ದೆಹಲಿ: ನಟಿ ರಿಯಾ ಚಕ್ರವರ್ತಿ ಜಾಮೀನು ರದ್ದು ಮಾಡುವಂತೆ ಮನವಿ ಮಾಡುತ್ತಿಲ್ಲ. ಬದಲಿಗೆ ಜಾಮೀನು ನೀಡಲು ನೀಡಿರುವ ಕಾರಣಗಳನ್ನು ತೆಗೆಯಬೇಕು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ. ಎನ್ಸಿಬಿಯ ಈ ಅರ್ಜಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಹೈಕೋರ್ಟ್ನ ಅಭಿಪ್ರಾಯವನ್ನು ಪ್ರಶ್ನಿಸಲು ಆಗುವುದಿಲ್ಲ. ಆದರೆ ಆದೇಶವನ್ನು ಪ್ರಶ್ನಿಸಬಹುದು. ಹೀಗಾಗಿ ಅರ್ಜಿಯನ್ನ ತಿದ್ದುಪಡಿ ಮಾಡಿ ಸಲ್ಲಿಸಿ ಎಂದು ಎನ್ಸಿಬಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ. ಸುಶಾಂತ್ ಸಿಂಗ್ ರಜಪೂರ್ ಸಾವು ಕೊಲೆ ಅಲ್ಲ ಎಂದು ಪರಿಗಣಿಸಿ ಕೋರ್ಟ್ ಜಾಮೀನು ನೀಡಿತ್ತು. ಈ ಅಂಶದ ಆಧಾರದ ಮೇಲೆ ಜಾಮೀನು ನೀಡಿರುವದರಿಂದ ತನಿಖೆ ನಡೆಸಲು ಆಗದು ಎಂದು ಜಾಮೀನು ನೀಡಿರುವ ಕಾರಣ ತೆಗೆಯಬೇಕು ಎಂದು ಇಂದು ಎನ್ಸಿಬಿ ಮನವಿ ಮಾಡಿದೆ.
ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿದ್ದ ಬಾಲಿವುಡ್ ನಟಿ ಹಾಗೂ ನಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಅಕ್ಟೋಬರ್ 7ರಂದು ಜಾಮೀನು ನೀಡಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಅಪಸ್ವರ ತೆಗೆದಿತ್ತು. ರಿಯಾ ಜಾಮೀನನ್ನು ರದ್ದು ಮಾಡಬೇಕು ಎಂದು ಸುಪ್ರೀಂಕೋರ್ಟ್ ಬಳಿ ಕೇಂದ್ರ ಸರ್ಕಾರ ಮನವಿ ಮಾಡಿತ್ತು.
ಷರತ್ತುಬದ್ಧ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್ ಮುಂಬೈ ಬಿಟ್ಟು ಹೊರಹೋಗುವಂತಿಲ್ಲಎಂದು ತಿಳಿಸಿತ್ತು. 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್, ಬಿಡುಗಡೆಯಾದ ನಂತರ 10 ದಿನಗಳ ಕಾಲ ಪೊಲೀಸ್ ಠಾಣೆಗೆ ಬಂದು ಹಾಜರಾತಿಗೆ ಸಹಿ ಮಾಡಬೇಕು. ಈ ಜಾಮೀನು ದೊರಕಿದ್ದರಿಂದ ಬರೋಬ್ಬರಿ 28 ದಿನಗಳ ನಂತರ ರಿಯಾ ಚಕ್ರವರ್ತಿ ಜೈಲಿನಿಂದ ಹೊರಬಂದಿದ್ದರು. ಪಾಸ್ ಪೋರ್ಟ್ ಹಸ್ತಾಂತರಿಸಬೇಕು, ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶಕ್ಕೆ ಪ್ರಯಾಣಿಸಬಾರದು ಮತ್ತು ಮುಂಬೈ ತೊರೆಯಬೇಕಾದರೆ ತನಿಖಾಧಿಕಾರಿಗೆ ತಿಳಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಆದರೆ, ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡಿತ್ತು.
ಇದನ್ನೂ ಓದಿ: Google Search | ಗೂಗಲ್ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಿದ್ದೇನು?
ಇದನ್ನೂ ಓದಿ: ವಿಶ್ಲೇಷಣೆ | ಅರ್ನಬ್ ವಾಟ್ಸ್ಆ್ಯಪ್ ಚಾಟ್ ಲೀಕ್; ಏನು ಉದ್ದೇಶ? ಯಾರಿಗೆ ಲಾಭ?