AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶ: ಏಮ್ಸ್​ನ ನಾಲ್ಕನೇ ಮಹಡಿಯಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

ಹಿಮಾಚಲ ಪ್ರದೇಶದ ಬಿಲಾಸ್‌ಪುರ ಏಮ್ಸ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡನೇ ವರ್ಷದ ವಿದ್ಯಾರ್ಥಿ ಏಮ್ಸ್ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾನೆ.

ಹಿಮಾಚಲ ಪ್ರದೇಶ: ಏಮ್ಸ್​ನ ನಾಲ್ಕನೇ ಮಹಡಿಯಿಂದ ಜಿಗಿದು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Feb 12, 2024 | 2:59 PM

Share

ಎಂಬಿಬಿಎಸ್ (MBBS)ವಿದ್ಯಾರ್ಥಿಯೊಬ್ಬ ಏಮ್ಸ್​ನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿಮಾಚಲಪ್ರದೇಶದ ಬಿಲಾಸ್​ಪುರದಲ್ಲಿ ನಡೆದಿದೆ. ಮೃತ, ಎಂಬಿಬಿಎಸ್​ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ, ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆದರೆ ವಿದ್ಯಾರ್ಥಿ ಆತ್ಮಹತ್ಯೆ ಹಿಂದಿರುವ ನಿಖರ ಕಾರಣ ತಿಳಿದುಬಂದಿಲ್ಲ.

ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು , ವಿದ್ಯಾರ್ಥಿಯ ಪೋಷಕರ ಹೇಳಿಕೆಯನ್ನು ಪಡೆಯುವುದು ಇನ್ನೂ ಬಾಕಿ ಇದೆ. ಮಾಹಿತಿ ಪ್ರಕಾರ ಈ ಘಟನೆ ಭಾನುವಾರ ನಡೆದಿದೆ, ವಿದ್ಯಾರ್ಥಿಯೊಬ್ಬ ವಾಶ್​ ರೂಂಗೆ ಹೋಗುತ್ತೇನೆ ಎಂದು ಹೋಗಿದ್ದವ ಹೆಣವಾಗಿದ್ದ.

ಆತ ಬಿದ್ದ ಶಬ್ದವನ್ನು ಕೇಳಿ ಎಲ್ಲರೂ ಅಲ್ಲಿಗೆ ಬಂದರು, ರಕ್ತಸಿಕ್ತವಾಗಿ ಬಿದ್ದಿದ್ದ ಸ್ನೇಹಿತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು, ಆದರೆ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.

ಮತ್ತಷ್ಟು ಓದಿ: ಆಗ್ರಾದಲ್ಲಿ ತಾಯಿ ಹಾಗೂ 12 ವರ್ಷದ ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಮೃತ ವಿದ್ಯಾರ್ಥಿಯನ್ನು ಮಧ್ಯಪ್ರದೇಶದ ಇಂದೋರ್ ನಿವಾಸಿ ಎಕೆ ಲೇಖಿ ಅವರ ಪುತ್ರ ಪರೀಕ್ಷಿತ್ (21) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಡಿಎಸ್ಪಿ ಮದನ್ ಧೀಮಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಆತನ ಪೋಷಕರು ಸಹ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ, ತಕ್ಷಣವೇ ಪೊಲೀಸರು ಆತನ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಎಲ್ಲ ಆಯಾಮಗಳಲ್ಲೂ ನಿಗಾ ಇಟ್ಟಿದ್ದಾರೆ.

ಪರೀಕ್ಷಿತ್ ಹಾಸ್ಟೆಲ್​ನಲ್ಲಿರುತ್ತಿದ್ದ, ಭಾನುವಾರದಂದು ಅವರು ತಮ್ಮ ರೂಮ್‌ಮೇಟ್‌ನೊಂದಿಗೆ ಕೋಣೆಯಲ್ಲಿದ್ದ, 11.30 ರ ಸುಮಾರಿಗೆ ಅವನು ತನ್ನ ರೂಮ್‌ಮೇಟ್‌ಗೆ ವಾಶ್‌ರೂಮ್‌ಗೆ ಹೋಗುವುದಾಗಿ ಹೇಳಿ ಹೊರಬಂದಿದ್ದ. ಬಳಿಕ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ