Road Accident Deaths: 2022ರಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ದೆಹಲಿಯಲ್ಲೇ ಹೆಚ್ಚು

|

Updated on: Dec 05, 2023 | 9:53 AM

2022ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದವರ ಒಟ್ಟು ಸಂಖ್ಯೆಯಲ್ಲಿ ದೆಹಲಿಯದ್ದು ಬಹುಪಾಲಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್​ ಬ್ಯೂರೋ ಮಾಹಿತಿ ನೀಡಿದೆ. 2022ರಲ್ಲಿ ರಸ್ತೆ ಅಪಘಾತಗಳಿಂದ 2,103 ಮಂದಿ ಸಾವನ್ನಪ್ಪಿದ್ದಾರೆ, ಗರಿಷ್ಠ ಸಾವಿನ ಪ್ರಮಾಣ ದೆಹಲಿಯಲ್ಲಿ ವರದಿಯಾಗಿದೆ. ಶೇ.51.5ರಷ್ಟು ಅಪಘಾತ ಹಾಗೂ ಸಾವುಗಳು ವೇಗದ ಚಾಲನೆಯಿಂದಾದರೆ, ಶೇ.31.3 ಓವರ್​ಟೇಕಿಂಗ್ ಹಾಗೂ ಅಸಡ್ಡೆ ಚಾಲನೆಯಿಂದಾಗಿದೆ. ಶೇ.27ರಂದು ಅಪಘಾತಕ್ಕೆ ಸಂಬಂಧಿಸಿದ ಸಾವುಗಳು ಡ್ರಗ್ಸ್​ ಅಥವಾ ಮಧ್ಯಪಾನ ಸೇವನೆ ಮಾಡಿ ಗಾಡಿ ಚಲಾಯಿಸುವುದರಿಂದಾಗಿದೆ.

Road Accident Deaths: 2022ರಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ದೆಹಲಿಯಲ್ಲೇ ಹೆಚ್ಚು
ಅಪಘಾತ
Follow us on

2022ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದವರ ಒಟ್ಟು ಸಂಖ್ಯೆಯಲ್ಲಿ ದೆಹಲಿಯದ್ದು ಬಹುಪಾಲಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್​ ಬ್ಯೂರೋ ಮಾಹಿತಿ ನೀಡಿದೆ. 2022ರಲ್ಲಿ ರಸ್ತೆ ಅಪಘಾತಗಳಿಂದ 2,103 ಮಂದಿ ಸಾವನ್ನಪ್ಪಿದ್ದಾರೆ, ಗರಿಷ್ಠ ಸಾವಿನ ಪ್ರಮಾಣ ದೆಹಲಿಯಲ್ಲಿ ವರದಿಯಾಗಿದೆ. ಶೇ.51.5ರಷ್ಟು ಅಪಘಾತ ಹಾಗೂ ಸಾವುಗಳು ವೇಗದ ಚಾಲನೆಯಿಂದಾದರೆ, ಶೇ.31.3 ಓವರ್​ಟೇಕಿಂಗ್ ಹಾಗೂ ಅಸಡ್ಡೆ ಚಾಲನೆಯಿಂದಾಗಿದೆ. ಶೇ.27ರಂದು ಅಪಘಾತಕ್ಕೆ ಸಂಬಂಧಿಸಿದ ಸಾವುಗಳು ಡ್ರಗ್ಸ್​ ಅಥವಾ ಮಧ್ಯಪಾನ ಸೇವನೆ ಮಾಡಿ ಗಾಡಿ ಚಲಾಯಿಸುವುದರಿಂದಾಗಿದೆ.

2022 ರಲ್ಲಿ ದೇಶದಾದ್ಯಂತ 53 ನಗರಗಳಲ್ಲಿ ಒಟ್ಟು 68,236 ರಸ್ತೆ ಅಪಘಾತಗಳು ವರದಿಯಾಗಿವೆ ಮತ್ತು ಈ ಅಪಘಾತಗಳಲ್ಲಿ 57,246 ಜನರು ಗಾಯಗೊಂಡಿದ್ದಾರೆ ಮತ್ತು 17,680 ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ. ಎನ್‌ಸಿಆರ್‌ಬಿ ವರದಿಯು ರಸ್ತೆ ಅಪಘಾತಗಳು, ರೈಲ್ವೆ ಅಪಘಾತಗಳು ಮತ್ತು ರೈಲ್ವೇ ಕ್ರಾಸಿಂಗ್ ಅಪಘಾತಗಳನ್ನು ಒಳಗೊಂಡಿದೆ.

ಈ ಅಪಘಾತಗಳಲ್ಲಿ ಹೆಚ್ಚಿನವು ವಸತಿ ಪ್ರದೇಶಗಳ ಬಳಿ (ಶೇ. 29.1), ನಂತರ ಕೈಗಾರಿಕಾ ಪ್ರದೇಶಗಳು (ಶೇ. 9.7) ಮತ್ತು ಶಾಲೆಗಳು ಮತ್ತು ಕಾಲೇಜುಗಳಂತಹ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳು (ಶೇ. 8.7) ಸಂಭವಿಸಿವೆ.

ಮತ್ತಷ್ಟು ಓದಿ: ಉತ್ತರಪ್ರದೇಶ: ಆಗ್ರಾ-ದೆಹಲಿ ಹೆದ್ದಾರಿಯಲ್ಲಿ ಭೀಕರ ಅಪಘಾತ; 5 ಸಾವು

2022 ರ ಅವಧಿಯಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ ಶೇಕಡಾ 50.9 ರಷ್ಟಿರುವ ಕಾರಣ ದೆಹಲಿಯು ಗರಿಷ್ಠ ಸಂಖ್ಯೆಯ ರೈಲ್ವೆ ಅಪಘಾತಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ