ಮುಂಬೈ, ಮಾ.23: ಭಾರತೀಯ ನೌಕಾಪಡೆಯು ಕೋಲ್ಕತ್ತಾದ ಅರಬ್ಬಿ ಸಮುದ್ರದ ಬಳಿ 35 ಸೊಮಾಲಿಯನ್ ಕಡಲ್ಗಳ್ಳರನ್ನು ಬಂಧಿಸಲಾಗಿತ್ತು. ಕಡಲ್ಗಳ್ಳತನ ನಿಗ್ರಹ ಇಂದು (ಮಾ.23) ಬೆಳಗ್ಗೆ ಮುಂಬೈಗೆ ಕರೆತಂದು ಮುಂಬೈನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಭಾರತೀಯ ದಂಡ ಸಂಹಿತೆ, ಕಡಲ ಕಳ್ಳತನ ವಿರೋಧಿ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 40 ಗಂಟೆಗಳ ಕಾಲ ನಿರಂತರವಾದ ಹೈ-ಟೆಂಪೋ ಕಾರ್ಯಾಚರಣೆಗಳ ನಂತರ ಮಾರ್ಚ್ 16 ರಂದು ಕಡಲುಗಳ್ಳರ MV ರುಯೆನ್ ಹಡಗುನ್ನು ತಡೆದು ಅದರಲ್ಲಿದ್ದ ಭಾರತೀಯ ಹಾಗೂ ಬಲ್ಗೇರಿಯಾದ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ.
ಈ ಹಡಗನ್ನು 2023 ಡಿಸೆಂಬರ್ನಲ್ಲಿ ಅಪಹರಣ ಮಾಡಲಾಗಿತ್ತು. ಭಾರತೀಯ ನೌಕಾಪಡೆಯು ಸಮುದ್ರ ಭದ್ರತಾ ಕಾರ್ಯಾಚರಣೆಗಳ ಭಾಗವಾಗಿ ಈ ಸಮುದ್ರದಲ್ಲಿ ಭಾರೀ ಕಾರ್ಯಚರಣೆಯನ್ನು ನಡೆಸಿ, MV ರುಯೆನ್ ಹಡಗುನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೊಮಾಲಿಯಾದಿಂದ ಪೂರ್ವಕ್ಕೆ 260 ನಾಟಿಕಲ್ ಮೈಲಿ (ಎನ್‌ಎಂ) ದೂರದಲ್ಲಿ ಹಡಗನ್ನು ತಡೆಹಿಡಿಯಲು ಐಎನ್‌ಎಸ್ ಕೋಲ್ಕತ್ತಾಗೆ ನಿರ್ದೇಶನ ನೀಡಿತ್ತು. ಈ ಮೂಲಕ 35 ಕಡಲ್ಗಳ್ಳರನ್ನು ಪತ್ತೆ ಮಾಡಲಾಗಿತ್ತು.
#WATCH | Maharashtra | 35 Somalian pirates handed over to Mumbai Police after due formalities of Customs and Immigration. The pirates were captured by Indian Navy’s INS Kolkata after an Anti Piracy operation on 16th March.
Visuals from Naval Dockyard, Mumbai. pic.twitter.com/026aup7Udc
— ANI (@ANI) March 23, 2024
ಮಾರ್ಚ್ 15 ರಂದು ಐಎನ್‌ಎಸ್ ಕೋಲ್ಕತ್ತಾದಲ್ಲಿ ಎಂವಿ ರುಯೆನ್ ಹಡಗನ್ನು ಪತ್ತೆ ಮಾಡಿ, ಅದರಲ್ಲಿದ್ದ ಜನರನ್ನು ರಕ್ಷಣೆ ಮಾಡಿದೆ. ಇದರ ಜತೆಗೆ ಈ ಹಡಗಿನ ಪತ್ತೆಗಾಗಿ ಬಳಸಿದ್ದ ಭಾರತೀಯ ಡ್ರೋನ್ನ್ನು ಕಡಲ್ಗಳ್ಳರು ಹೊಡೆದುರುಳಿಸಿದರು. ಇನ್ನು ಈ ರಕ್ಷಣಾ ಕಾರ್ಯಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಇದೀಗ ಬಂಧನವಾಗಿರುವ 35 ಕಡಲ್ಗಳ್ಳರನ್ನು ಮುಂಬೈಗೆ ತರಲಾಗಿದೆ.
ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ಮತ್ತು ಅದರಲ್ಲಿದ್ದ ನಾಗಕರಿಕರ ಸಹಿತ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ. ಈ ಬಗ್ಗೆ ಬಲ್ಗೇರಿಯ ದೇಶದ ಅಧ್ಯಕ್ಷ ರುಮೆನ್ ರಾದೇವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಲ್ಗೇರಿಯದ ಅಧ್ಯಕ್ಷ ರುಮೆನ್ ರಾದೇವ್, 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು “ರುಯೆನ್” ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತದ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.
ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಪ್ರಮುಖ ಕ್ರಮ ತೆಗೆದುಕೊಂಡು ಭಾರತೀಯ ನೌಕಾಪಡೆ ಹಾಗೂ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ತಿಳಿಸಿದ ಬಲ್ಗೇರಿಯ ಅಧ್ಯಕ್ಷ ರುಮೆನ್ ರಾದೇವ್ ಅವರನ್ನು ಹೇಳಿಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದರು ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬದ್ಧತೆವಾಗಿದೆ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ