ಪ್ರಫುಲ್ ಪಟೇಲ್, ಸುಪ್ರಿಯಾ ಸುಳೆ ಎನ್‌ಸಿಪಿ ಕಾರ್ಯಾಧ್ಯಕ್ಷರು; ಶರದ್ ಪವಾರ್ ಘೋಷಣೆ

|

Updated on: Jun 10, 2023 | 2:47 PM

1999 ರಲ್ಲಿ ಪವಾರ್ ಮತ್ತು ಪಿಎ ಸಂಗ್ಮಾ ಅವರು ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿರಿಯ ನೇತಾರ ಈ ಘೋಷಣೆ ಮಾಡಿದ್ದಾರೆ.ಎನ್‌ಸಿಪಿಯ ಪ್ರಮುಖ ನಾಯಕ ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.

ಪ್ರಫುಲ್ ಪಟೇಲ್, ಸುಪ್ರಿಯಾ ಸುಳೆ ಎನ್‌ಸಿಪಿ ಕಾರ್ಯಾಧ್ಯಕ್ಷರು; ಶರದ್ ಪವಾರ್ ಘೋಷಣೆ
ಶರದ್ ಪವಾರ್
Follow us on

ದೆಹಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ಸುಪ್ರಿಯಾ ಸುಳೆ (Supriya Sule) ಮತ್ತು ಪ್ರಫುಲ್ ಪಟೇಲ್ (Praful Patel) ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಘೋಷಿಸಿದ್ದಾರೆ. 1999 ರಲ್ಲಿ ಪವಾರ್ ಮತ್ತು ಪಿಎ ಸಂಗ್ಮಾ ಅವರು ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿರಿಯ ನೇತಾರ ಈ ಘೋಷಣೆ ಮಾಡಿದ್ದಾರೆ.ಎನ್‌ಸಿಪಿಯ ಪ್ರಮುಖ ನಾಯಕ ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.

ಶರದ್ ಪವಾರ್ ಕಳೆದ ತಿಂಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಪಕ್ಷದ ಸದಸ್ಯರು ಮತ್ತು ಇತರ ರಾಜಕೀಯ ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ವಾಪಸ್ ತೆಗೆದುಕೊಂಡಿದ್ದರು.ಪವಾರ್ ಅವರ ಪ್ರಸ್ತಾಪವನ್ನು ಚರ್ಚಿಸಲು ರಚಿಸಲಾದ ಎನ್‌ಸಿಪಿ ಸಮಿತಿಯು ಮೇ 5 ರಂದು ಅವರ ರಾಜೀನಾಮೆಯನ್ನು ತಿರಸ್ಕರಿಸಿತು ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸಿತು.

ಸುಪ್ರಿಯಾ ಸುಳೆಗೆ  ಹೊಸ ಜವಾಬ್ದಾರಿ

ಇತ್ತೀಚಿನ ವರ್ಷಗಳಲ್ಲಿ ಪಕ್ಷದಲ್ಲಿ ಸುಪ್ರಿಯಾ ಸುಳೆಗೆ ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ. ಸುಳೆ ಅಲ್ಪಾವಧಿಯಲ್ಲಿ ಜಿಲ್ಲೆಗಳಾದ್ಯಂತ ಪ್ರಯಾಣಿಸಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ಕೇಂದ್ರ ಸರ್ಕಾರ ಮತ್ತು ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಖಂಡಿಸುವಲ್ಲಿ ಸುಳೆ ಮುಂದೆ ಇದ್ದಾರೆ.

ಸೆಪ್ಟೆಂಬರ್ 2006 ರಲ್ಲಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗುವ ಮೂಲಕ ಸುಳೆ ಅವರನ್ನು ಸಕ್ರಿಯ ರಾಜಕೀಯಕ್ಕೆ ಪರಿಚಯಿಸಲಾಯಿತು. ನಂತರ 2009 ರಲ್ಲಿ, ಅವರು ಅಲ್ಲಿಯವರೆಗೆ ಪವಾರ್ ಪ್ರತಿನಿಧಿಸುತ್ತಿದ್ದ ಬಾರಾಮತಿ ಲೋಕಸಭಾ ಕ್ಷೇತ್ರವನ್ನು ವಹಿಸಿಕೊಂಡರು. ಯುವತಿಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ರಾಜ್ಯಾದ್ಯಂತ ನೆಟ್‌ವರ್ಕ್ ನಿರ್ಮಿಸಲು ಯುವತಿಯರ ವಿಭಾಗವಾದ ರಾಷ್ಟ್ರವಾದಿ ಯುವತಿ ಕಾಂಗ್ರೆಸ್ ಅನ್ನು ಸಹ ಅವರು ರಚಿಸಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್ ಭವನದ ಮೊದಲ ಫೋಟೊದಲ್ಲಿದ್ದು ಚುನಾಯಿತ ಸದಸ್ಯರಲ್ಲ, ಕೇಸರಿ ಬಟ್ಟೆ ತೊಟ್ಟವರು: ಶರದ್ ಪವಾರ್

ಪವಾರ್ ಅವರು ತಮ್ಮ ಮಗಳು ಮತ್ತು ಅಜಿತ್ ಪವಾರ್ ಮತ್ತು ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಸೇರಿದಂತೆ ಅನೇಕ ಯುವ ನಾಯಕರನ್ನು ಬೆಳೆಸಿದ್ದಾರೆ. ಅವರು ಈಗ ಪಕ್ಷದ ಮುಂಚೂಣಿ ನಾಯಕರಾಗಿದ್ದಾರೆ. ಆದರೆ, ನಾಯಕನ ಪಟ್ಟವನ್ನು ಯಾರು ವಹಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Sat, 10 June 23