NDA Meeting: ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ ಶಕ್ತಿ; ಪ್ರಧಾನಿ ಮೋದಿ

ನಾವು ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ. ಇದು ಅಂಬೇಡ್ಕರ್, ಲೋಹಿಯಾ ಹೇಳಿದ‌ ಸಾಮಾಜಿಕ ನ್ಯಾಯವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.

NDA Meeting: ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ ಶಕ್ತಿ; ಪ್ರಧಾನಿ ಮೋದಿ
ಎನ್​ಡಿಎ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on:Jul 18, 2023 | 10:23 PM

ನವದೆಹಲಿ: ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ, ನಮಗೆ ಅದು ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ದೆಹಲಿಯಲ್ಲಿ ಎನ್​ಡಿಎ (NDA) ಮಿತ್ರಪಕ್ಷಗಳ ಸಭೆಯ ನಂತರ ಮಾತನಾಡಿದ ಅವರು, ಎನ್​ಡಿಎ ಮೈತ್ರಿಕೂಟದಲ್ಲಿ ಯಾವ ಪಕ್ಷವೂ ದೊಡ್ಡದಲ್ಲ, ಯಾವುದೂ ಸಣ್ಣದಲ್ಲ. ಲೋಕಸಭೆ ಚುನಾವಣೆಯಲ್ಲಿ 2 ಅವಧಿಯಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿದೆ. ಆದರೂ ನಾವು ಎನ್‌ಡಿಎ ಒಕ್ಕೂಟದ ಸರ್ಕಾರ ರಚನೆ ಮಾಡಿದ್ದೆವು. ನಮಗೆ ದೇಶದ ಜನರ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.

ನಮ್ಮಲ್ಲಿ (ಎನ್​ಡಿಎ) ವಂಚಿತರು, ಶೋಷಿತರ ನಡುವೆ ಕೆಲಸ ಮಾಡುವ ಪಕ್ಷಗಳಿವೆ. ನಮ್ಮ ಒಕ್ಕೂಟ ಮುಖ್ಯ ಉದ್ದೇಶವೇ ದೇಶ, ಅಭಿವೃದ್ಧಿ ಮೊದಲು ಎಂಬುದು. ಅಧಿಕಾರಕ್ಕೆ ಬಂದ ಮೇಲೆ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಹೀಗಾಗಿ ಬಡವರು, ರೈತರು ಎನ್‌ಡಿಎ ಸರ್ಕಾರವನ್ನು ನಂಬಿದ್ದಾರೆ. ದೇಶದ ಬಡವರಿಗೆ ಒಂದು ಮನೆ ಬೇಕು, ಬ್ಯಾಂಕ್ ಸಾಲ ಬೇಕು. ಇದರಿಂದ ಅವರ ಕನಸುಗಳಿಗೆ ರೆಕ್ಕೆ ಬರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ. ಇದು ಅಂಬೇಡ್ಕರ್, ಲೋಹಿಯಾ ಹೇಳಿದ‌ ಸಾಮಾಜಿಕ ನ್ಯಾಯವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.

ಇದನ್ನೂ ಓದಿ: PM Modi: ಮಹಾಮೈತ್ರಿಯನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್; ಪ್ರಧಾನಿ ಮೋದಿ ವಾಗ್ದಾಳಿ

ಬಡತನ ನಿರ್ಮೂಲನೆಯೇ ಎನ್​ಡಿಎ ಮೈತ್ರಿಕೂಟದ ಗುರಿಯಾಗಿದೆ. ಈ ಹಿಂದೆ ಬಡವರನ್ನು ಬಡವರಾಗಿಯೇ ಉಳಿಸುವ ಸಂಚು ಇತ್ತು. ಆ ಸಂಚನ್ನು ಎನ್​ಡಿಎ ಸರ್ಕಾರದ ಯೋಜನೆಗಳು ಛಿದ್ರಗೊಳಿಸಿವೆ ಎಂದು ಪರೋಕ್ಷಗಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಕಠಿಣ ಪರಿಶ್ರಮ, ಪ್ರಯತ್ನಗಳಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ದೇಹದ ಪ್ರತಿಯೊಂದು ಕಣವೂ, ನನ್ನ ಸಮಯದ ಪ್ರತಿ ಕ್ಷಣವೂ ದೇಶಕ್ಕಾಗಿ ಸಮರ್ಪಿತವಾಗಿದೆ ಎಂದು ಮೋದಿ ಹೇಳಿದರು.

ಭಾರತದ ವಿಚಾರದಲ್ಲಿ ರಾಜಕೀಯವಿಲ್ಲ, ನಮ್ಮದು ರಾಜಕೀಯ ರಹಿತ ಇಂಡಿಯಾ; ಮೋದಿ

ರಾಜಕೀಯದಲ್ಲಿ ಸ್ಪರ್ಧಾತ್ಮಕತೆ ಇರಬೇಕೇ ಹೊರತು ಹಗೆತನ ಇರಬಾರದು. ದುರದೃಷ್ಟವಶಾತ್, ಇಂದು ವಿರೋಧ ಪಕ್ಷವು ನಮ್ಮನ್ನು ನಿಂದಿಸುವುದನ್ನು ತನ್ನ ಕಾಯಕವನ್ನಾಗಿ ಮಾಡಿಕೊಂಡಿದೆ. ನಾವು ಯಾವಾಗಲೂ ಭಾರತವನ್ನು ರಾಜಕೀಯ ಹಿತಾಸಕ್ತಿಗಳಿಗಿಂತ ಹೊರತಾಗಿ ಮತ್ತು ಮಿಗಿಲಾಗಿ ಇರಿಸಿದ್ದೇವೆ. ಪ್ರಣಬ್ ದಾ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ್ದು ಎನ್‌ಡಿಎ ಸರ್ಕಾರ. ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್, ಗುಲಾಂ ನಬಿ ಆಜಾದ್, ಮುಜಾಫರ್ ಬೇಗ್ ಮತ್ತು ಬಿಜೆಪಿ-ಎನ್‌ಡಿಎ ಜೊತೆ ಇಲ್ಲದ ಅನೇಕ ನಾಯಕರಿಗೆ ಎನ್‌ಡಿಎ ಸರ್ಕಾರ ಪದ್ಮ ಪ್ರಶಸ್ತಿಯನ್ನು ನೀಡಿದೆ. ನಾವು ಯಾವಾಗಲೂ ಭಾರತವನ್ನು ಎಲ್ಲಾ ರಾಜಕೀಯ ಹಿತಾಸಕ್ತಿಗಳಿಗಿಂತ ಮುಕ್ತವಾಗಿ ಇರಿಸಿದ್ದೇವೆ ಎಂದು ಮೋದಿ ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Tue, 18 July 23