AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಕೂತವರು ಹಳ್ಳಿಗಳನ್ನು ಗಮನಿಸದಿದ್ದರೆ ಕೃಷಿ ಕ್ಷೇತ್ರ ಬೆಳವಣಿಗೆ ಕಾಣಲ್ಲ: ಶರದ್​ ಪವಾರ್

ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಸರ್ಕಾರದ ಜೊತೆಗಿನ ರೈತರ ಮಾತುಕತೆ ಐದನೇ ಬಾರಿಗೆ ವಿಫಲವಾಗಿದೆ. ಇಂಥ ಸಂದರ್ಭದಲ್ಲಿ ಶರದ್​ ಪವಾರ್​ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ಕೂತವರು ಹಳ್ಳಿಗಳನ್ನು ಗಮನಿಸದಿದ್ದರೆ ಕೃಷಿ ಕ್ಷೇತ್ರ ಬೆಳವಣಿಗೆ ಕಾಣಲ್ಲ: ಶರದ್​ ಪವಾರ್
ಶರದ್​ ಪವಾರ್​
ರಾಜೇಶ್ ದುಗ್ಗುಮನೆ
| Edited By: |

Updated on: Dec 29, 2020 | 8:51 PM

Share

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತರ ವಿರೋಧಿ ನೀತಿ ತಾಳಿದೆ ಎಂದು ಅನೇಕ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ, ಎನ್​ಸಿಪಿ ಮುಖ್ಯಸ್ಥ ಹಾಗೂ ಮಾಜಿ ಕೃಷಿ ಸಚಿವ ಶರದ್​ ಪವಾರ್​ ಕೂಡ ಧ್ವನಿಗೂಡಿಸಿದ್ದಾರೆ. ದೆಹಲಿಯಲ್ಲಿ ಕೂತವರು ಹಳ್ಳಿಗಳನ್ನು ಗಮನಿಸದಿದ್ದರೆ ಕೃಷಿ ಕ್ಷೇತ್ರ ಬೆಳವಣಿಗೆ ಕಾಣುವುದಿಲ್ಲ ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಸರ್ಕಾರದ ಜೊತೆಗಿನ ರೈತರ ಮಾತುಕತೆ ಐದನೇ ಬಾರಿಗೆ ವಿಫಲವಾಗಿದೆ. ಇಂಥ ಸಂದರ್ಭದಲ್ಲಿ ಶರದ್​ ಪವಾರ್​ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರ ಆಂದೋಲನಕ್ಕೆ ವಿರೋಧ ಪಕ್ಷಗಳನ್ನು ದೂಷಿಸುವುದು ತಪ್ಪು ಎಂದು ಶರದ್​ ಪವಾರ್​ ಹೇಳಿದ್ದಾರೆ.

ಯಪಿಎ ಆಡಳಿತಾವಧಿಯಲ್ಲಿ ಇದೇ ಕೃಷಿ ಮಸೂದೆ ಜಾರಿಗೆ ತರಲು ನಿರ್ಧರಿಸಲಾಗಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಶರದ್​ ಪವಾರ್​ ಉತ್ತರಿಸಿದ್ದು, ನಾನು ಹಾಗೂ ಪ್ರಧಾನಿ ಮನಮೋಹನ್​ ಸಿಂಗ್​ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದೆವು. ಆದರೆ, ಈಗಿನ ಸರ್ಕಾರ ತಂದ ರೀತಿಯಲ್ಲಲ್ಲ. ಆ ಸಮಯದಲ್ಲಿ ಕೃಷಿ ಸಚಿವಾಲಯವು ಎಲ್ಲಾ ರಾಜ್ಯಗಳ ಕೃಷಿ ಮಂತ್ರಿಗಳು ಮತ್ತು ಕ್ಷೇತ್ರದ ತಜ್ಞರೊಂದಿಗೆ ಪ್ರಸ್ತಾವಿತ ಸುಧಾರಣೆಗಳ ಕುರಿತು ದೀರ್ಘ ಚರ್ಚೆಗಳನ್ನು ನಡೆಸಿತ್ತು ಎಂದಿದ್ದಾರೆ.

ಕೃಷಿಯನ್ನು ದೆಹಲಿಯಲ್ಲಿ ಕೂತವರು ನಡೆಸಲು ಸಾಧ್ಯವಿಲ್ಲ. ಇದು ಗ್ರಾಮಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವ ರೈತರನ್ನು ಒಳಗೊಂಡಿರುತ್ತದೆ. ಈ ವಿಷಯದಲ್ಲಿ ದೊಡ್ಡ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ. ಈ ರೀತಿ ಸಮಸ್ಯೆ ಆದಾಗ ಅದನ್ನು ಪರಿಹರಿಸಿ ಮುಂದೆ ಸಾಗುವುದು ಕೇಂದ್ರ ಸರ್ಕಾರ ಹಾಗೂ ನನ್ನ ಜವಾಬ್ದಾರಿ ಎಂದರು ಶರದ್​ ಪವಾರ್​.

ವಿರೋಧ ಪಕ್ಷಗಳು ಸದೃಢವಾಗಿದ್ದರೆ ರೈತರು ಆಂದೋಲನ ನಡೆಸುವ ಅಗತ್ಯವೇನಿತ್ತು? ರೈತ ಮುಖಂಡನ ಪ್ರಶ್ನೆ

ಒಂದೆರಡು ವರ್ಷ ಪ್ರಾಯೋಗಿಕವಾಗಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸೋಣ: ರಾಜನಾಥ್ ಸಿಂಗ್