AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡುಗು ಸಹಿತ ಗಾಳಿ ಮಳೆ; ದೆಹಲಿ ವಿಮಾನ ನಿಲ್ದಾಣದಿಂದ 22 ವಿಮಾನಗಳ ಮಾರ್ಗ ಬದಲಾವಣೆ

Delhi Rain: ಸತತ ಎರಡನೇ ದಿನವೂ ಗುಡುಗು ಸಹಿತ ಮಳೆ, ಬಲವಾದ ಗಾಳಿ ಬೀಸಿದ್ದು, ಶುಕ್ರವಾರ ಕೂಡ ಇದೇ ರೀತಿಯ ಹವಾಮಾನವನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಗುಡುಗು ಸಹಿತ ಗಾಳಿ ಮಳೆ; ದೆಹಲಿ ವಿಮಾನ ನಿಲ್ದಾಣದಿಂದ 22 ವಿಮಾನಗಳ ಮಾರ್ಗ ಬದಲಾವಣೆ
ದೆಹಲಿ ಮಳೆ
ರಶ್ಮಿ ಕಲ್ಲಕಟ್ಟ
|

Updated on:Mar 30, 2023 | 10:13 PM

Share

ದೆಹಲಿ: ದೆಹಲಿಯಲ್ಲಿ ಗುರುವಾರ ಸಂಜೆ ಭಾರೀ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ (Delhi Airport) 22 ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಈ ವಿಮಾನಗಳನ್ನು ಲಕ್ನೋ, ಜೈಪುರ, ಅಹಮದಾಬಾದ್, ಚಂಡೀಗಢ ಮತ್ತು ಡೆಹ್ರಾಡೂನ್‌ಗೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ(Delhi Rain) ಸುರಿದಿದೆ. 11 ವಿಮಾನಗಳನ್ನು ಲಕ್ನೋಗೆ, 8 ಜೈಪುರಕ್ಕೆ ಮತ್ತು ತಲಾ 1 ವಿಮಾನಗಳನ್ನು ಅಹಮದಾಬಾದ್, ಚಂಡೀಗಢ ಮತ್ತು ಡೆಹ್ರಾಡೂನ್‌ಗೆ ತಿರುಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸತತ ಎರಡನೇ ದಿನವೂ ಗುಡುಗು ಸಹಿತ ಮಳೆ, ಬಲವಾದ ಗಾಳಿ ಬೀಸಿದ್ದು, ಶುಕ್ರವಾರ ಕೂಡ ಇದೇ ರೀತಿಯ ಹವಾಮಾನವನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿಯ ಅಧಿಕೃತ ಮಾರ್ಕರ್ ಎಂದು ಪರಿಗಣಿಸಲಾದ ಸಫ್ದರ್‌ಜಂಗ್ ವೀಕ್ಷಣಾಲಯವು 8.30 ರಿಂದ ರಾತ್ರಿ 8.30 ರ ನಡುವೆ 5.8 ಮಿಮೀ ಮಳೆಯನ್ನು ಪಡೆದಿದೆ.ಪಾಲಂ ವೀಕ್ಷಣಾಲಯವು 1.1 ಮಿಮೀ ಮಳೆಯನ್ನು ಪಡೆದರೆ ಲೋಧಿ ರಸ್ತೆ, ರಿಡ್ಜ್ ಮತ್ತು ಅಯಾನಗರದಲ್ಲಿ ಕ್ರಮವಾಗಿ 7.6 ಮಿಮೀ, 4.5 ಮಿಮೀ ಮಳೆಯಾಗಿದೆ. ಪೂರ್ವ ದೆಹಲಿಯಲ್ಲೂ ಆಲಿಕಲ್ಲು ಮಳೆಯಾಗಿದೆ ಎಂದು ವರದಿಯಾಗಿದೆ.

ಗುರುವಾರ ಸಂಜೆ ಪಟೇಲ್ ನಗರ, ಬುದ್ಧ ಜಯಂತಿ ಪಾರ್ಕ್, ರಾಷ್ಟ್ರಪತಿ ಭವನ, ರಾಜೀವ್ ಚೌಕ್, ದೆಹಲಿ ಕಂಟೋನ್ಮೆಂಟ್, ಇಂಡಿಯಾ ಗೇಟ್, ಸಫ್ದರ್‌ಜಂಗ್ ಮತ್ತು ಲೋಡಿ ರಸ್ತೆಯಲ್ಲಿ ಮಳೆ ಸುರಿದಿದೆ.

ಇದನ್ನೂ ಓದಿ: ಬಿಜೆಪಿ ಊಳಿಗಮಾನ್ಯ ವ್ಯವಸ್ಥೆಯ ಜಮೀನುದಾರನಂತೆ ವರ್ತಿಸುತ್ತಿದೆ: ಕೇಂದ್ರ ವಿರುದ್ಧ ಮಮತಾ ವಾಗ್ದಾಳಿ

ಮಾರ್ಚ್ 30 ಮತ್ತು ಏಪ್ರಿಲ್ 5 ರ ನಡುವೆ ವಾರದ ಹೆಚ್ಚಿನ ದಿನಗಳಲ್ಲಿ ದೆಹಲಿ ಮತ್ತು ಪಂಜಾಬ್, ಚಂಡೀಗಢ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ಪಕ್ಕದ ಪ್ರದೇಶಗಳಲ್ಲಿ ಗುಡುಗು ಸಹಿತ ಲಘು-ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Thu, 30 March 23

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ