AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ಶಾಸಕರು ಬಿಜೆಪಿ ಜತೆ ಇದ್ದಾರೆ, ಇದನ್ನು ಮನಗಂಡು ಶರದ್ ಪವಾರ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ: ಸಾಮ್ನಾ ಸಂಪಾದಕೀಯ

ಪಕ್ಷದ ಭವಿಷ್ಯದ ಬಗ್ಗೆ ಹೇಳುವುದಾದರೆ, ಸುಪ್ರಿಯಾ ಸುಳೆ ಅವರು ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ದೆಹಲಿಯಲ್ಲಿಯೂ  ಹಿಡಿತವನ್ನು ಹೊಂದಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಯಾಗುವುದು ಅಜಿತ್ ಪವಾರ್ ಅವರ ಏಕೈಕ ಗುರಿಯಾಗಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ಹಲವು ಶಾಸಕರು ಬಿಜೆಪಿ ಜತೆ ಇದ್ದಾರೆ, ಇದನ್ನು ಮನಗಂಡು ಶರದ್ ಪವಾರ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ: ಸಾಮ್ನಾ ಸಂಪಾದಕೀಯ
ಶರದ್ ಪವಾರ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 04, 2023 | 6:31 PM

Share

ಮುಖ್ಯಾಂಶಗಳು

  • ಪಕ್ಷ ಈ ರೀತಿ ವಿಭಜನೆ ಆಗುವ ಮುನ್ನ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಘನತೆಯಿಂದ ನಿರ್ಗಮಿಸಲು ನಿರ್ಧರಿಸಿರಬಹುದು
  • ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಿಗೆ ಪವಾರ್ ಅವರ ಕೊಡುಗೆಯನ್ನು ಗಮನಿಸಿದ ಸಂಪಾದಕೀಯವು ಪವಾರ್ ಅವರ ನಿರ್ಧಾರವು ನಿಜವಾಗಿಯೂ ಮಾಸ್ಟರ್​​ಸ್ಟ್ರೋಕ್ ಎಂದು ಉಲ್ಲೇಖಿಸಿದೆ
  • ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದನ್ನು ಪವಾರ್ ಬಹಿರಂಗಪಡಿಸಿದ್ದಾರೆ. ಏನೆಲ್ಲಾ ನಡೆದಿದೆಯೋ ಅದಕ್ಕೆಲ್ಲ ಪವಾರ್ ಅವರೇ ನಾಯಕ

ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖವಾಣಿ ಸಾಮ್ನಾ ಗುರುವಾರ ಸಂಪಾದಕೀಯದಲ್ಲಿ ಶರದ್ ಪವಾರ್ (Sharad Pawar) ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯದ ಬಗ್ಗೆ ಬರೆದಿದ್ದು, ಪವಾರ್ ತಮ್ಮ ನಿರ್ಧಾರವನ್ನು ಘೋಷಿಸುವ ಭಾಷಣದೊಂದಿಗೆ ಸಿದ್ಧರಾಗಿ ಬಂದಿದ್ದರು. ಇದು ಅಸಾಮಾನ್ಯ ಆಗಿದ್ದರೂ, ಅದು ಗಟ್ಟಿ ನಿರ್ಧಾರ ಎಂಬುದು ಸ್ಪಷ್ಟ.  ಶರದ್ ಪವಾರ್ ಅವರ ಘೋಷಣೆಯ ನಂತರ, ಎನ್‌ಸಿಪಿ ನಾಯಕರಲ್ಲಿ ಗೊಂದಲ ಉಂಟಾಗಿದೆ. ಆದರೆ ಅವರಲ್ಲಿ ಅನೇಕರು ಈಗಾಗಲೇ ಬಿಜೆಪಿ (BJP) ಹಡಗಿನಲ್ಲಿ ಒಂದು ಕಾಲು ಇಟ್ಟಿದ್ದಾರೆ. ಪಕ್ಷ ಈ ರೀತಿ ವಿಭಜನೆ ಆಗುವ ಮುನ್ನ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಘನತೆಯಿಂದ ನಿರ್ಗಮಿಸಲು ನಿರ್ಧರಿಸಿರಬಹುದು ಎಂದು ಸಂಪಾದಕೀಯ ಹೇಳಿದೆ. “ನೀವು ಪಕ್ಷ” ಎಂದು ಪವಾರ್‌ಗೆ ಜಯಂತ್ ಪಾಟೀಲ್ ಸರಿಯಾಗಿಯೇ ಹೇಳಿದ್ದಾರೆ. ಎನ್‌ಸಿಪಿ ಇಂದು ಶರದ್ ಪವಾರ್ ಹೆಸರಿನಲ್ಲಿ ನಿಂತಿದೆ.

ಪಕ್ಷದ ಭವಿಷ್ಯದ ಬಗ್ಗೆ ಹೇಳುವುದಾದರೆ, ಸುಪ್ರಿಯಾ ಸುಳೆ ಅವರು ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ದೆಹಲಿಯಲ್ಲಿಯೂ  ಹಿಡಿತವನ್ನು ಹೊಂದಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಯಾಗುವುದು ಅಜಿತ್ ಪವಾರ್ ಅವರ ಏಕೈಕ ಗುರಿಯಾಗಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಿಗೆ ಪವಾರ್ ಅವರ ಕೊಡುಗೆಯನ್ನು ಗಮನಿಸಿದ ಸಂಪಾದಕೀಯವು ಪವಾರ್ ಅವರ ನಿರ್ಧಾರವು ನಿಜವಾಗಿಯೂ ಮಾಸ್ಟರ್​​ಸ್ಟ್ರೋಕ್ ಎಂದು ಉಲ್ಲೇಖಿಸಿದೆ. ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದನ್ನು ಪವಾರ್ ಬಹಿರಂಗಪಡಿಸಿದ್ದಾರೆ. ಏನೆಲ್ಲಾ ನಡೆದಿದೆಯೋ ಅದಕ್ಕೆಲ್ಲ ಪವಾರ್ ಅವರೇ ನಾಯಕ. ಪವಾರ್ ಅವರು ಭಾರತೀಯ ರಾಜಕೀಯದ ಭೀಷ್ಮ, ಆದರೆ ಅವರು ಭೀಷ್ಮನಂತೆ ಮಲಗುವುದಿಲ್ಲ, ಮುನ್ನಡೆಸುತ್ತಾರೆ ಎಂದು ತೋರಿಸಿದರು.

ಇದನ್ನೂ ಓದಿ:ಶರದ್ ಪವಾರ್ ನಂತರ ಎನ್​​ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಯಾರು?; ನಾಳೆ ನಡೆಯಲಿರುವ ಸಭೆಯಲ್ಲಿ ನಿರ್ಧಾರ

ಶರದ್ ಪವಾರ್ ಅವರ ಈ ಘೋಷಣೆಯು ಎನ್‌ಸಿಪಿಗೆ ಮುಂದೇನು ಎಂಬ ಊಹಾಪೋಹವನ್ನು ಹುಟ್ಟುಹಾಕಿದೆ. ಅವರ ನಿರ್ಗಮನವು ಪಕ್ಷದ ಮುಖ್ಯಸ್ಥ ಹುದ್ದೆಯಿಂದ ಮಾತ್ರವೇ ಹೊರತು ರಾಜಕೀಯದಿಂದಲ್ಲ. ನಾನು ನಿಯಮಿತವಾಗಿ ಜನರನ್ನು ಭೇಟಿಯಾಗುತ್ತಿದೆ ಎಂದು ಪವಾರ್ ಹೇಳಿದ್ದಾರೆ. ಗುರುವಾರ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಅವರು, ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸುಪ್ರಿಯಾ ಸುಳೆ ಅವರು ಪಕ್ಷದ ಅಧ್ಯಕ್ಷರಾಗುತ್ತಾರೆ ಮತ್ತು ಅಜಿತ್ ಪವಾರ್ ಅವರು ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ. ಅವರೇ ಪಕ್ಷದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಆಗಲಿದ್ದಾರೆ ಎಂದು ಊಹಾಪೋಹವಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್