Sharad Pawar: ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿ ಎನ್​​ಸಿಪಿ ಮುಖ್ಯಸ್ಥರಾಗಿ ಮುಂದುವರಿಯುವಂತೆ ವಿನಂತಿಸುವ ಪ್ರಸ್ತಾಪ ಅಂಗೀಕರಿಸಿದ ಕೋರ್ ಕಮಿಟಿ

|

Updated on: May 05, 2023 | 12:51 PM

ಮಂಗಳವಾರ ಪವಾರ್ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಕ್ಷದ ನಾಯಕರ ಸಮಿತಿಯು ತನ್ನ ಉತ್ತರಾಧಿಕಾರಿಯ ಚುನಾವಣೆಯ ಬಗ್ಗೆ ನಿರ್ಧರಿಸುತ್ತದೆ ಎಂದು ಪವಾರ್ ಹೇಳಿದ್ದರು

Sharad Pawar: ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿ ಎನ್​​ಸಿಪಿ ಮುಖ್ಯಸ್ಥರಾಗಿ ಮುಂದುವರಿಯುವಂತೆ ವಿನಂತಿಸುವ ಪ್ರಸ್ತಾಪ ಅಂಗೀಕರಿಸಿದ ಕೋರ್ ಕಮಿಟಿ
ಶರದ್ ಪವಾರ್
Follow us on

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಕೋರ್ ಕಮಿಟಿ ಅಧ್ಯಕ್ಷ ಸ್ಥಾನವನ್ನು ತೊರೆದ ಶರದ್ ಪವಾರ್ (Sharad Pawar) ಅವರ ರಾಜೀನಾಮೆಯನ್ನು ತಿರಸ್ಕರಿಸಿದ್ದು. ಪಕ್ಷದ ನಾಯಕತ್ವವನ್ನು ಮುಂದುವರಿಸಲು ಪವಾರ್ ಅವರನ್ನು ವಿನಂತಿಸುವ ಪ್ರಸ್ತಾಪವನ್ನು ಅಂಗೀಕರಿಸಿದೆ. ಶರದ್ ಪವಾರ್ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನಗಳ ನಂತರ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಎನ್‌ಸಿಪಿ ನಿರ್ಧರಿಸಿತ್ತು. ಮಂಗಳವಾರ ಪವಾರ್ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಕ್ಷದ ನಾಯಕರ ಸಮಿತಿಯು ತನ್ನ ಉತ್ತರಾಧಿಕಾರಿಯ ಚುನಾವಣೆಯ ಬಗ್ಗೆ ನಿರ್ಧರಿಸುತ್ತದೆ ಎಂದು ಪವಾರ್ ಹೇಳಿದ್ದರು.

ಕೋರ್ ಕಮಿಟಿಯಲ್ಲಿ ಪ್ರಫುಲ್ ಪಟೇಲ್, ಸುನೀಲ್ ತಾಟ್ಕರ್, ಕೆಕೆ ಶರ್ಮಾ, ಪಿಸಿ ಚಾಕೊ , ಅಜಿತ್ ಪವಾರ್, ಜಂಯಕ್ ಪಾಟೀಲ್, ಸುಪ್ರಿಯಾ ಸುಳೆ, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್,ಅನಿಲ್ ದೇಶ್ ಮುಖ್, ರಾಜೇಶ್ ಟೋಪೆ, ಜಿತೇಂದ್ರ ಅವಾದ್, ಹಸನ್ ಮುಶ್ರಿಫ್, ಧನಂಜಯ್ ಮುಂಡೆ ಮತ್ತು ಜಯದೇವ್ ಗಾಯಕ್ವಾಡ್ ಇದ್ದಾರೆ.

ಬಾರಾಮತಿ ಲೋಕಸಭಾ ಸಂಸದೆ ಮತ್ತು ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಪಕ್ಷದ ರಾಷ್ಟ್ರೀಯ ಮುಖ್ಯಸ್ಥರಾಗುವ ಸಾಧ್ಯತೆಯಿದೆ ಮತ್ತು ಅಜಿತ್ ಪವಾರ್ ಅವರು ಮಹಾರಾಷ್ಟ್ರ ಘಟಕದ ಉಸ್ತುವಾರಿ ವಹಿಸಲಿದ್ದಾರೆ ಎಂದು ಹೆಸರು ಹೇಳಲು ಬಯಸದ ಎನ್​​ಸಿಪಿ ನಾಯಕರು ತಿಳಿಸಿದ್ದಾರೆ ಎಂದು ಒಂದು ದಿನದ ಹಿಂದೆ ಪಿಟಿಐ ವರದಿ ಮಾಡಿತ್ತು.

ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಶರದ್ ಪವಾರ್ ಗುರುವಾರ ಭೇಟಿ ಮಾಡಿದ್ದರು. ಪಕ್ಷದ ಭವಿಷ್ಯಕ್ಕಾಗಿ ಮತ್ತು ಹೊಸ ನಾಯಕತ್ವವನ್ನು ರಚಿಸಲು ತಮ್ಮ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪವಾರ್ ಹೇಳಿದ್ದಾರೆ.

ನಾನು ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ. ನಾನು ನನ್ನ ಯೋಜನೆಗಳನ್ನು ನಿಮ್ಮೆಲ್ಲರೊಂದಿಗೆ ಚರ್ಚಿಸಿ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ (ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವ) ನಿರ್ಧಾರವನ್ನು ತೆಗೆದುಕೊಳ್ಳಲು ನೀವು ನನಗೆ ಅವಕಾಶ ನೀಡುವುದಿಲ್ಲ ಎಂದು ನನಗೆ ತಿಳಿದಿದೆ ಎಂದು ಮಾಜಿ ಕೇಂದ್ರ ಸಚಿವ ಎಂದು ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.

ನಮ್ಮ ಸಾಹೇಬರು ನಮಗೆ ತಿಳಿಸದೆ ನಿರ್ಧಾರ ತೆಗೆದುಕೊಂಡರು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಎಲ್ಲ ಬೇಡಿಕೆಗಳನ್ನು ಪರಿಗಣಿಸಿ ಇಂದು ಸಭೆ ನಡೆಸಿ ಸಮಿತಿಯು ಸರ್ವಾನುಮತದಿಂದ ಪ್ರಸ್ತಾವನೆ ಅಂಗೀಕರಿಸಿದೆ. ಸಮಿತಿಯು ಸರ್ವಾನುಮತದಿಂದ ರಾಜೀನಾಮೆಯನ್ನು ತಿರಸ್ಕರಿಸಿದ್ದುತ್ತು ಪವಾರ್ ಅವರ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ನಾವು ವಿನಂತಿಸುತ್ತೇವೆ ಎಂದು ಎನ್​​ಸಿಪಿ ಉಪಾಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಇದನ್ನೂ ಓದಿ: Smriti Irani: ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದ ಸಮಯದಲ್ಲಿ ತಾವು ಮಾಡಿದ್ದ ಜಾಹೀರಾತಿನ ವಿಡಿಯೋ ಹಂಚಿಕೊಂಡ ಸ್ಮೃತಿ ಇರಾನಿ

ಮಂಗಳವಾರ, ಪವಾರ್ ಅವರು 1999 ರಿಂದ ಸ್ಥಾಪಿಸಿದ ಮತ್ತು ತಮ್ಮ ನೇತೃತ್ವದ ರಾಜಕೀಯ ಸಂಘಟನೆಯಾದ ಎನ್‌ಸಿಪಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹೇಳಿದರು. ನನಗೆ ಮೂರು ವರ್ಷಗಳ ರಾಜ್ಯಸಭಾ ಸದಸ್ಯತ್ವ ಉಳಿದಿದೆ, ಈ ಅವಧಿಯಲ್ಲಿ ನಾನು ಮಹಾರಾಷ್ಟ್ರ ಮತ್ತು ಭಾರತಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೇನೆ, ಯಾವುದೇ ಜವಾಬ್ದಾರಿಯನ್ನು (ಪಕ್ಷದ ಹುದ್ದೆಯ) ಸ್ವೀಕರಿಸುವುದಿಲ್ಲ ಎಂಬ ಎಚ್ಚರಿಕೆಯೊಂದಿಗೆ 1960ಮೇ 1 ರಿಂದ ಸುದೀರ್ಘ ಸಾರ್ವಜನಿಕ ಜೀವನದ ನಂತರ ಮೇ 1, 2023 ರವರೆಗೆ ಒಂದು ಹೆಜ್ಜೆ ಹಿಂದೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ, ನಾನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಪವಾರ್ ಹೇಳಿದರು.

ಅಜಿತ್ ಪವಾರ್ ಬಿಜೆಪಿಯತ್ತ ವಾಲುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಕಳೆದ ತಿಂಗಳು ಎನ್‌ಸಿಪಿಯ ಮುಂಬೈ ಘಟಕದ ಸಭೆಗೆ ಅಜಿತ್ ಪವಾರ್ ಗೈರುಹಾಜರಾದಾಗ ಅವರ ಪಕ್ಷಾಂತರ ಮಾಡುತ್ತಾರೆ ಎಂಬ ಊಹಾಪೋಹಗಳಿಗೆ ಪುಷ್ಠಿ ನೀಡಿದ್ದಂತಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Fri, 5 May 23