ಪ್ರಕೃತಿಯಲ್ಲಿ ಮೂಡಿದ ಭಾರತದ ಧ್ವಜ ಎಂಬ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಡಲ ತೀರದಲ್ಲಿರುವ ಚಿಕ್ಕ ಹಸಿರು ಹುಲ್ಲು, ತೀರಕ್ಕೆ ಬಂದಪ್ಪಳಿಸಿದ ಅಲೆಯ ನೊರೆ, ಕೇಸರಿ ಬಣ್ಣಕ್ಕೆ ತಿರುಗಿರುವ ಆಗಸ..ಭಾರತದ ಧ್ವಜದಲ್ಲಿರುವ ಮೂರು ಬಣ್ಣಗಳಿವು. ಫೋಟೊ ಫ್ರೇಮ್ ನಂತೆ ಕಾಣುವ ಈ ಚಿತ್ರವನ್ನು ಕೇಂದ್ರ ಸರ್ಕಾರ ಟ್ವೀಟ್ ಮಾಡಿದೆ. ಅಮೃತ್ ಮಹೋತ್ಸವ್ (Amrit Mahotsav) ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಜೂನ್ 22ಕ್ಕೆ ಶೇರ್ ಆಗಿರುವ ಈ ಫೋಟೊ ಈಗ ವೈರಲ್ ಆಗಿದೆ. ನಮ್ಮ ಹೆಮ್ಮೆ, ಪ್ರಕೃತಿಯಲ್ಲಿ ತಿರಂಗಾ ಎಂದು ಆ ಟ್ವೀಟ್ ಗೆ ಶೀರ್ಷಿಕೆ ನೀಡಿದ್ದು ಫೋಟೊದ ಶೀರ್ಷಿಕೆ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುತ್ತಿರುವ ಪ್ರಕೃತಿ ಎಂದಿದೆ.
Our pride, the tricolor in nature ❤️?? #AmritMahotsav #MomentsWithTiranga #HarGharTiranga #MainBharatHoon #IndiaAt75
IC: @singhsanjeevku2 pic.twitter.com/MXfpC64GBu
— Amrit Mahotsav (@AmritMahotsav) June 24, 2022
ದೇಶವು ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುವ ತಯಾರಿಯಲ್ಲಿದ್ದು ಸ್ವಾತಂತ್ರ್ಯದ 75ನೇ ವರ್ಷದ ಸಾಧನೆ, ಸಂಸ್ಕೃತಿ ಮತ್ತು ಐತಿಹಾಸಿಕ ಕ್ಷಣಗಳನ್ನು ಕೊಂಡಾಡಲಿದೆ. ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಣೆ ಮಾರ್ಚ್ 12,2021ರಲ್ಲಿ ಆರಂಭವಾಗಿತ್ತು.
Published On - 5:08 pm, Tue, 12 July 22