AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi: ಮಹಾಮೈತ್ರಿಯನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್; ಪ್ರಧಾನಿ ಮೋದಿ ವಾಗ್ದಾಳಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ನಡೆದ ಸಭೆ ದೆಹಲಿಯ ಅಶೋಕ ಹೋಟೆಲ್​ನಲ್ಲಿ ನಡೆದ ಎನ್​ಡಿಎ ಸಭೆಯಲ್ಲಿ ಎಐಎಡಿಎಂಕೆ, ಶಿವಸೇನೆ (ಶಿಂಧೆ ಬಣ), ಎನ್​ಪಿಪಿ ಸೇರಿದಂತೆ 26 ಪಕ್ಷಗಳ ನಾಯಕರು ಭಾಗವಹಿಸಿದ್ದಾರೆ.

PM Modi: ಮಹಾಮೈತ್ರಿಯನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್; ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿImage Credit source: PTI
ಹರೀಶ್ ಜಿ.ಆರ್​.
| Edited By: |

Updated on:Jul 18, 2023 | 10:30 PM

Share

ನವದೆಹಲಿ, ಜುಲೈ 18: ಎನ್​ಡಿಎ ಮೈತ್ರಿಕೂಟವು ದೇಶದ ಎಲ್ಲಾ ಜನರ ವಿಶ್ವಾಸ ಗಳಿಸಿದೆ. ಇಡೀ ವಿಶ್ವವೇ ಭಾರತವನ್ನು ಅಭಿವೃದ್ಧಿ ದೃಷ್ಟಿಕೋನದಿಂದ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ದೆಹಲಿಯಲ್ಲಿ ನಡೆದ ಎನ್​ಡಿಎ ಮಿತ್ರಪಕ್ಷಗಳ (National Democratic Alliance) ಸಭೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್​ಡಿಎ ಅಂದರೆ ನ್ಯೂ ಇಂಡಿಯಾ ಡೆವಲಪ್​ಮೆಂಟ್​ ಆಸ್ಪಿರೇಷನ್​. ಈ ಮೈತ್ರಿಕೂಟ ಯಾರನ್ನೂ ಅಧಿಕಾರದಿಂದ ಹೊರಗಿಡಲು ಮಾಡಿದ್ದಲ್ಲ. ದೇಶದಲ್ಲಿ ಸ್ಥಿರವಾದ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ನಾವು ಯಾವತ್ತೂ ನಕರಾತ್ಮಕ ರಾಜಕಾರಣ ಮಾಡಿಲ್ಲ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನಾವು ಪ್ರಯತ್ನ ಮಾಡಿದ್ದೇವೆ. ನಾವೆಲ್ಲರೂ ಒಂದು ಗುರಿ ಸಾಧಿಸಲು ಮುನ್ನುಗ್ಗುತ್ತಿದ್ದೇವೆ. ಆದರೆ, ಅಭಿವೃದ್ಧಿ ವಿಚಾರದಲ್ಲೂ ವಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಮೋದಿ ಟೀಕಿಸಿದರು.

ಎನ್‌ಡಿಎಯ 25 ವರ್ಷಗಳ ಈ ಪಯಣಕ್ಕೆ ಮತ್ತೊಂದು ಕಾಕತಾಳೀಯ ಸಂಗತಿಯೊಂದಿದೆ. ಮುಂಬರುವ 25 ವರ್ಷಗಳಲ್ಲಿ ನಮ್ಮ ದೇಶವು ದೊಡ್ಡ ಗುರಿಯನ್ನು ಸಾಧಿಸಲು ದೊಡ್ಡ ಹೆಜ್ಜೆಗಳನ್ನು ಇಡುತ್ತಿರುವ ಸಮಯ ಇದು. ಈ ಗುರಿಯು ಅಭಿವೃದ್ಧಿ ಹೊಂದಿದ ಭಾರತ, ಸ್ವಾವಲಂಬಿ ಭಾರತವಾಗಿದೆ ಎಂದು ಮೋದಿ ಹೇಳಿದರು.

ಎನ್​ಡಿಎ ಎಂದರೇನು? ಮೋದಿ ವ್ಯಾಖ್ಯಾನ ಹೀಗಿದೆ

ಎನ್​ಡಿಎ ಅಂದರೆ ಎನ್ – ನ್ಯೂ ಇಂಡಿಯಾ, ಡಿ – ಡೆವಲಪ್​ಮೆಂಟ್ ಹಾಗೂ ಎ – ಆಸ್ಪಿರೇಷನ್ ಎಂದು ಮೋದಿ ವ್ಯಾಖ್ಯಾನಿಸಿದರು. ನಾವು ಬಡತನವನ್ನು ಬಡವರ ಶಕ್ತಿಯಿಂದಲೇ ನಿರ್ಮೂಲನೆ ಮಾಡುತ್ತೇವೆ. ದೇಶದ ಜನರ ಅಭಿವೃದ್ಧಿಯೇ ಎನ್​ಡಿಎ ಮೈತ್ರಿಕೂಟದ ವಿಚಾರಧಾರೆ. ಬಡತನ ನಿರ್ಮೂಲನೆಯೇ ಎನ್​ಡಿಎ ಮೈತ್ರಿಕೂಟದ ಗುರಿ. ದೇಶದ ಬಡವರು, ಯುವಕರು, ದಲಿತರು, ಆದಿವಾಸಿಗಳು ಮಹಿಳೆಯರು ಎನ್​ಡಿಎ ಒಕ್ಕೂಟದ ಜೊತೆ ಇದ್ದಾರೆ ಎಂದು ಪ್ರಧಾನಿ ಹೇಳಿದರು. ಎನ್‌ಡಿಎಗೆ ರಾಷ್ಟ್ರ ಮೊದಲು, ದೇಶದ ಭದ್ರತೆ ಮೊದಲು, ಪ್ರಗತಿ ಮೊದಲು ಮತ್ತು ಜನರ ಸಬಲೀಕರಣ ಮೊದಲು ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: NDA Meeting: ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ ಶಕ್ತಿ; ಪ್ರಧಾನಿ ಮೋದಿ

ಜನಾದೇಶಕ್ಕೆ ಅವಮಾನ ಮಾಡಿಲ್ಲ; ಮೋದಿ

ನಾವು ವಿರೋಧ ಪಕ್ಷದ ಸ್ಥಾನಲ್ಲಿದ್ದಾಗಲೂ ಸಕಾರಾತ್ಮಕ ರಾಜಕಾರಣ ಮಾಡಿದ್ದೇವೆ. ವಿರೋಧ ಪಕ್ಷದಲ್ಲಿ ನಾವು ಆಗಿನ ಸರ್ಕಾರದ ಹಗರಣಗಳನ್ನು ಹೊರತಂದಿದ್ದೇವೆ. ಆದರೆ ಜನಾದೇಶಕ್ಕೆ ಅವಮಾನ ಮಾಡಿಲ್ಲ. ಆಳುವ ಸರ್ಕಾರಗಳ ವಿರುದ್ಧ ನಾವು ಎಂದಿಗೂ ವಿದೇಶಿ ಶಕ್ತಿಗಳ ಸಹಾಯವನ್ನು ತೆಗೆದುಕೊಂಡಿಲ್ಲ. ದೇಶದ ಅಭಿವೃದ್ಧಿ ಯೋಜನೆಗಳಲ್ಲಿ ನಾವು ಎಂದಿಗೂ ಅಡೆತಡೆಗಳನ್ನು ಸೃಷ್ಟಿಸಿಲ್ಲ ಎಂದು ಮೋದಿ ಹೇಳಿದರು.

ಮಹಾಮೈತ್ರಿ ವಿರುದ್ಧ ಮೋದಿ ವಾಗ್ದಾಳಿ

ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ಮಹಾ ಮೈತ್ರಿಕೂಟದ ಬಗ್ಗೆ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವು ಮಹಾಮೈತ್ರಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಆದರೆ, ಎನ್‌ಡಿಎ ಮೈತ್ರಿಕೂಟವು ಯಾರನ್ನೋ ಅಧಿಕಾರದಿಂದ ಇಳಿಸಲು ಮಾಡಿದ್ದಲ್ಲ ಎಂದು ಮೋದಿ ಹೇಳಿದರು. ಕೆಲ ರಾಜ್ಯಗಳು ಕೇಂದ್ರದ ಯೋಜನೆ ಜಾರಿ ಮಾಡಲು ಬಿಟ್ಟಿಲ್ಲ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಪರಿಸ್ಥಿತಿ ಬಂತು. ಬಡವರ ಅಭಿವೃದ್ಧಿಯಲ್ಲೂ ರಾಜಕೀಯ ಲೆಕ್ಕಾಚಾರ ಹಾಕುತ್ತಾರೆ ಎಂದು ಮೋದಿ ಕುಟುಕಿದರು.

ಇದನ್ನೂ ಓದಿ: NDA VS INDIA: ನವಭಾರತದ ಆಶಯವೇ ಎನ್​ಡಿಎ: ಪ್ರಧಾನಿ ಮೋದಿ ವ್ಯಾಖ್ಯಾನ

ದೇಶದಲ್ಲಿ 10 ಕೋಟಿ ಜನರ ಹೆಸರಲ್ಲಿ ಹಣ ಪೋಲು ಆಗುವುದಕ್ಕೆ ತಡೆಯೊಡ್ಡಿದ್ದೇವೆ. ನಮ್ಮ ಸರ್ಕಾರ ಬರುವ ಮುನ್ನ 10 ಕೋಟಿ ಜನರು ನಕಲಿ ಫಲಾನುಭವಿಗಳಾಗಿದ್ದರು. 30 ಲಕ್ಷ ಕೋಟಿ ರೂಪಾಯಿಯನ್ನು ನೇರ ನಗದು ವರ್ಗಾವಣೆ ಮೊಲಕ ದೇಶದ ಜನರ ಖಾತೆಗೆ ಹಾಕಲಾಗಿದೆ ಎಂದು ಮೋದಿ ಹೇಳಿದರು.

ಮೋದಿ ಮಣಿಸುವುದಷ್ಟೇ ಅವರ ಉದ್ದೇಶ, ದೇಶದ ಜನರಿಗೆ ಒಳಿತು ಮಾಡುವುದಲ್ಲ; ಮೋದಿ

ಅವರು (ಪ್ರತಿಪಕ್ಷಗಳು) ಭಾಷೆ ದೇಶವನ್ನೇ ಒಡೆಯುವ ಸಾಧನ ಮಾಡಿಸಿಕೊಂಡರು. ನಾವು ದೇಶದ ಜನರನ್ನು ಜೋಡಿಸುತ್ತೇವೆ. ಅವರು ದೇಶದ ಜನರನ್ನು ವಿಭಜಿಸುತ್ತಾರೆ. ಚಿಕ್ಕ ಚಿಕ್ಕ ಸ್ವಾರ್ಥಕ್ಕಾಗಿ ಎಲ್ಲರೂ ಒಂದಾಗಿದ್ದಾರೆ. ಕೇರಳದಲ್ಲಿ ಎಡಪಂಥೀಯರು ಹಾಗೂ ಕಾಂಗ್ರೆಸ್​ ನಡುವಿನ ಸಂಭದ ಏನು ಎಂಬುದು ಎಲ್ಲರಿಗೂ ಗೊತ್ತು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ ಹಾಗೂ ಎಡಪಂಥೀಯರ ನಡುವಿನ ಸಂಬಂಧ ಏನೆಂಬುದು ಎಲ್ಲರಿಗೂ ತಿಳಿದಿದೆ. ಮೋದಿಯನ್ನು ಹಣಿಯಲು ಈ ಒಕ್ಕೂಟ ಕೆಲಸ ಮಾಡುತ್ತಿದೆಯೇ ವಿನಃ ದೇಶದ ಜನರಿಗೆ ಒಳಿತು ಉಂಟುಮಾಡಲು ಅಲ್ಲ ಎಂದು ಮೋದಿ ದೂರಿದರು.

ಇದನ್ನೂ ಓದಿ: INDIA: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ನಾಮಕರಣ; ಮಲ್ಲಿಕಾರ್ಜುನ ಖರ್ಗೆ ಘೋಷಣೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ನಡೆದ ಸಭೆ ದೆಹಲಿಯ ಅಶೋಕ ಹೋಟೆಲ್​ನಲ್ಲಿ ನಡೆದ ಎನ್​ಡಿಎ ಸಭೆಯಲ್ಲಿ ಎಐಎಡಿಎಂಕೆ, ಶಿವಸೇನೆ (ಶಿಂಧೆ ಬಣ), ಎನ್​ಪಿಪಿ, ಎನ್​ಡಿಪಿಪಿ, ಎಸ್​ಕೆಎಂ, ಜೆಜೆಪಿ, ಎಜೆಎಸ್​​ಯು, ಆರ್​ಪಿಐ, ಎಂಎನ್​ಎಫ್, ತಮಿಳು ಮನಿಲಾ ಕಾಂಗ್ರೆಸ್, ಎಎಂಕೆಎಂಕೆ, ಐಪಿಎಫ್​ಟಿ, ಬಿಪಿಪಿ, ಪಟ್ಟಾಲಿ ಮಕ್ಕಳ್ ಕಚ್ಚಿ, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ಅಪ್ನಾ ದಳ, ಅಸ್ಸಾಂ ಗಣ ಪರಿಷತ್, ನಿಶಾದ್ ಪಾರ್ಟಿ, ಜನಸೇನಾ, ಯುಪಿಪಿಎಲ್, ಎಐಆರ್​​ಎನ್​ಸಿ, ಶಿರೋಮಣಿ ಅಕಾಲಿ ದಳ, ಎನ್​ಸಿಪಿ (ಅಜಿತ್ ಪವಾರ್ ಬಣ), ಲೋಕ ಜನಶಕ್ತಿ ಪಕ್ಷ, ಹಿಂದೂಸ್ಥಾನಿ ಅವಾಮ್ ಮೋರ್ಚಾ, ಆರ್​ಎಲ್​ಎಸ್​ಪಿ, ವಿಐಪಿ, ಎಸ್​ಬಿಎಸ್​ ಪಕ್ಷ ಸೇರಿದಂತೆ 38 ರಾಜಕೀಯ ಪಕ್ಷಗಳು ಭಾಗವಹಿಸಿವೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Tue, 18 July 23

Follow Us
ಹರೀಶ್ ಜಿ.ಆರ್​.
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್