AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹೈದರಾಬಾದ್ ಎಕ್ಸ್​ಪ್ರೆಸ್ ಸೇರಿದಂತೆ ಇಂದು ಹೊಸ 9 ವಂದೇಭಾರತ್ ರೈಲುಗಳಿಗೆ ಚಾಲನೆ

New Vande Bharat Trains: ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಸಂಚರಿಸುವ ಒಂದು ರೈಲು ಸೇರಿದಂತೆ ಇಂದು 9 ವಂದೇ ಭಾರತ್ ರೈಲುಗಳು ಲೋಕಾರ್ಪಣೆಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಈ ರೈಲುಗಳಿಗೆ ಚಾಲನೆ ಕೊಡುತ್ತಿದ್ದಾರೆ. ಈ 9 ರೈಲುಗಳೊಂದಿಗೆ ಭಾರತದಲ್ಲಿ ವಂದೇ ಭಾರತ್ ಟ್ರೈನುಗಳ ಸಂಖ್ಯೆ 34 ಕ್ಕೆ ಏರಲಿದೆ. ಈ 34 ರೈಲುಗಳಲ್ಲಿ ಕರ್ನಾಟದಲ್ಲಿ 3 ರೈಲುಗಳು ಸಂಚರಿಸಲಿವೆ. ಈ ಪೈಕಿ ಕರ್ನಾಟಕಕ್ಕೆ ಸೀಮಿತವಾಗಿರುವುದು ಒಂದು ರೈಲು ಮಾತ್ರ. ಇವತ್ತು ಬಿಡುಗಡೆ ಆಗುತ್ತಿರುವ 9 ರೈಲುಗಳಲ್ಲಿ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಪಾಲು ಸಿಕ್ಕಿವೆ.

ಬೆಂಗಳೂರು ಹೈದರಾಬಾದ್ ಎಕ್ಸ್​ಪ್ರೆಸ್ ಸೇರಿದಂತೆ ಇಂದು ಹೊಸ 9 ವಂದೇಭಾರತ್ ರೈಲುಗಳಿಗೆ ಚಾಲನೆ
ವಂದೇ ಭಾರತ್ ರೈಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2023 | 10:21 AM

Share

ನವದೆಹಲಿ, ಸೆಪ್ಟೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ 9 ಹೊಸ ವಂದೇ ಭಾರತ್ ರೈಲುಗಳಿಗೆ (Vande Bharat express Train) ಚಾಲನೆ ಕೊಡಲಿದ್ದಾರೆ. ಇದರೊಂದಿಗೆ ದೇಶಾದ್ಯಂತ ಚಾಲನೆಯಲ್ಲಿರುವ ವಂದೇ ಭಾರತ್ ರೈಲುಗಳ ಸಂಖ್ಯೆ 34ಕ್ಕೆ ಏರಲಿದೆ. ಈಗಾಗಲೇ 25 ವಂದೇ ಭಾರತ್ ರೈಲುಗಳು ಸೇವೆಯಲ್ಲಿವೆ. ಈಗ ಬಿಡುಗಡೆ ಆಗುತ್ತಿರುವ 9 ರೈಲುಗಳಲ್ಲಿ ಮಧ್ಯಪ್ರದೇಶಕ್ಕೆ 3 ರೈಲುಗಳು ಸಿಕ್ಕಿದೆ. ಇದರಲ್ಲಿ ಎರಡು ರೈಲುಗಳು ಮಧ್ಯಪ್ರದೇಶ ರಾಜ್ಯದೊಳಗೆ ಮಾತ್ರ ಸಂಚರಿಸುವಂಥವಾಗಿವೆ. ತಮಿಳುನಾಡಿಗೆ ಎರಡು ರೈಲುಗಳು ಸಿಕ್ಕಿವೆ. ಇನ್ನು, ಈ ಹೊಸ 9 ರೈಲುಗಳಲ್ಲಿ ಕರ್ನಾಟಕಕ್ಕೆ ಒಂದು ಸಿಕ್ಕಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ (Hyderabad Bengaluru Express) ಈ ರೈಲು ಸಂಚರಿಸಲುತ್ತದೆ.

ಈ ವಂದೇ ಭಾರತ್ ರೈಲುಗಳೆಲ್ಲವೂ ಎಕ್ಸ್​ಪ್ರೆಸ್ ಟ್ರೈನುಗಳಾಗಿದ್ದು, 8 ಬೋಗಿಗಳನ್ನು ಹೊಂದಿರುತ್ತವೆ. ಭಾನುವಾರ ಚಾಲನೆಗೊಳ್ಳಲಿರುವ ಈ 9 ರೈಲುಗಳ ಪಟ್ಟಿ ಇಂತಿದೆ:

  1. ರೂರ್ಕೆಲಾ – ಪುರಿ
  2. ಉದಯಪುರ್ – ಜೈಪುರ್
  3. ಕಾಸರಗೋಡು – ತಿರುವನಂತಪುರಂ
  4. ರಾಂಚಿ – ಹೌರಾ
  5. ಪಾಟ್ನಾ – ಹೌರಾ
  6. ತಿರುನೆಲ್ವೇಲಿ – ಚೆನ್ನೈ
  7. ಹೈದರಾಬಾದ್ – ಬೆಂಗಳೂರು
  8. ವಿಜಯವಾಡ – ಚೆನ್ನೈ
  9. ಜಾಮನಗರ್ – ಅಹ್ಮದಾಬಾದ್

ಇದನ್ನೂ ಓದಿ: ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಗಾಂಧಿಯವರ ಮಾತು ಯಾರೂ ಕೇಳುವುದಿಲ್ಲ ಎಂದು ಕಾಲೆಳೆದ ಬಿಜೆಪಿ

ಈಗಾಗಲೇ ಇರುವ 25 ವಂದೇ ಭಾರತ್ ರೈಲುಗಳ ಪಟ್ಟಿ

  1. ನವದೆಹಲಿ – ವಾರಾಣಸಿ
  2. ನವದೆಹಲಿ – ಶ್ರೀ ಮಾತಾ ವೈಷ್ಣೋದೇವಿ ಕಾತ್ರ
  3. ಮುಂಬೈ ಸೆಂಟ್ರಲ್ – ಗಾಂಧಿನಗರ್ ಕ್ಯಾಪಿಟಲ್
  4. ನವದೆಹಲಿ – ಅಂಬ್ ಅಂದೋರಾ
  5. ಚೆನ್ನೈ – ಮೈಸೂರು
  6. ಬಿಸಾಲಸಪುರ್ – ನಾಗಪುರ್
  7. ಹೌರಾ – ನ್ಯೂ ಜಲಪೈಗುರಿ
  8. ವಿಶಾಖಪಟ್ಟಣಂ – ಸಿಕಂದರಾಬಾದ್
  9. ಮುಂಬೈ – ಸೋಲಾಪುರ್
  10. ಮುಂಬೈನ – ಸಾಯಿನಗರ್ ಶಿರಡಿ
  11. ರಾಣಿ ಕಮಲಾಪತಿ – ಹಜ್ರತ್ ನಿಜಾಮುದ್ದೀನ್
  12. ಸಿಕಂದರಾಬಾದ್ – ತಿರುಪತಿ
  13. ಚೆನ್ನೈ – ಕೊಯಮತ್ತೂರು
  14. ದೆಹಲಿ – ಅಜ್ಮೆರ್
  15. ಕಾಸರಗೋಡು – ತಿರುವನಂತಪುರಂ
  16. ಹೌರಾ – ಪುರಿ
  17. ಆನಂದ್ ವಿಹಾರ್ – ಡೆಹ್ರಾಡೂನ್
  18. ನ್ಯೂ ಜಲಪೈಪುರಿ – ಗುವಾಹಟಿ
  19. ಮುಂಬೈ – ಮಡಗಾಂವ್
  20. ಪಟ್ನಾ – ರಾಂಚಿ
  21. ಬೆಂಗಳೂರು – ಧಾರವಾಡ
  22. ರಾಣಿ ಕಮಲಾಪತಿ – ಜಬಲಪುರ್
  23. ಇಂದೋರ್ – ಭೋಪಾಲ್
  24. ಜೋಧಪುರ್ – ಸಬರಮತಿ
  25. ಗೋರಖಪುರ್ – ಲಕ್ನೋ ಚಾರ್​ಬಾಗ್

ಇದನ್ನೂ ಓದಿ: ಜಿ20ಗೆ ಹೇಗೆ ನಡೆದಿತ್ತು ತಯಾರಿ? ಎಡಬದಿಯ ಸ್ಟೇರಿಂಗ್​​ನಲ್ಲಿ ಚಾಲನೆ ಬಗ್ಗೆ ಮೋದಿ ಜತೆ ಅನುಭವ ಹಂಚಿಕೊಂಡ ಸಿಆರ್​​ಪಿಎಫ್ ಚಾಲಕ

ಕರ್ನಾಟಕದಲ್ಲಿ ಸಾಗಿಹೋಗುವ ವಂದೇ ಭಾರತ್ ರೈಲುಗಳಿವು:

  1. ಮೈಸೂರು – ಚೆನ್ನೈ
  2. ಬೆಂಗಳೂರು – ಧಾರವಾಡ
  3. ಹೈದರಾಬಾದ್ – ಬೆಂಗಳೂರು

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ