Himachal Pradesh Political Crisis: ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ
ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ಫೆಬ್ರವರಿ 28 ಬುಧವಾರದಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹಿಮಾಚಲ ಪ್ರದೇಶ(Himachal Pradesh)ದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್(Vikramaditya Singh) ಅವರು ಫೆಬ್ರವರಿ 28 ಬುಧವಾರದಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಅವರು ಬುಧವಾರ ಅಚ್ಚರಿಯ ನಡೆಯಲ್ಲಿ ಹಿಮಾಚಲ ಪ್ರದೇಶ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಎಲ್ಲವೂ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿದೆ ಎಂದು ಮಾಜಿ ಸಿಎಂ ವೀರಭದ್ರ ಸಿಂಗ್ ಪುತ್ರ ಕೂಡ ಹೇಳಿದ್ದಾರೆ.
68 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಶಾಸಕರನ್ನು ಹೊಂದಿದ್ದರೆ ಬಿಜೆಪಿ 25 ಶಾಸಕರನ್ನು ಹೊಂದಿದೆ. ಉಳಿದ ಮೂರು ಸ್ಥಾನಗಳನ್ನು ಸ್ವತಂತ್ರರು ಹೊಂದಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದ ವಿಕ್ರಮಾದಿತ್ಯ ಸಿಂಗ್, “ಸರ್ಕಾರದ ಕಾರ್ಯವೈಖರಿಯ ಬಗ್ಗೆ ನಾನು ಎಂದಿಗೂ ಏನನ್ನೂ ಹೇಳಿಲ್ಲ, ಆದರೆ ಅದನ್ನು ಇಂದು ಸ್ಪಷ್ಟವಾಗಿ ಹೇಳುವುದು ನನ್ನ ಜವಾಬ್ದಾರಿಯಾಗಿದೆ.
ನನಗೆ ಸ್ಥಾನ ಅಥವಾ ಸಚಿವ ಸ್ಥಾನ ಮುಖ್ಯವಲ್ಲ, ನನಗೆ ಹಿಮಾಚಲ ಜನರೊಂದಿಗಿನ ಸಂಬಂಧವು ಅತ್ಯಂತ ಮುಖ್ಯವಾದದ್ದು. ಆದರೆ ಕಳೆದ ಒಂದು ವರ್ಷದಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಹಾಗೂ ಶಾಸಕರನ್ನು ನಡೆಸಿಕೊಂಡಿರುವ ರೀತಿ ನನಗೆ ನೋವುಂಟು ಮಾಡಿದೆ, ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಕೂಡ ನಡೆದಿದೆ ಎಂದಿದ್ದಾರೆ. ಕಳೆದ 2-3 ದಿನಗಳಲ್ಲಿ ನಡೆದ ಘಟನೆಗಳ ಸರಣಿಯು ಪ್ರಜಾಪ್ರಭುತ್ವದಲ್ಲಿ, ಹಿಮಾಚಲ ಪ್ರದೇಶದಲ್ಲಿ ಕಳವಳಕಾರಿ ವಿಷಯವಾಗಿದೆ.
ಮತ್ತಷ್ಟು ಓದಿ: ಹಿಮಾಚಲದಲ್ಲಿ ಅಡ್ಡಮತದಾನದಿಂದ ಬಿಜೆಪಿಗೆ ಗೆಲುವು, ಕಾಂಗ್ರೆಸ್ಗೆ ಆತಂಕ, ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ
ಇದು ಸಂಬಂಧಿಸಿದೆ ಏಕೆಂದರೆ ರಾಜ್ಯದ 70 ಲಕ್ಷ ಜನರು ಸರ್ಕಾರವನ್ನು ಆಯ್ಕೆ ಮಾಡಿದರು ಮತ್ತು ನಂತರ ಜನಾದೇಶವನ್ನು ನೀಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ನಾನು ಸರ್ಕಾರದ ಭಾಗವಾಗಿ ಮುಂದುವರಿಯುವುದು ಸರಿಯಲ್ಲ, ಆದ್ದರಿಂದ ನಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. . ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಮುಂದಿನ ಸಮಯದಲ್ಲಿ, ನಾನು ನನ್ನ ಜನರೊಂದಿಗೆ ವೀಡಿಯೊ ಸಮಾಲೋಚನೆ ನಡೆಸಿ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇನೆ ಎಂದಿದ್ದಾರೆ.
ವಿಕ್ರಮಾದಿತ್ಯ ಸಿಂಗ್ ಮಾತು
#WATCH | Congress MLA Vikramaditya Singh resigns as a minister in the Himachal Pradesh cabinet.
When asked if he will continue in the party, he says, “I am there where I am. In the times to come, I will hold due discussions and deliberations with my people, supporters, and… pic.twitter.com/IsEzTsslB9
— ANI (@ANI) February 28, 2024
24 ಗಂಟೆಯೊಳಗೆ ಬಿಜೆಪಿ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದ ವಿಕ್ರಮಾದಿತ್ಯ ನಾನು ಎಲ್ಲಿದ್ದೇನೆ, ಅಲ್ಲಿಯೇ ಇದ್ದೇನೆ.ಮುಂದಿನ ದಿನಗಳಲ್ಲಿ ನನ್ನ ಜನರು, ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಸೂಕ್ತ ಚರ್ಚೆ ಮತ್ತು ಸಮಾಲೋಚನೆ ನಡೆಸುತ್ತೇನೆ. ಸೂಕ್ತ ಚರ್ಚೆಯ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Wed, 28 February 24