Himachal Pradesh Political Crisis: ಜೈರಾಮ್ ಠಾಕೂರ್ ಸೇರಿ 15 ಮಂದಿ ಶಾಸಕರು ವಿಧಾನಸಭೆಯಿಂದ ಅಮಾನತು

ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಜೈ ರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದರು ಮತ್ತು ಸದನವನ್ನು ಮುಂದೂಡಿದರು.

Himachal Pradesh Political Crisis: ಜೈರಾಮ್ ಠಾಕೂರ್ ಸೇರಿ 15 ಮಂದಿ ಶಾಸಕರು ವಿಧಾನಸಭೆಯಿಂದ ಅಮಾನತು
ಜೈರಾಮ್ ಠಾಕೂರ್
Image Credit source: Indian Express

Updated on: Feb 28, 2024 | 12:24 PM

ಹಿಮಾಚಲ ಪ್ರದೇಶ(Himachal Pradesh) ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಸ್ಪೀಕರ್ ಚೇಂಬರ್‌ನಲ್ಲಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಬುಧವಾರ ಅಮಾನತುಗೊಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಗದ್ದಲ ಮುಂದುವರೆದಿದೆ, ಒಂದೆಡೆ ಕಾಂಗ್ರೆಸ್​ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದ್ದರೆ ಇನ್ನೊಂದೆಡೆ ಸರ್ಕಾರವನ್ನು ಉಳಿಸಲು ವಿಧಾನಸಭೆಯಲ್ಲಿ ಹೊಸ ಆಟವೇ ನಡೆಯುತ್ತಿದೆ.

ಮಾಜಿ ಮುಖ್ಯಮಂತ್ರಿ ಜೈರಾಮ್ ಥಾಕೂರ್ ಸೇರಿದಂತೆ 15 ಮಂದಿ ಬಿಜೆಪಿ ಶಾಸಕರನ್ನು ವಿಧಾನಸಭೆ ಸ್ಪೀಕರ್ ಅಧಿವೇಶನದಿಂದ ಅಮಾನತು ಮಾಡಿದ್ದಾರೆ. ಯಾವುದೇ ಮತದಾನ ಮಾಡುವುದಾದರೆ ಕೇವಲ 10 ಶಾಸಕರು ಮಾತ್ರ ಅಲ್ಲಿರುತ್ತಾರೆ. ಇದೇ ವೇಳೆ ಯಾವುದೇ ಅಡೆತಡೆಯಿಲ್ಲದೆ ಬಜೆಟ್​ ಮಂಡನೆಯಾಗಲಿದ್ದು, ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುತ್ತದೆ.

ಜೈರಾಮ್ ಠಾಕೂರ್, ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ,ಲೋಕೇಂದ್ರ ಕುಮಾರ್, ವಿನೋದ್ ಕುಮಾರ್, ಹಂಸರಾಜ್, ಜನಕ್​ರಾಜ್, ಬಲ್​ಬೀರ್​ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದ್ರ ಶೋರಿ, ದೀಪ್​ರಾಜ್, ಪುರಣ್​ ಠಾಕೂರ್​, ಇಂದರ್​ ಸಿಂಗ್ ಗಾಂಧಿ ಮತ್ತು ದಿಲೀಪ್​ ಠಾಕೂರ್ ಸೇರಿದಂತೆ ಬಿಜೆಪಿಯಿಂದ ಉಚ್ಛಾಟಿತ ಶಾಸಕರೂ ಇದ್ದಾರೆ.

ಮತ್ತಷ್ಟು ಓದಿ: Himachal Pradesh Political Crisis: ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ

ಸದನದಲ್ಲಿ ಗದ್ದಲ ಎಬ್ಬಿಸಿದಕ್ಕಾಗಿ ಹಾಗೂ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಆದರೆ ಇದು ಅನ್ಯಾಯದ ಕ್ರಮ ಎಂದು ಬಿಜೆಪಿ ಹೇಳುತ್ತಿದ್ದು, ಕಾಂಗ್ರೆಸ್​ ಸರ್ಕಾರವನ್ನು ಉಳಿಸಲು ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ. ಇಂದು ಬೆಳಗ್ಗೆಯೇ ಜೈ ರಾಮ್ ಠಾಕೂರ್ ನೇತೃತ್ವದ ಬಿಜೆಪಿ ನಾಯಕರು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿ ಮಾಡಿದ್ದಾರೆ.

ಸದನದಲ್ಲಿ ವಿಶ್ವಾಸಮತ ಪರೀಕ್ಷೆ ನಡೆದರೆ ಅಥವಾ ಬಜೆಟ್​ ಮಂಡನೆಗೆ ಮತದಾನಕ್ಕೆ ಒತ್ತಾಯಿಸಿದರೆ ಕಾಂಗ್ರೆಸ್​ ಸರ್ಕಾರ ಅಲ್ಪ ಮತಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:14 pm, Wed, 28 February 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us