ದೆಹಲಿ ಫೆಬ್ರವರಿ 28: ಸರ್ ಸಿವಿ ರಾಮನ್ (C V Raman) ಪೂರ್ತಿ ಹೆಸರು, ಚಂದ್ರಶೇಖರ ವೆಂಕಟ ರಾಮನ್. 1888 ನವೆಂಬರ್ 7ರಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಶೈಕ್ಷಣಿಕ ಕುಟುಂಬದಲ್ಲಿ ಜನನ. ಅಪ್ಪ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಅವರ ತಾಯಿ ಸಂಸ್ಕೃತ ವಿದ್ವಾಂಸರ ವಂಶದಿಂದ ಬಂದವರು. ಭಾರತೀಯ ವಿಜ್ಞಾನಿ ಸರ್ ಸಿವಿ ರಾಮನ್, ರಾಮನ್ ಎಫೆಕ್ಟ್ ಅನ್ನು ಕಂಡುಹಿಡಿದ ನಂತರ 1928 ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ (Nobel Prize)ಲಭಿಸಿತು. ರಾಮನ್ ಅವರ ಸಂಶೋಧನೆಗಳು ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು, ಅವರಿಗೆ ಗೌರವಾರ್ಥವಾಗಿ ಅವರು ಆವಿಷ್ಕಾರ ಮಾಡಿದ ದಿನದಂದು ದೇಶವು ರಾಷ್ಟ್ರೀಯ ವಿಜ್ಞಾನ ದಿನವನ್ನು(National Science Day) ಆಚರಿಸುತ್ತದೆ. ವಿಜ್ಞಾನ ಮತ್ತು ಅದರ ವಿವಿಧ ಅಂಶಗಳಲ್ಲಿ ಆಸಕ್ತಿಯನ್ನು ಬೆಳೆಸಲು ಯುವಕರನ್ನು ಉತ್ತೇಜಿಸಲು ಮತ್ತು ಪ್ರೇರೇಪಿಸಲು ಇದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ವಿಶಾಲ ಜನಸಂಖ್ಯೆಯಲ್ಲಿ ಹೆಚ್ಚಿನ ವೈಜ್ಞಾನಿಕ ಸಾಕ್ಷರತೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
ಕೇವಲ 16 ನೇ ವಯಸ್ಸಿನಲ್ಲಿ, ರಾಮನ್ ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದ್ದಿದ್ದು ಭೌತಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಗೆದ್ದರು. 18 ರ ಹೊತ್ತಿಗೆ, ಅವರು ಸ್ನಾತಕೋತ್ತರ ಅಧ್ಯಯನ ಮಾಡುವಾಗ ಅವರು ಫಿಲಾಸಫಿಕಲ್ ಮ್ಯಾಗಜೀನ್‌ನಲ್ಲಿ ತಮ್ಮ ಅಧ್ಯಯನ ಪ್ರಬಂಧ ಪ್ರಕಟಿಸಿದ್ದರು. ಇದು ಪ್ರೆಸಿಡೆನ್ಸಿ ಕಾಲೇಜಿಗೆ ಮೊದಲನೆಯದು.
ಆರೋಗ್ಯ ಸಮಸ್ಯೆಗಳಿಂದ ರಾಮನ್ ಹೆಚ್ಚಿನ ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ಹೋಗಲು ಸಾಧ್ಯವಾಗಲಿಲ್ಲ. ಬದಲಿಗೆ, ಅವರು 1907 ರಲ್ಲಿ ಹಣಕಾಸು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಕಲ್ಕತ್ತಾದಲ್ಲಿ ಸಹಾಯಕ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು. ಅಲ್ಲಿ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್ (IACS) ನಲ್ಲಿ ಸಂಶೋಧನೆ ಪ್ರಾರಂಭಿಸಿದರು.
ಮುಂದಿನ ದಶಕದಲ್ಲಿ, ಅವರು ಏಕಾಂಗಿಯಾಗಿ 27 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ಕಂಪನಗಳು ಸಂಗೀತ ವಾದ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಅವರು ಹೆಚ್ಚಿನ ಅಧ್ಯಯನ ನಡೆಸಿದ್ದರು.
1921 ರಲ್ಲಿ, ರಾಮನ್ ಲಂಡನ್‌ಗೆ ತಮ್ಮ ಮೊದಲ ಭೇಟಿ ನೀಡಿದರು. ಈ ಹೊತ್ತಿಗೆ, ಅವರು ಈಗಾಗಲೇ ಜೆಜೆ ಥಾಮ್ಸನ್ (ಎಲೆಕ್ಟ್ರಾನ್‌ನ ಅನ್ವೇಷಕ) ಮತ್ತು ಅರ್ನೆಸ್ಟ್ ರುದರ್‌ಫೋರ್ಡ್ (ಅವರ ಪರಮಾಣು ರಚನೆ ಸಂಶೋಧನೆಗೆ ಹೆಸರುವಾಸಿಯಾದವರು) ನಂತಹ ಪ್ರಖ್ಯಾತ ವಿಜ್ಞಾನಿಗಳಿಂದ ಅಕೌಸ್ಟಿಕ್ಸ್‌ಗೆ ನೀಡಿದ ಕೊಡುಗೆಗಳಿಗಾಗಿ ಮೆಚ್ಚುಗೆ ಪಡೆದಿದ್ದರು. ಅಲ್ಲಿಯವರೆಗೆ ಅವರ ಸಂಶೋಧನೆಯು ಪಿಟೀಲು ಮತ್ತು ಸಾಂಪ್ರದಾಯಿಕ ಭಾರತೀಯ ವಾದ್ಯಗಳಾದ ವೀಣೆ ಮತ್ತು ಮೃದಂಗ ಸೇರಿದಂತೆ ಸಂಗೀತ ವಾದ್ಯಗಳ ಹಿಂದಿನ ವಿಜ್ಞಾನದ ಮೇಲೆ ಕೇಂದ್ರೀಕೃತವಾಗಿತ್ತು.
ಇದನ್ನೂ ಓದಿ: Lok Sabha Election: ಉತ್ತರಾಖಂಡದಲ್ಲಿ ಐದು ಲೋಕಸಭಾ ಕ್ಷೇತ್ರಕ್ಕೆ 55 ಆಕಾಂಕ್ಷಿತರ ಪಟ್ಟಿ ಸಿದ್ಧ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ