Google Search | ಗೂಗಲ್​ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಿದ್ದೇನು?

ಕೊವಿಡ್-19 ಸಾಂಕ್ರಾಮಿಕ ರೋಗವು ಇಡಿ ವಿಶ್ವವನ್ನು ಅಲ್ಲೋಲ ಕಲ್ಲೋಲಗೊಳಿಸಿದರೂ ಗೂಗಲ್ ಸರ್ಚ್ ಎಂಜಿನ್​ನಲ್ಲಿ ಅತಿ ಹೆಚ್ಚು ಹುಡುಕಾಟಕ್ಕೊಳಗಾದ (ಸರ್ಚ್) ಸಂಗತಿಯೆಂದರೆ ipl season 13

Google Search | ಗೂಗಲ್​ನಲ್ಲಿ ಈ ವರ್ಷ ಹೆಚ್ಚು ಜನರು ಹುಡುಕಿದ್ದೇನು?
ಐಪಿಎಲ್ ಟ್ರೋಫಿ ಹಿಡಿದ ರೋಹಿತ್ ಶರ್ಮ (ಸಂಗ್ರಹ ಚಿತ್ರ)
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 09, 2020 | 10:44 PM

ಭಾರತೀಯರಿಗೆ ಯಾವ ಮಟ್ಟಿಗೆ ಕ್ರಿಕೆಟ್ ಹುಚ್ಚಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಮೊನ್ನೆಯಷ್ಟೇ ಕೊನೆಗೊಂಡ 13ನೇ ಆವೃತ್ತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಈ ಅಂಶವನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಪ್ರಸಕ್ತ ವರ್ಷ ಕೊವಿಡ್-19 ಸಾಂಕ್ರಾಮಿಕ ರೋಗವು ಇಡಿ ವಿಶ್ವವನ್ನು ಅಲ್ಲೋಲ ಕಲ್ಲೋಲಗೊಳಿಸಿದರೂ ಗೂಗಲ್ ಸರ್ಚ್ ಎಂಜಿನ್​ನಲ್ಲಿ ಅತಿ ಹೆಚ್ಚು ಹುಡುಕಾಟಕ್ಕೊಳಗಾದ (ಸರ್ಚ್) ಸಂಗತಿಯೆಂದರೆ ipl season 13 (ಐಪಿಎಲ್ ಸೀಸನ್ 13). ಭಾರತೀಯರಿಗೆ ಮತ್ತು ವಿಶ್ವದೆಲ್ಲೆಡೆ ಹಬ್ಬಿರುವ ಕ್ರಿಕೆಟ್ ಪ್ರಿಯರಿಗಿರುವ ಕ್ರಿಕೆಟ್ ಹುಚ್ಚು ಎಂಥದೆನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ಗೂಗಲ್ ಇಂಡಿಯ ಬುಧವಾರ ಬಿಡುಗಡೆ ಮಾಡಿರುವ ‘ಇಯರ್ ಇನ್ ಸರ್ಚ್’ ವರದಿಯಲ್ಲಿ ಈ ಅಂಶ ಸಾಬೀತಾಗಿದೆ.

ಅಂದಹಾಗೆ, ಕಳೆದ ವರ್ಷ ಅತಿಹೆಚ್ಚು ಸರ್ಚ್​ಗೊಳಗಾದ ಅಂಶವೂ ಕ್ರಿಕೆಟ್ ಎನ್ನುವುದು ಗಮನಿಸಬೇಕಾದ ಅಂಶ. ಆಗ ಪ್ರಪಂಚದಾದ್ಯಂತ ಜನ ಅತಿಹೆಚ್ಚು ಹುಡುಕಾಡಿದ್ದು ಐಸಿಸಿ ವಿಶ್ವಕಪ್. ಈ ವರ್ಷ ಐಪಿಎಲ್ ಕ್ರಿಕೆಟ್ ನಂತರ ಜಾಸ್ತಿ ಹುಡುಕಾಟಕ್ಕೊಳಗಾದ ವಿಷಯಗಳೆಂದರೆ ಅಮೆರಿಕ ಚುನಾವಣಾ ಫಲಿತಾಂಶ, ಪ್ರಧಾನ ಮಂತ್ರಿ ಸಮ್ಮಾನ್ ನಿಧಿ, ಬಿಹಾರ ವಿಧಾನ ಸಬಾ ಚುನಾವಣೆ ಮತ್ತು ದೆಹಲಿ  ಚುನಾವಣಾ ಫಲಿತಾಂಶ.

ಸೆಪ್ಟಂಬರ್ 19ರಿಂದ ನವೆಂಬರ್ 10 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್​ನ ನಗರಗಳಾದ ಶಾರ್ಜಾ, ದುಬೈ ಮತ್ತು ಅಬು ಧಾಬಿಯಲ್ಲಿ ನಡೆದ ಐಪಿಎಲ್ 2020 ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ಈ ವರ್ಷ ನಡೆದ ಟೂರ್ನಿಯನ್ನು ವೀಕ್ಷಸಿದವರ ಸಂಖ್ಯೆಯಲ್ಲಿ ಶೇಕಡಾ 28 ರಷ್ಟು ಹೆಚ್ಚಾಗಿದೆ!

ಐಪಿಎಲ್ ನಂತರ ಭಾರತೀಯರು ಹೆಚ್ಚು ಸರ್ಚ್ ಮಾಡಿರುವ ಸಂಗತಿಗಳೆಂದರೆ, ನಿರ್ಭಯ ತೀರ್ಪು, ಕೊವಿಡ್-19 ಸೃಷ್ಟಿಸಿದ ಲಾಕ್​ಡೌನ್, ಭಾರತ-ಚೀನಾ ನಡುವಿನ ಸಂಘರ್ಷ ಮತ್ತು ರಾಮ ಮಂದಿರ.

ಜೋ ಬಿಡೆನ್

ಇನ್ನು, ವಿಶ್ವದ ಇತರ ಭಾಗಗಳಲ್ಲಿ ಕ್ರೀಡೆಗಳಿಗೆ ಸಂಬಂಧಿಸಿದಂತೆ, ಯುಇಎಫ್ಎ ಚಾಂಪಿಯನ್ಸ್ ಲೀಗ್, ಇಂಗ್ಲಿಷ್ ಪ್ರಿಮೀಯರ್ ಲೀಗ್, ಫ್ರೆಂಚ್ ಓಪನ್, ಎಲ್ ಎ ಲಿಗಾ ಮೊದಲಾದ ಕ್ರೀಡಾ ಈವೆಂಟ್​​ಗಳು ಗೂಗಲ್ ಸರ್ಚ್ ಎಂಜಿನ್​ನಲ್ಲಿ ಹೆಚ್ಚು ಹುಡುಕಾಟಕ್ಕೊಳಗಾದವು.

ವ್ಯಕ್ತಿಗಳ ಪೈಕಿ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ಕುರಿತು ಹೆಚ್ಚು ಸರ್ಚ್​ಗಳಗಾಗಿವೆ. ನಂತರದ ಸ್ಥಾನದಲ್ಲಿರುವವರು ಮಹಾರಾಷ್ಟ್ರ ಸರ್ಕಾರವನ್ನು ಎದುರುಹಾಕಿಕೊಂಡಿರುವ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೊಸ್ವಾಮಿ, ಗಾಯಕಿ ಕನ್ನಿಕಾ ಕಪೂರ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್.

ಸುಶಾಂತ್ ಸಿಂಗ್ ರಜಪೂತ್ ಮತ್ತು ರಿಯಾ ಚರ್ಕವರ್ತಿ

ಅರ್ನಬ್​ರಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಗುಡುಗು ಹಾಕಿದ ಬಾಲಿವುಡ್ ನಟಿ ಕಂಗನಾ ರನೌತ್, ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಮತ್ತು ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ. ಇದೇ ನಟನ ಹಳೆಯ ಗೆಳತಿ ಅಂಕಿತಾ ಲೊಖಂಡೆ ಈ ಪಟ್ಟಿಯಲ್ಲಿರುವ ಇತರ ವ್ಯಕ್ತಿಗಳು.

ಅತಿಹೆಚ್ಚು ಸರ್ಚ್​ಗೊಳಗಾಗದ ಸಿನಿಮಾಗಳ ಪೈಕಿ ಸುಶಾಂತ್ ನಟಿಸಿದ್ದ ‘ದಿಲ್ ಬೆಚಾರಾ’ ಮೊದಲ ಸ್ಥಾನದಲ್ಲಿದೆ. ತಮಿಳು ಸಿನಿಮಾ ‘ಸೂರರೈ ಪೊಟ್ರು’, ಅಜಯ್ ದೇವಗನ್ ನಟನೆಯ ‘ತಾನಾಜಿ’ ಮತ್ತು ಬಯೋಪಿಕ್​ಗಳಾದ ‘ಶಕುಂತಲಾ ದೇವಿ’ ಹಾಗೂ ‘ಗುಂಜನ್ ಸಕ್ಸೇನಾ’ ನಂತರದ ಸ್ಥಾನದಲ್ಲಿವೆ. ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಸ್ಪೇನ್​ನ ಕ್ರೈಂ ಡ್ರಾಮಾ, ‘ಮನಿ ಹೀಸ್ಟ್’ ಟಿವಿ, ವೆಬ್​ ಸಿರೀಸ್​ಗಳಲ್ಲಿ ಮೊದಲ ಸ್ಥಾನ ಪಡೆದಿದೆ.

ಕಂಗನಾ ರನೌತ್

ಹಾಗೆಯೇ, ಭಾರತೀಯರಿಂದ ಸರ್ಚ್​ಗೊಳಗಾಗಿರುವ ಇತರ ಸಂಗತಿಗಳಲ್ಲಿ, What is corona, (ಕೊರೊನಾ ಎಂದರೇನು), What is Covid-19 (ಕೊವಿಡ್-19 ಅಂದರೇನು), What is Plasma Therapy (ಪ್ಲಾಸ್ಮಾ ಥೆರಪಿ ಎಂದರೇನು), What is CAA (ಸಿಎಎ ಎಂದರೇನು) ಮತ್ತು ನಾವಿರುವ ಸ್ಥಳದ ಸುತ್ತಮುತ್ತಲು ನಮಗೆ ಬೇಕಿರುವ ಪ್ರದೇಶ ಪತ್ತೆಹಚ್ಚಲು ಉಪಯೋಗಿಸುವ ‘Near Me’ ಪದಗಳು ಸೇರಿವೆ.

ಗೂಗಲ್​ನಲ್ಲೂ Coronavirusನದ್ದೇ ಆರ್ಭಟ: ಎಷ್ಟು ಬಾರಿ ಚೆಕ್ ಮಾಡಿದ್ದಾರೆ ಗೊತ್ತಾ?

Published On - 9:25 pm, Wed, 9 December 20

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು