: ಪ್ರಿಯಕರನೊಂದಿಗಿನ ಮಹಿಳೆಯ ನೌಟಂಕಿ ಆಟ ಬಯಲು
ಮೈಯೆಲ್ಲಾ ರಕ್ತ, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ 7 ವರ್ಷದ ಬಾಲಕಿ ಏಳು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ್ದಳು ಎಂದರೆ ಆಕೆ ಎಷ್ಟೆಲ್ಲಾ ತೊಂದರೆಗಳನ್ನು ಎದುರಿಸಿರಬಹುದು. ಆಕೆಯ ಮೈಯಿಂದ ರಕ್ತ ತೊಟ್ಟಿಕ್ಕುತ್ತಿತ್ತು. ರೈಲ್ವೆ ಹಳಿಯಲ್ಲಿ ರೈಲು ಬರುವ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಲೇ ಇದ್ದಳು. ಆಕೆಗಿನ್ನೂ 7 ವರ್ಷ.
ಈಗಷ್ಟೇ ಪ್ರಪಂಚ ಕಾಣುತ್ತಿರುವ ಮುಗ್ದ ಜೀವ. ಆಗಲೇ ಸಾಯಲು ನಿರ್ಧರಿಸಿದ್ದಳು. ತಂದೆ ವಿಪರೀತ ಹೊಡೆದಿದ್ದ, ಇಡೀ ಮೈಯೆಲ್ಲಾ ರಕ್ತವಾಗಿತ್ತು. ಕೂಡಲೇ ಅಲ್ಲಿ ಹೋಗುತ್ತಿರುವವರು ಯಾರೋ ಆಕೆಯನ್ನು ನೋಡಿ ಓಡಿ ಹೋಗಿ ರಕ್ಷಿಸಿದ್ದಾರೆ. ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರೈಲಿಗೆ ತಲೆ ಕೊಟ್ಟು ಸಾಯೋಣವೆಂದೇ ಇಲ್ಲಿಗೆ ಬಂದಿದ್ದೇನೆ ಎಂದು ರೋಶ್ನಿ ತಿಳಿಸಿದಾಗ ಎಲ್ಲರೂ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಆಕೆಯ ತಂದೆ ದಿನವೂ ಚಿತ್ರಹಿಂಸೆ ಕೊಡುತ್ತಿದ್ದ, ಶಾಲೆಗೂ ಕಳುಹಿಸುತ್ತಿರಲಿಲ್ಲ, ಮನೆ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಿದ್ದ. ಮಹಡಿಯಿಂದ ಕೆಳಗೆ ತಳ್ಳಿದ್ದಾಗಿಯೂ ಆಕೆ ಅಳಲು ತೋಡಿಕೊಂಡಿದ್ದಾಳೆ.
ಹಾಗಾಗಿಯೇ ಆಕೆ ಸಾಯುವ ಆಲೋಚನೆ ಮಾಡಿರುವುದಾಗಿ ತಿಳಿಸಿದ್ದಾಳೆ, ರೋಶ್ನಿಯ ತಂದೆ ಸಂತೋಷ್ ರಜಪೂತ್ಗೆ ಈಗಾಗಲೇ ಐದು ಮಕ್ಕಳಿದ್ದು ಮತ್ತು ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲದ ಕಾರಣ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದೆಲ್ಲಾ ಘಟನೆ ಕೇಳಿದ ರೈತರೊಬ್ಬರು ರೋಶ್ನಿಯನ್ನು ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ. ಅವರಿಗೆ ಈಗಾಗಲೇ ಒಬ್ಬ ಮಗನಿದ್ದು, ಹೆಣ್ಣು ಮಗು ಬೇಕೆಂದು ಬಯಸಿದ್ದರು. ಈಗ ಆ ಬಾಲಕಿಯನ್ನು ಶಾಲೆಗೆ ಸೇರಿಸಿದ್ದು, ಹೊಸ ಬಟ್ಟೆಗಳನ್ನು ಕೂಡ ಕೊಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




