ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಗಾಂಧಿಯವರ ಮಾತು ಯಾರೂ ಕೇಳುವುದಿಲ್ಲ ಎಂದು ಕಾಲೆಳೆದ ಬಿಜೆಪಿ

|

Updated on: Sep 23, 2023 | 8:57 PM

ಶರದ್ ಪವಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಚಿತ್ರವು ಸಾವಿರ ಪದಗಳನ್ನು ಹೇಳುತ್ತದೆ ಆದರೆ ರಾಹುಲ್ ಗಾಂಧಿ ಅವುಗಳನ್ನು ಕೇಳಲು ಸಿದ್ಧರಿದ್ದರೆ ಮಾತ್ರ. ಇಂಡಿಯಾ ಮೈತ್ರಿಕೂಟದಲ್ಲಿ ಯಾರೂ ರಾಹುಲ್ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಪೂನಾವಾಲಾ ಹೇಳಿದ್ದಾರೆ.

ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಗಾಂಧಿಯವರ ಮಾತು ಯಾರೂ ಕೇಳುವುದಿಲ್ಲ ಎಂದು ಕಾಲೆಳೆದ ಬಿಜೆಪಿ
ಶರದ್ ಪವಾರ್
Follow us on

ದೆಹಲಿ ಸೆಪ್ಟೆಂಬರ್ 23: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರು ಶನಿವಾರ ಅಹಮದಾಬಾದ್‌ನಲ್ಲಿ ಗೌತಮ್ ಅದಾನಿಯನ್ನು (Gautam Adani) ಭೇಟಿಯಾಗಿದ್ದು, ಇಬ್ಬರೂ ಅಹಮದಾಬಾದ್‌ನಲ್ಲಿ ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಟ್‌ನ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದಾದ ನಂತರ ಪವಾರ್ ಅಹಮದಾಬಾದ್‌ನಲ್ಲಿರುವ ಅದಾನಿ ಅವರ ನಿವಾಸ ಮತ್ತು ಕಚೇರಿಗೆ ಭೇಟಿ ನೀಡಿದ್ದರು ಎಂದು ವರದಿಗಳು ತಿಳಿಸಿವೆ. ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್‌ಮ್‌ಪವರ್ ಅನ್ನು ಗುಜರಾತ್‌ನ ವಾಸ್ನಾ, ಚಚರ್ವಾಡಿಯಲ್ಲಿ ಗೌತಮ್ ಅದಾನಿ ಅವರೊಂದಿಗೆ ಉದ್ಘಾಟಿಸಿರುವುದು ವಿಶೇಷವಾಗಿದೆ” ಎಂದು ಪವಾರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅದಾನಿ ವಿರುದ್ಧ ರಾಹುಲ್ ಗಾಂಧಿಯವರ (Rahul Gandhi) ನಿರಂತರ ವಾಗ್ದಾಳಿ ಮತ್ತು 2024 ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ವಿಪಕ್ಷ ಮೈತ್ರಿಕೂಟ ಇಂಡಿಯಾ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಸಭೆ ನಡೆದಿದೆ. ಶರದ್ ಪವಾರ್ ಅವರು ಇಂಡಿಯಾ ಬ್ಲಾಕ್‌ನ ಪ್ರಮುಖ ನಾಯಕರಾಗಿದ್ದಾರೆ. ಅವರು ಮುಂಬೈನಲ್ಲಿ ನಡೆದ ಮೈತ್ರಿಕೂಟದ ಕೊನೆಯ ಸಭೆಗೆ ಆತಿಥ್ಯ ವಹಿಸಿದ್ದರು.


ಶರದ್ ಪವಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಚಿತ್ರವು ಸಾವಿರ ಪದಗಳನ್ನು ಹೇಳುತ್ತದೆ ಆದರೆ ರಾಹುಲ್ ಗಾಂಧಿ ಅವುಗಳನ್ನು ಕೇಳಲು ಸಿದ್ಧರಿದ್ದರೆ ಮಾತ್ರ. ಇಂಡಿಯಾ ಮೈತ್ರಿಕೂಟದಲ್ಲಿ ಯಾರೂ ರಾಹುಲ್ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಪೂನಾವಾಲಾ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟದಲ್ಲಿ ಯಾರೂ ರಾಹುಲ್ ಗಾಂಧಿ ಅಥವಾ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣ ಶರದ್ ಪವಾರ್ ಜಿ ಅವರನ್ನು ಅಲ್ಕಾ ಲಾಂಬಾ ಅವರಂತಹವರು ಮತ್ತೆ ನಿಂದಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ರಾಹುಲ್ ಗಾಂಧಿ ಕೇಳಲು ಸಿದ್ಧರಿದ್ದರೆ ಈ ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ಕೆಟ್ಟ ಪದ ಬಳಸಿದ ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್

ಶರದ್ ಪವಾರ್ ಅದಾನಿ ಜೊತೆಗಿನ ಆಪ್ತ ಸಂಬಂಧ ಕಾಣಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ, ಶರದ್ ಪವಾರ್ ಅವರು ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯ ವಿಪಕ್ಷಗಳ ಬೇಡಿಕೆಯನ್ನು ವಿರೋಧಿಸಿದ್ದ, ಇದರ ಬದಲಿಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ಸಮಿತಿಗ ಬಗ್ಗೆ ಒಲವು ತೋರುವುದಾಗಿ ಹೇಳಿದ್ದರು.

ಶರದ್ ಪವಾರ್ ತಮ್ಮ ಆತ್ಮಚರಿತ್ರೆ ಲೋಕ್ ಮೇಜ್ ಸಾಂಗಟಿಯಲ್ಲಿ ಗೌತಮ್ ಅದಾನಿಯನ್ನು ಕಠಿಣ ಪರಿಶ್ರಮಿ, ಸರಳ ಮತ್ತು ಕೆಳಮಟ್ಟದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಶರದ್ ಪವಾರ್ ಅವರ ಒತ್ತಾಯದ ಮೇರೆಗೆ ಗೌತಮ್ ಅದಾನಿ ಥರ್ಮಲ್ ಪವರ್ ಕ್ಷೇತ್ರಕ್ಕೆ ಕಾಲಿಟ್ಟರು ಎಂದು ಶರದ್ ಪವಾರ್ ತಮ್ಮ ಪುಸ್ತಕದಲ್ಲಿ ಅದಾನಿ ತನ್ನ ಕಾರ್ಪೊರೇಟ್ ಸಾಮ್ರಾಜ್ಯವನ್ನು ಮೊದಲಿನಿಂದ ಹೇಗೆ ನಿರ್ಮಿಸಿದರು ಎಂಬುದನ್ನು ವಿವರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ