ಅಜಿತ್ ಪವಾರ್​ಗೆ ಯಾವುದೇ ಜವಾಬ್ದಾರಿ ನೀಡದೇ ಇರುವುದಕ್ಕೆ ಕಾರಣ ವಿವರಿಸಿದ ಶರದ್ ಪವಾರ್

|

Updated on: Jun 10, 2023 | 8:14 PM

ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಗೆ ಯಾವುದೇ ಜವಾಬ್ದಾರಿ ನೀಡಿಲ್ಲ. ಅದೇ ವೇಳೆ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಮಹಾರಾಷ್ಟ್ರ, ಹರ್ಯಾಣ, ಪಂಜಾಬ್ ಮತ್ತು ಮಹಿಳೆಯರು, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು, ಲೋಕಸಭೆಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತಾರೆ

ಅಜಿತ್ ಪವಾರ್​ಗೆ ಯಾವುದೇ ಜವಾಬ್ದಾರಿ ನೀಡದೇ ಇರುವುದಕ್ಕೆ ಕಾರಣ ವಿವರಿಸಿದ ಶರದ್ ಪವಾರ್
ಅಜಿತ್ ಪವಾರ್- ಶರದ್ ಪವಾರ್
Follow us on

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯಲ್ಲಿ (NCP) ತಮ್ಮ ಸೋದರಳಿಯ ಅಜಿತ್ ಪವಾರ್‌ಗೆ (Ajit Pawar)ಯಾವುದೇ ಹೊಸ ಜವಾಬ್ದಾರಿಯನ್ನು ನೀಡದಿರುವ ಕುರಿತು ಶನಿವಾರ ಶರದ್ ಪವಾರ್ (Sharad Pawar) ವಿವರಣೆ ನೀಡಿದ್ದಾರೆ. ಅಜಿತ್ ಈಗಾಗಲೇ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಹೊಂದಿದ್ದಾರೆ  ಎಂದು ಪವಾರ್ ಹೇಳಿದ್ದಾರೆ. ಎನ್​​ ಸಿಪಿ ವರಿಷ್ಠ ಶರದ್ ಪವಾರ್ ಅವರು ಪುತ್ರಿ ಸುಪ್ರಿಯಾ ಸುಳೆ ಮತ್ತು ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಘೋಷಿಸಿದ್ದಾರೆ. ಪಕ್ಷದಲ್ಲಿ ಈವರೆಗೆ ಇಲ್ಲದ ಹುದ್ದೆಯಾಗಿದೆ ಇದು. ಆದಾಗ್ಯೂ ಇದು ಚೆನ್ನಾಗಿ ಯೋಚಿಸಿದ ನಿರ್ಧಾರ ಎಂದು ಶರದ್ ಪವಾರ್ ಹೇಳಿದ್ದಾರೆ.

ಮುಂದಿನ ಪೀಳಿಗೆಯ ನಾಯಕರಿಗೆ ಪಕ್ಷದ ನಾಯಕತ್ವ ಹಸ್ತಾಂತರಿಸುವ ದೊಡ್ಡ ಘೋಷಣೆಯನ್ನು ಶರದ್ ಪವಾರ್ ಮಾಡಿದ ಕೆಲವೇ ಗಂಟೆಗಳ ನಂತರ ಅಜಿತ್ ಬಗ್ಗೆ ಅವರು ಮಾತನಾಡಿದ್ದಾರೆ. ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಗೆ ಯಾವುದೇ ಜವಾಬ್ದಾರಿ ನೀಡಿಲ್ಲ. ಅದೇ ವೇಳೆ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಮಹಾರಾಷ್ಟ್ರ, ಹರ್ಯಾಣ, ಪಂಜಾಬ್ ಮತ್ತು ಮಹಿಳೆಯರು, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು, ಲೋಕಸಭೆಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತಾರೆ. ಪ್ರಫುಲ್ ಪಟೇಲ್ ಅವರು ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಜಾರ್ಖಂಡ್, ಗೋವಾ ಮತ್ತು ರಾಜ್ಯಸಭೆಯನ್ನು ನೋಡಿಕೊಳ್ಳುತ್ತಾರೆ.

ಅಧಿಕಾರ ವಿಭಾಗವು 2019 ರಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ ಅಜಿತ್ ಪವಾರ್ ಅವರನ್ನು ಬದಿಗೊತ್ತುವಂತೆ ನೋಡುತ್ತಿದ್ದರೆ, ಅಜಿತ್ ಪವಾರ್ ಅವರು ಈಗಾಗಲೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಶರದ್ ಪವಾರ್ ಹೇಳಿದರು. ಅಜಿತ್ ಪವಾರ್ ನಿರ್ಧಾರದಿಂದ ಸಂತೋಷವಾಗಿದ್ದಾರೆಯೇ ಎಂಬ ಪ್ರಶ್ನೆಗೆ, ಅಜಿತ್ ನಿರ್ಧಾರ ತೆಗೆದುಕೊಳ್ಳುವವರಲ್ಲಿ ಒಬ್ಬರಾಗಿದ್ದರು ಎಂದು ಶರದ್ ಪವಾರ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಫುಲ್ ಪಟೇಲ್, ಸುಪ್ರಿಯಾ ಸುಳೆ ಎನ್‌ಸಿಪಿ ಕಾರ್ಯಾಧ್ಯಕ್ಷರು; ಶರದ್ ಪವಾರ್ ಘೋಷಣೆ

ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರ ಹೊಸ ಜವಾಬ್ದಾರಿಗಳನ್ನ ಘೋಷಿಸಿದಾಗ, ಅಜಿತ್ ಪವಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಲೆ ತಗ್ಗಿಸಿ, ಬಾಟಲಿ ಹಿಡಿದು ಕೂತಿದ್ದು, ಘೋಷಣೆ ಕೇಳಿದ ಕೂಡಲೇ ಚಪ್ಪಾಳೆ ತಟ್ಟಿದರು. ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಮತ್ತು ಹಠಾತ್ ಪುನರ್ರಚನೆಯಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆದ ಎಲ್ಲರಿಗೂ ಅಭಿನಂದನೆಗಳು ಎಂದು ಅಜಿತ್ ಪವಾರ್ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ