NDA VS INDIA: ನವಭಾರತದ ಆಶಯವೇ ಎನ್​ಡಿಎ: ಪ್ರಧಾನಿ ಮೋದಿ ವ್ಯಾಖ್ಯಾನ

| Updated By: Ganapathi Sharma

Updated on: Jul 18, 2023 | 10:17 PM

ರಾಷ್ಟ್ರೀಯ ವಿರೋಧ ಪಕ್ಷಗಳ ಒಗ್ಗಟ್ಟಿನ ಸಭೆಗೆ ಪ್ರತಿಯಾಗಿ ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಒಕ್ಕೂಡಿಸಿ ಎನ್​ಡಿಎ ಸಭೆ ನಡೆಸಿತು. ಈ ಸಭೆಯಲ್ಲಿ ಮೋದಿ ಅವರು, ದೇಶದ ಜೊತೆ ಜನರ ಸಬಲೀಕರಣ ಮೊದಲು ಎಂಬ ಸಂದೇಶವನ್ನು ಸಾರಿದ್ದಾರೆ.

NDA VS INDIA: ನವಭಾರತದ ಆಶಯವೇ ಎನ್​ಡಿಎ: ಪ್ರಧಾನಿ ಮೋದಿ ವ್ಯಾಖ್ಯಾನ
ಎನ್​ಡಿಎ ಸಭೆ ನಂತರ ಭಾಷಣ ಮಡುತ್ತಿರುವ ಪ್ರಧಾನಿ ನರೇಂದ್ರ ಮೋದಿ
Image Credit source: ANI
Follow us on

ನವದೆಹಲಿ: ಎನ್​ಡಿಎ (NDA) ಎಂದರೆ N- ನವ ಭಾರತ, D- ಅಭಿವೃದ್ಧಿ, A- ಆಶಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವ್ಯಾಖ್ಯಾನಿಸಿದರು. ಎನ್​ಡಿಎ ಸಭೆ ನಂತರ ಮಾತನಾಡಿದ ಅವರು, ನಮಗೆ ದೇಶ ಮೊದಲು, ಪ್ರಗತಿ ಮೊದಲು, ಜನರ ಸಬಲೀಕರಣ ಮೊದಲು ಎಂಬ ಸಂದೇಶವನ್ನು ಸಾರಿದರು. ಜತೆಗೆ, ಪ್ರತಿಪಕ್ಷಗಳ ಮಹಾಮೈತ್ರಿ (INDIA) ವಿರುದ್ಧ ವಾಗ್ದಾಳಿ ನಡೆಸಿದರು. ಬೇರೊಬ್ಬರನ್ನು ಅಧಿಕಾರದಿಂದ ಕೆಳಗಿಳಸಬೇಕು ಎಂಬುದಷ್ಟೇ ಪ್ರತಿಪಕ್ಷಗಳ ಮಹಾಮೈತ್ರಿಯ ಉದ್ದೇಶ. ಆದರೆ, ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಬೇಕೆಂಬುದು ಎನ್​ಡಿಎ ಮೈತ್ರಿಕೂಟದ ಆಶಯ ಎಂದು ಮೋದಿ ಹೇಳಿದರು.

ಬಿಜೆಪಿ ನೇತೃತ್ವದ ಎನ್​ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದೇ ಕಾರಣಕ್ಕೆ ಬಡವರು ಮತ್ತು ರೈತರಿಗೆ ಎನ್​ಡಿಎ ಮೇಲೆ ನಂಬಿಕೆ ಬಂದಿದೆ. ಇದರ ಜೊತೆಗೆ ಬಡತನ ನಿರ್ಮೂಲನೆಯೇ ಎನ್​ಡಿಎ ಸರ್ಕಾರದ  ಗುರಿಯಾಗಿದ್ದು, ಸಾಮಾಜಿಕ ನ್ಯಾಯ ಕೊಡುವ ಕಾರ್ಯ ಮಾಡಿದೆ ಎಂದು ಮೋದಿ ಹೇಳಿದರು.

ಅದೇ ರೀತಿ, ಇಂಡಿಯಾ ಸಭೆಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸಂದೇಶವನ್ನು ರವಾನಿಸಿದ್ದಾರೆ. ನಾವು ಭಾರತದ ಪ್ರಜಾಪ್ರಭುವತ್ವವನ್ನು ರಕ್ಷಿಸಬೇಕಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ನಿರ್ಣಯ ಕೈಗೊಂಡಿದ್ದೇವೆ. ಭಾರತದ ಪ್ರಜಾಪ್ರಭುತ್ವ ಉಳಿವಿಗೆ ನಮ್ಮ ಹೋರಾಟ ನಡೆಯುತ್ತಿದೆ. ಒಂದೇ ಧ್ವನಿಯಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: NDA Meeting: ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ ಶಕ್ತಿ; ಪ್ರಧಾನಿ ಮೋದಿ

NDA ಮೈತ್ರಿಕೂಟದಲ್ಲಿ ಇರುವ ಪಕ್ಷಗಳು ಯಾವುವು?

ಭಾರತೀಯ ಜನತಾ ಪಾರ್ಟಿ (ಬಿಜಿಪಿ), ಶಿವಸೇನಾ (ಏಕನಾಥ ಶಿಂಧೆ ಬಣ), ರಾಷ್ಟ್ರವಾದಿ ಕಾ೦ಗ್ರೆಸ್‌ ಪಾರ್ಟಿ (ಅಜಿತ್‌ ಪವಾರ್‌ ಬಣ), ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರಗೈೆಸಿವ್‌ ಪಾರ್ಟಿ(ಎನ್‌ಡಿಪಿಪಿ), ಆಲ್‌ ಜಾರ್ಮ್ಹಂಡ್‌ ಸ್ಫೂಡೆ೦ಟ್ಸ್‌ ಯುನಿಯನ್‌, ಸಿಕ್ಕಿಮ್‌ ಕ್ರಾಂತಿಕಾರಿ ಮೋರ್ಚಾ, ಮಿಜೋ ನ್ಯಾಷನಲ್‌ ಫ್ರ೦ಟ್‌, ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ (ಪುಷ್ಟಪತಿ ಕುಮಾರ್‌ ಪರಾಸ ನೇತೃತ್ವ), ಆಲ್‌ ಇ೦ಡಿಯಾ ಅಣ್ಣಾ ದ್ರಾವಿಡ್‌ ಮುನ್ನೇತ್ರ ಕಳಗ೦(ಎಐಐಎಡಿಎ೦ಕೆ), ಅಪ್ನಾದಳ್‌(ಸೋನೇಲಾಲ್‌) ನ್ಯಾಷಲನ್‌ ಪೀಪಲ್ಸ್‌ ಪಾರ್ಟಿ, ಇ೦ಡಿಜಿನಸ್‌ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರಾ, ನಾಗಾ ಪೀಪಲ್ಸ್‌ ಫ್ರಂಟ್ (ನಾಗಾಲ್ಯಾ೦ಡ್‌), ರಿಪಬ್ಲಿಕನ್‌ ಪಾರ್ಟಿ ಆಫ್‌ ಇ೦ಡಿಯಾ (ಅಠವಾಳೆ), ಅಸ್ಸೋಮ್‌ ಗಣ ಪರಿಷತ್‌, ಪಟ್ಟಳಿ ಮಕ್ಕಳ ಕಚ್ಚಿ, ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌, ರಾಷ್ಟ್ರೀಯ ಸಮಾಜ ಪಕ್ಷ, ಜನ್‌ ಸುರಾಜ್ಯ ಶಕ್ತಿ ಪಾರ್ಟಿ, ಕುಕಿ ಪೀಪಲ್ಸ್‌ ಕೂಟ, ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿ(ಮೇಘಾಲಯ) ಹಿಲ್‌ ಸ್ಟೇಟ್‌ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ, ಸುಹೇಲ್ನೇವ್‌ ಭಾರತೀಯ ಸಮಾಜ ಪಾರ್ಟಿ, ಶಿರೋಮಣಿ ಅಕಾಲಿ ದಳ (ಸ೦ಯುಕ), ಮಹಾರಾಷ್ಟ್ರವಾದಿ ಗೋಮಾ೦ತಕ ಪಾರ್ಟಿ, ಜನನಾಯಕ ಜನತಾ ಪಾರ್ಟಿ, ಪ್ರಹಾರ್‌ ಜನಶಕ್ತಿ ಪಾರ್ಟಿ, ಭಾರತ ಧರ್ಮ ಜನ ಸೇನಾ, ಕೇರಳ ಕಾಮರಾಜ ಕಾಂಗ್ರೆಸ್‌, ಪಥಿಯಾ ತಮಿಳಗ೦, ಲೋಕ ಜನ ಶಕ್ತಿ ಪಾರ್ಟಿ (ರಾಮ್‌ ವಿಲಾಸ ಪಾಸ್ಟಾನ್‌), ಗೋರ್ಟಾ ನ್ಯಾಷನಲ್‌ ಲಿಬರೇಷನ್‌ ಫ್ರ೦ಟ್‌, ನಿಷಾದ್‌ ಪಾರ್ಟಿ, ಆಲ್‌ ಇ೦ಡಿಯಾ ಎನ್‌ ಆರ್‌ ಕಾಂಗ್ರೆಸ್‌, ಎಚ್‌ಎಂಎ೦, ಜನ ಸೇನಾ ಪಾರ್ಟಿ, ಹರ್ಯಾಣ ಲೋಕಹಿತ್‌ ಪಾರ್ಟಿ.

INDIA ಮೈತ್ರಿಕೂಟದಲ್ಲಿರುವ ಪಕ್ಷಗಳು

ಕಾಂಗ್ರೆಸ್‌, ಆಲ್‌ ಇ೦ಡಿಯಾ ತೃಣಮೂಲ ಕಾ೦ಗ್ರಸ್‌ (ಟಿಎ೦ಸಿ), ಜಾರ್ಮಂ೦ಡ್‌ ಮುಕ್ತಿ ಮೋರ್ಚಾ (ಜಿಎ೦ಎ೦), ರಾಷ್ಟ್ರವಾದಿ ಕಾ೦ಗ್ರೆಸ್‌ ಪಕ್ಷ (ಎನ್‌ಸಿಪಿ- ಶರದ್‌ ಪವಾರ್‌ ಬಣ), ಶಿವಸೇನಾ (ಉದ್ಧವ್‌ ಠಾಕ್ರೆ ಬಣ), ಸಮಜಾವಾದಿ ಪಾರ್ಟಿ (ಎಸ್‌ಪಿ) ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ದ್ರಾವಿಡ್‌ ಮುನ್ನೀತ್ರ ಕಳಗ೦ (ಡಿಎ೦ಕೆ), ಆಮ್‌ ಆದ್ಮಿ ಪಾರ್ಟಿ (ಆಪ್‌) ಸ೦ಯುಕ್ತ ಜನತಾ ದಳ, ಇ೦ಡಿಯನ್‌ ಮುಸ್ಲಿಮ್‌ ಲೀಗ್‌ (ಐಯುಎ೦ಎಲ್‌) ಕೇರಳ ಕಾ೦ಗೆಸ್‌ (ಎ೦), ಕೇರಳ ಕಾ೦ಗ್ರೆಸ್‌ (ಜೋಸೆಫ್‌), ರಾಷ್ಟ್ರೀಯ ಜನತಾ ದಳ(ಆರ್​ಜೆಡಿ), ಅಪ್ನಾ ದಳ್‌, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ), ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗ೦ (ಎ೦ಡಿಎ೦ಕೆ) ವಿಡುತಲೈ ಚಿರುತಾಯಿಗಲ್‌ ಕಚ್ಚಿ (ವಿಸಿಕೆ) ಕೊ೦ಗುನಾಡು ಮಕ್ಕಳ್‌ ದೇಸಾಯಿ ಕಚ್ಜಿ (ಕೆಎ೦ಡಿಕೆ), ಕಮ್ಯುನಿಷ್ಟ್ ಪಾರ್ಟಿ ಆಫ್‌ ಇ೦ಡಿಯಾ (ಮಾರ್ಕ್ಸ್‌ವಾದಿ), ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇ೦ಡಿಯಾ (ಸಿಪಿಐ), ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇ೦ಡಿಯಾ ಲಿಬರೇಷನ್‌ (ಎ೦ಐಎಲ್‌) ರೆವಲೂಷನರೀ ಸೋಷಿಯಲಿಸ್ಟ್‌ ಪಾರ್ಟಿ (ಆರ್‌ಎಸ್‌ಪಿ), ಎ೦ಎ೦ಕೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Tue, 18 July 23