ಒಂಬತ್ತು ವಂದೇಭಾರತ್ ರೈಲುಗಳಿಗೆ ಚಾಲನೆ ನೀಡಿದ ಮೋದಿ; ಬೆಂಗಳೂರು ಹೈದರಾಬಾದ್ ರೈಲು ವೇಳಾಪಟ್ಟಿ, ದರ ಇತ್ಯಾದಿ ವಿವರ

Narendra Modi Flags off 9 Vande Bharat Trains: ಕಾಚಿಗೂಡ ಯಶವಂತಪುರ ಎಕ್ಸ್​ಪ್ರೆಸ್ ಸೇರಿದಂತೆ 9 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 24ರಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಬುಧವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಲಭ್ಯ ಇರುತ್ತದೆ. ಕಾಚಿಗೂಡದಿಂದ ಬೆಳಗ್ಗೆ 5:30ಕ್ಕೆ ಒಂದು ರೈಲು ಹೊರಟರೆ, ಯಶವಂಪುರದಿಂದ ಮಧ್ಯಾಹ್ನ 2:45ಕ್ಕೆ ಇನ್ನೊಂದು ರೈಲು ಹೊರಡುತ್ತದೆ. ಇದರ ಬೆಲೆ ಇತ್ಯಾದಿ ವಿವರ ಈ ಸುದ್ದಿಯಲ್ಲಿದೆ.

ಒಂಬತ್ತು ವಂದೇಭಾರತ್ ರೈಲುಗಳಿಗೆ ಚಾಲನೆ ನೀಡಿದ ಮೋದಿ; ಬೆಂಗಳೂರು ಹೈದರಾಬಾದ್ ರೈಲು ವೇಳಾಪಟ್ಟಿ, ದರ ಇತ್ಯಾದಿ ವಿವರ
ವಂದೇಭಾರತ್ ರೈಲು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2023 | 12:57 PM

ನವದೆಹಲಿ, ಸೆಪ್ಟೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ 9 ಹೊಸ ವಂದೇ ಭಾರತ್ ರೈಲುಗಳಿಗೆ (Vande Bharat express Train) ಚಾಲನೆ ನೀಡಿದ್ದಾರೆ. ಈಗಾಗಲೇ 25 ವಂದೇ ಭಾರತ್ ರೈಲುಗಳು ಸೇವೆಯಲ್ಲಿವೆ. ಇದರೊಂದಿಗೆ ದೇಶಾದ್ಯಂತ ಚಾಲನೆಯಲ್ಲಿರುವ ವಂದೇ ಭಾರತ್ ರೈಲುಗಳ ಸಂಖ್ಯೆ 34ಕ್ಕೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಹೊಸ ವಂದೇ ಭಾರತ್ ರೈಲುಗಳನ್ನು ಬಿಡುಗಡೆ ಮಾಡಿದ್ದಾರೆ. ಇವತ್ತು ಚಾಲನೆಗೊಂಡ 9 ರೈಲುಗಳಲ್ಲಿ ಮಧ್ಯಪ್ರದೇಶಕ್ಕೆ 3 ರೈಲುಗಳು ಸಿಕ್ಕಿದೆ. ಇದರಲ್ಲಿ ಎರಡು ರೈಲುಗಳು ಮಧ್ಯಪ್ರದೇಶ ರಾಜ್ಯದೊಳಗೆ ಮಾತ್ರ ಸಂಚರಿಸುವಂಥವಾಗಿವೆ. ತಮಿಳುನಾಡಿಗೆ ಎರಡು ರೈಲುಗಳು ಸಿಕ್ಕಿವೆ. ಇನ್ನು, ಕರ್ನಾಟಕಕ್ಕೆ ಒಂದು ಸಿಕ್ಕಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ (Kachiguda- Yeshwantpur Express) ಈ ರೈಲು ಸಂಚರಿಸುತ್ತದೆ.

ಬೆಂಗಳೂರು ಹೈದರಾಬಾದ್ ವಂದೇ ಭಾರತ್ ರೈಲುಗಳ ದರ ಮತ್ತು ವೇಳಾಪಟ್ಟಿ

ಹೈದರಾಬಾದ್​ನ ಕಾಚಿಗೂಡ ಮತ್ತು ಬೆಂಗಳೂರಿನ ಯಶವಂತಪುರ ನಿಲ್ಧಾಣದ ಮಧ್ಯೆ ಈ ರೈಲು ಸಂಚರಿಸುತ್ತದೆ. ಇಂದು ಮಧ್ಯಾಹ್ನ 12:30ಕ್ಕೆ ಪ್ರಧಾನಿ ಮೋದಿ ಚಾಲನೆಗೊಳಿಸಿದ್ದಾರೆ. ಉದ್ಘಾಟನಾ ರೈಲು ಸೆಪ್ಟೆಂಬರ್ 24, ರಾತ್ರಿ 11:45ಕ್ಕೆ ಯಶವಂಪುರ ರೈಲು ನಿಲ್ದಾಣಕ್ಕೆ ಅಗಮಿಸುತ್ತದೆ.

ಕಾಚಿಗೂಡ ಯಶವಂತಪುರ ರೈಲು ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಂದು ಲಭ್ಯ ಇರುತ್ತದೆ. ದಿನಕ್ಕೆ ಎರಡು ರೈಲುಗಳು ಸಂಚರಿಸುತ್ತವೆ. ಒಂದು ರೈಲು ಕಾಚಿಗೂಡದಿಂದ ಬೆಳಗ್ಗೆ 5:30ಕ್ಕೆ ಹೊರಟು ಯಶವಂತಪುರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ. ಮಹಬೂಬನಗರ್, ಕರ್ನೂಲ್, ಅನಂತಪುರಂ ಮತ್ತು ಧರ್ಮಾವರಂ ಮೂಲಕ ಸಾಗಿ ಬರುತ್ತದೆ.

ಇನ್ನು ಮತ್ತೊಂದು ರೈಲು ಯಶವಂತಪುರದಿಂದ ಮಧ್ಯಾಹ್ನ 2:45ಕ್ಕೆ ಹೊರಟು, ರಾತ್ರಿ 11:15ಕ್ಕೆ ಕಾಚಿಗೂಡವನ್ನು ತಲುಪುತ್ತದೆ.

ಇದನ್ನೂ ಓದಿ: ಪಿಎಂ ಮನ್ ಕೀ ಬಾತ್​ನಲ್ಲಿ ಹೊಯ್ಸಳರ ದೇವಸ್ಥಾನ, ಜಿ20, ಚಂದ್ರಯಾನ ಪ್ರಸ್ತಾಪಿಸಿದ ನರೇಂದ್ರ ಮೋದಿ

ಟಿಕೆಟ್ ಬೆಲೆಗಳೆಷ್ಟು?

ಕಾಚಿಗೂಡ ಯಶವಂತಪುರ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ಚೇರ್ ಕಾರ್ ಟಿಕೆಟ್ ದರ 1,600 ರೂ ಇದೆ. ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ದರ 2,915 ರೂ ಇದೆ. ಆದರೆ, ಯಶವಂತಪುರ ಕಾಚಿಗೂಡ ಎಕ್ಸ್​ಪ್ರೆಸ್ ರೈಲಿನ ಟಿಕೆಟ್ ಬೆಲೆ ತುಸು ಕಡಿಮೆ ಇದೆ. ಇದರ ಚೇರ್ ಕಾರ್ ಟಿಕೆಟ್ ಬೆಲೆ 1,540 ರೂ ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ದರ 2,865 ರೂ ಇದೆ.

ಈ ವಂದೇ ಭಾರತ್ ರೈಲುಗಳೆಲ್ಲವೂ ಎಕ್ಸ್​ಪ್ರೆಸ್ ಟ್ರೈನುಗಳಾಗಿದ್ದು, 8 ಬೋಗಿಗಳನ್ನು ಹೊಂದಿರುತ್ತವೆ. ಭಾನುವಾರ ಚಾಲನೆಗೊಳ್ಳಲಿರುವ ಈ 9 ರೈಲುಗಳ ಪಟ್ಟಿ ಇಂತಿದೆ:

  1. ರೂರ್ಕೆಲಾ – ಪುರಿ
  2. ಉದಯಪುರ್ – ಜೈಪುರ್
  3. ಕಾಸರಗೋಡು – ತಿರುವನಂತಪುರಂ
  4. ರಾಂಚಿ – ಹೌರಾ
  5. ಪಾಟ್ನಾ – ಹೌರಾ
  6. ತಿರುನೆಲ್ವೇಲಿ – ಚೆನ್ನೈ
  7. ಹೈದರಾಬಾದ್ – ಬೆಂಗಳೂರು
  8. ವಿಜಯವಾಡ – ಚೆನ್ನೈ
  9. ಜಾಮನಗರ್ – ಅಹ್ಮದಾಬಾದ್

ಇದನ್ನೂ ಓದಿ: ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಗಾಂಧಿಯವರ ಮಾತು ಯಾರೂ ಕೇಳುವುದಿಲ್ಲ ಎಂದು ಕಾಲೆಳೆದ ಬಿಜೆಪಿ

ಈಗಾಗಲೇ ಇರುವ 25 ವಂದೇ ಭಾರತ್ ರೈಲುಗಳ ಪಟ್ಟಿ

  1. ನವದೆಹಲಿ – ವಾರಾಣಸಿ
  2. ನವದೆಹಲಿ – ಶ್ರೀ ಮಾತಾ ವೈಷ್ಣೋದೇವಿ ಕಾತ್ರ
  3. ಮುಂಬೈ ಸೆಂಟ್ರಲ್ – ಗಾಂಧಿನಗರ್ ಕ್ಯಾಪಿಟಲ್
  4. ನವದೆಹಲಿ – ಅಂಬ್ ಅಂದೋರಾ
  5. ಚೆನ್ನೈ – ಮೈಸೂರು
  6. ಬಿಸಾಲಸಪುರ್ – ನಾಗಪುರ್
  7. ಹೌರಾ – ನ್ಯೂ ಜಲಪೈಗುರಿ
  8. ವಿಶಾಖಪಟ್ಟಣಂ – ಸಿಕಂದರಾಬಾದ್
  9. ಮುಂಬೈ – ಸೋಲಾಪುರ್
  10. ಮುಂಬೈನ – ಸಾಯಿನಗರ್ ಶಿರಡಿ
  11. ರಾಣಿ ಕಮಲಾಪತಿ – ಹಜ್ರತ್ ನಿಜಾಮುದ್ದೀನ್
  12. ಸಿಕಂದರಾಬಾದ್ – ತಿರುಪತಿ
  13. ಚೆನ್ನೈ – ಕೊಯಮತ್ತೂರು
  14. ದೆಹಲಿ – ಅಜ್ಮೆರ್
  15. ಕಾಸರಗೋಡು – ತಿರುವನಂತಪುರಂ
  16. ಹೌರಾ – ಪುರಿ
  17. ಆನಂದ್ ವಿಹಾರ್ – ಡೆಹ್ರಾಡೂನ್
  18. ನ್ಯೂ ಜಲಪೈಪುರಿ – ಗುವಾಹಟಿ
  19. ಮುಂಬೈ – ಮಡಗಾಂವ್
  20. ಪಟ್ನಾ – ರಾಂಚಿ
  21. ಬೆಂಗಳೂರು – ಧಾರವಾಡ
  22. ರಾಣಿ ಕಮಲಾಪತಿ – ಜಬಲಪುರ್
  23. ಇಂದೋರ್ – ಭೋಪಾಲ್
  24. ಜೋಧಪುರ್ – ಸಬರಮತಿ
  25. ಗೋರಖಪುರ್ – ಲಕ್ನೋ ಚಾರ್​ಬಾಗ್

ಕರ್ನಾಟಕದಲ್ಲಿ ಸಾಗಿಹೋಗುವ ವಂದೇ ಭಾರತ್ ರೈಲುಗಳಿವು:

  1. ಮೈಸೂರು – ಚೆನ್ನೈ
  2. ಬೆಂಗಳೂರು – ಧಾರವಾಡ
  3. ಹೈದರಾಬಾದ್ – ಬೆಂಗಳೂರು

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ