AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trust Of the Nation: TV9 ನೆಟ್‌ವರ್ಕ್ ಮತ್ತು ಡೈಲಿಹಂಟ್‌ನ ಅತಿದೊಡ್ಡ ಚುನಾವಣಾ ಸಮೀಕ್ಷೆ

ದೇಶದ ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9, ಸುದ್ದಿ ಸಂಗ್ರಾಹಕ ವೇದಿಕೆ ಡೈಲಿಹಂಟ್‌ನ ಸಹಯೋಗದೊಂದಿಗೆ ಟ್ರಸ್ಟ್ ಆಫ್ ದಿ ನೇಷನ್ ಸಮೀಕ್ಷೆಯನ್ನು ನಡೆಸುತ್ತಿದೆ. ದೇಶಾದ್ಯಂತ ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ನೀವೂ ಇದರಲ್ಲಿ ಪಾಲ್ಗೊಳ್ಳಬಹುದು.

Trust Of the Nation: TV9 ನೆಟ್‌ವರ್ಕ್ ಮತ್ತು ಡೈಲಿಹಂಟ್‌ನ ಅತಿದೊಡ್ಡ ಚುನಾವಣಾ ಸಮೀಕ್ಷೆ
ಚುನಾವಣಾ ಸಮೀಕ್ಷೆ
ರಶ್ಮಿ ಕಲ್ಲಕಟ್ಟ
|

Updated on: Mar 22, 2024 | 8:48 PM

Share

ಪ್ರಜಾಪ್ರಭುತ್ವದ ಮಹಾ ಹಬ್ಬ ಅಂದರೆ ಸಾರ್ವತ್ರಿಕ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದೆ. 18ನೇ ಲೋಕಸಭೆ ಚುನಾವಣೆಗೆ (Lok sabha Election) ಚುನಾವಣಾ ಆಯೋಗ ಮತದಾನದ ದಿನಾಂಕಗಳನ್ನು ಪ್ರಕಟಿಸಿದೆ. ಈ ಬಾರಿ ದೇಶದಾದ್ಯಂತ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗದ (Election Commision) ಪ್ರಕಟಣೆಯ ಪ್ರಕಾರ, ಏಪ್ರಿಲ್ 19 ರಿಂದ ಜೂನ್ 1 ರವರೆಗೆ ದೇಶಾದ್ಯಂತ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಸುಮಾರು 97 ಕೋಟಿ ಮತದಾರರು ಭಾಗವಹಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.

ದೇಶದ ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9, ಸುದ್ದಿ ಸಂಗ್ರಾಹಕ ವೇದಿಕೆ ಡೈಲಿಹಂಟ್‌ನ ಸಹಯೋಗದೊಂದಿಗೆ ಟ್ರಸ್ಟ್ ಆಫ್ ದಿ ನೇಷನ್ ಸಮೀಕ್ಷೆಯನ್ನು ನಡೆಸುತ್ತಿದೆ. ದೇಶಾದ್ಯಂತ ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ನೀವೂ ಇದರಲ್ಲಿ ಪಾಲ್ಗೊಳ್ಳಬಹುದು. ಈ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳನ್ನು ಕೆಳಗೆ ನೀಡಲಾಗಿದೆ, ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಉತ್ತರಿಸಬಹುದು.

ಮತದಾನ ಯಾವಾಗ ನಡೆಯುತ್ತದೆ?

ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು 102 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತ ಏಪ್ರಿಲ್ 26 ರಂದು, ಈ ದಿನ 89 ಸ್ಥಾನಗಳಿಗೆ ಮತದಾನ ನಡೆಯಲಿದೆ, ಮೂರನೇ ಹಂತ ಮೇ 7 ರಂದು, ಈ ದಿನ 94 ಸ್ಥಾನಗಳಿಗೆ ಮತದಾನ ನಡೆಯಲಿದೆ.ನಾಲ್ಕನೇ ಹಂತವು ಮೇ 13 ರಂದು ನಡೆಯಲಿದ್ದು, 96 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೇ 20 ರಂದು ಐದನೇ ಹಂತ, ಈ ದಿನ 49 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೇ 25ರಂದು ಆರನೇ ಹಂತದಲ್ಲಿ 57 ಸ್ಥಾನಗಳಿಗೆ ಮತದಾನ ಮತ್ತು ಕೊನೆಯ ಅಂದರೆ ಜೂನ್ 1 ರಂದು ಏಳನೇ ಹಂತದಲ್ಲಿ 57 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಚುನಾವಣೆಯಲ್ಲಿನ ಪ್ರಮುಖ ಚರ್ಚಾ ಸಂಗತಿ ಯಾವುದು?

ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಿರಲಿ, ಪ್ರತಿ ಬಾರಿಯೂ ಒಂದಲ್ಲ ಒಂದು ಪ್ರಮುಖ ಸಂಗತಿ ಇದ್ದೇ ಇರುತ್ತದೆ. ಉದಾಹರಣೆಗೆ, 1977 ರ ಲೋಕಸಭಾ ಚುನಾವಣೆಯಲ್ಲಿ ತುರ್ತು ಪರಿಸ್ಥಿತಿ ಒಂದು ದೊಡ್ಡ ವಿಷಯವಾಗಿತ್ತು. 1989 ರಲ್ಲಿ ಬೋಫೋರ್ಸ್ ಚುನಾವಣಾ ವಿಷಯವಾಗಿತ್ತು. ಅದೇ ರೀತಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಭಾರತೀಯ ಜನತಾ ಪಕ್ಷವು ಅಭಿವೃದ್ಧಿ ಭಾರತವನ್ನು ಪ್ರಮುಖ ವಿಷಯವನ್ನಾಗಿ ಮಾಡಿದ್ದರೆ ವಿರೋಧ ಪಕ್ಷಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಘೋಷಣೆಯನ್ನು ನೀಡಿವೆ.

ಡೈಲಿಹಂಟ್ ಎಂದರೇನು?

Dailyhunt ಸುದ್ದಿ, ಮನರಂಜನೆ ಮತ್ತು ವಿಡಿಯೊಗಳ ದೇಶದ ಅತಿದೊಡ್ಡ ಸಂಗ್ರಾಹಕ ಅಪ್ಲಿಕೇಶನ್ ಆಗಿದೆ. ಈ ವೇದಿಕೆಯು 350 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ ಗಳನ್ನು ಹೊಂದಿದೆ. ಇದು ದೇಶದ 15 ಪ್ರಮುಖ ಭಾಷೆಗಳಲ್ಲಿ ಸುದ್ದಿ ಸೇವೆಗಳನ್ನು ಒದಗಿಸುತ್ತದೆ. ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ.

ಟಿವಿ9 ಬಗ್ಗೆ

ಟಿವಿ9 ದೇಶದ ಅತಿ ದೊಡ್ಡ ಸುದ್ದಿ ಮಾಧ್ಯಮ ಜಾಲವಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಅಲ್ಲದೆ, ಟಿವಿ9 ನೆಟ್‌ವರ್ಕ್ ಬೆಂಗಾಲಿ, ತೆಲುಗು, ತಮಿಳು, ಪಂಜಾಬಿ ಮತ್ತು ಗುಜರಾತಿ ಭಾಷೆಗಳಲ್ಲಿ ಸುದ್ದಿ ಮತ್ತು ವೀಡಿಯೊ ಸೇವೆಗಳನ್ನು ಸಹ ಒದಗಿಸುತ್ತದೆ. ದೇಶದ ಕೋಟಿಗಟ್ಟಲೆ ಜನರು ಟಿವಿ9 ಸುದ್ದಿಯನ್ನು ನಂಬುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ