ತೆಲಂಗಾಣ: ಮಗನ ಮಾತು ಕೇಳದೆ ಚುನಾವಣೆಯಲ್ಲಿ ಸೋಲು ತಂದುಕೊಂಡ್ರಾ ಕೆಸಿಆರ್​

ಪ್ರತ್ಯೇಕ ತೆಲಂಗಾಣ ಚಳವಳಿಯನ್ನು ಮುನ್ನಡೆಸಿ ಬಳಿಕ 2014ರಿಂದ ಪಕ್ಷವನ್ನು ವಿಜಯದತ್ತ ಮುನ್ನಡೆಸಿದ ಕೆ ಚಂದ್ರಶೇಖರ್ ರಾವ್(K Chandrasekhar Rao)​ ಇನ್ನೇನು ಹ್ಯಾಟ್ರಿಕ್​ ಗೆಲುವು ಸಾಧಿಸಬೇಕೆನ್ನುವಷ್ಟರಲ್ಲಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಕೆಸಿಆರ್​ ತಮ್ಮ ಮಗ ಕೆಟಿ ರಾಮರಾವ್ ಅವರ ಮಾತು ಕೇಳಿದ್ದರೆ, ಚುನಾವಣೆಯಲ್ಲಿ ಗೆಲ್ಲುತ್ತಿದ್ದರೇನೋ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣ: ಮಗನ ಮಾತು ಕೇಳದೆ ಚುನಾವಣೆಯಲ್ಲಿ ಸೋಲು ತಂದುಕೊಂಡ್ರಾ ಕೆಸಿಆರ್​
ಕೆಸಿಆರ್​-ಕೆಟಿಆರ್​Image Credit source: The Times India
Follow us
ನಯನಾ ರಾಜೀವ್
|

Updated on: Dec 05, 2023 | 11:10 AM

ಪ್ರತ್ಯೇಕ ತೆಲಂಗಾಣ ಚಳವಳಿಯನ್ನು ಮುನ್ನಡೆಸಿ ಬಳಿಕ 2014ರಿಂದ ಪಕ್ಷವನ್ನು ವಿಜಯದತ್ತ ಮುನ್ನಡೆಸಿದ ಕೆ ಚಂದ್ರಶೇಖರ್ ರಾವ್(K Chandrasekhar Rao)​ ಇನ್ನೇನು ಹ್ಯಾಟ್ರಿಕ್​ ಗೆಲುವು ಸಾಧಿಸಬೇಕೆನ್ನುವಷ್ಟರಲ್ಲಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಕೆಸಿಆರ್​ ತಮ್ಮ ಮಗ ಕೆಟಿ ರಾಮರಾವ್ ಅವರ ಮಾತು ಕೇಳಿದ್ದರೆ, ಚುನಾವಣೆಯಲ್ಲಿ ಗೆಲ್ಲುತ್ತಿದ್ದರೇನೋ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆಗೆ ಮುನ್ನ, ಹೊಸ ಮುಖಗಳನ್ನು ಕರೆತಂದು ಸುಮಾರು 30 ಶಾಸಕರಿಗೆ ಟಿಕೆಟ್ ನೀಡಬೇಡಿ ಎಂದು ಕೆಟಿಆರ್ ಮುಖ್ಯಮಂತ್ರಿಗೆ ಸಲಹೆ ನೀಡಿದ್ದರು, ಆದರೆ ಕೆಸಿಆರ್​ ಇದಕ್ಕೆ ಒಪ್ಪಿರಲಿಲ್ಲ. ಇದೀಗ ಈ ಪೈಕಿ ಬಹುತೇಕ ಸ್ಥಾನಗಳು ಕಾಂಗ್ರೆಸ್​ ಪಾಲಾಗಿವೆ. ಮೊದಲ ಬಾರಿಗೆ ಬಿಆರ್‌ಎಸ್ ಪ್ರತಿನಿಧಿಸಿದ್ದ 10 ನಾಯಕರ ಪೈಕಿ 9 ಮಂದಿ ವಿಜಯಶಾಲಿಯಾಗಿದ್ದಾರೆ.

2014ರಲ್ಲಿ ಭಾರತ್​ ರಾಷ್ಟ್ರ ಸಮಿತಿ ಹುಟ್ಟಿತ್ತು, ಇದೀಗ ಮೊದಲ ಸೋಲನ್ನು ಪಕ್ಷ ಕಂಡಿದೆ. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿದ್ದರೆ, ಬಿಆರ್‌ಎಸ್ ಕೇವಲ 39 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆ.

ಪ್ರಚಾರದ ಸಂದರ್ಭದಲ್ಲಿ ಪಕ್ಷವು ಬಡವರಿಗಾಗಿ ತನ್ನ ಎಲ್ಲಾ ಕಲ್ಯಾಣ ಯೋಜನೆಗಳನ್ನು ಹೇಳಲು ಪ್ರಯತ್ನಿಸಿತ್ತು. ಹಾಗೆಯೇ ಯೋಜನೆಯ ಅನುಷ್ಠಾನಕ್ಕೆ ಹಣ ಹಂಚಿಕೆಯ ಬಗ್ಗೆ ನಿರ್ಧರಿಸಲು ಶಾಸಕರಿಗೆ ಅಧಿಕಾರವನ್ನು ಕೂಡ ನೀಡಲಾಗಿತ್ತು. ಇದು ತಾರತ್ಮಯ ಹಾಗೂ ಭ್ರಷ್ಟಾಚಾರದ ಆರೋಪಗಳಿಗೆ ಕಾರಣವಾಯಿತು.

ಕೆಸಿಆರ್ ಅವರ ಪುತ್ರ ಮತ್ತು ಐಟಿ ಸಚಿವ ಕೆಟಿ ರಾಮರಾವ್ ಅವರು ತೆಲಂಗಾಣದಲ್ಲಿ ಉದ್ಯೋಗ ಸೃಷ್ಟಿ ಮತ್ತು ಜಿಡಿಪಿ ಬೆಳವಣಿಗೆಯು ದೇಶದಲ್ಲೇ ಅತ್ಯಧಿಕವಾಗಿದೆ ಎಂದು ಹೇಳಿದ್ದರು, ಆದರೆ ಅನೇಕ ವರ್ಗಗಳು ಉದ್ಯೋಗವನ್ನು ಪಡೆಯುವುದು ಸಮಸ್ಯೆಯಾಗಿದೆ ಎಂದು ದೂರಿವೆ.

ಚುನಾವಣೆಗೆ ಮುನ್ನ, ಹೊಸ ಮುಖಗಳನ್ನು ಕರೆತಂದು ಸುಮಾರು 30 ಶಾಸಕರಿಗೆ ಟಿಕೆಟ್ ನೀಡಬೇಡಿ ಎಂದು ಕೆಟಿಆರ್ ಮುಖ್ಯಮಂತ್ರಿಗೆ ಸಲಹೆ ನೀಡಿದ್ದರು, ಆದರೆ ಕೆಸಿಆರ್​ ಇದಕ್ಕೆ ಒಪ್ಪಿರಲಿಲ್ಲ. ಇದೀಗ ಈ ಪೈಕಿ ಬಹುತೇಕ ಸ್ಥಾನಗಳು ಕಾಂಗ್ರೆಸ್​ ಪಾಲಾಗಿವೆ.

ಮತ್ತಷ್ಟು ಓದಿ: ತೆಲಂಗಾಣ: ಮುಂದಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ? ಇಂದು ರಾತ್ರಿ ನೂತನ ಸಿಎಂ ಪ್ರಮಾಣವಚನ ಸ್ವೀಕಾರ

ಮೊದಲ ಬಾರಿಗೆ ಬಿಆರ್‌ಎಸ್ ಪ್ರತಿನಿಧಿಸಿದ್ದ 10 ನಾಯಕರ ಪೈಕಿ 9 ಮಂದಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಹಲವು ಬಣಗಳನ್ನು ಹೊಂದಿದೆ ಮತ್ತು ಸ್ಪಷ್ಟ ಬಹುಮತವನ್ನು ಗೆದ್ದರೂ ಹತಾಶವಾಗಿದೆ. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಸೋತ ಮತ್ತು ಮಧ್ಯಪ್ರದೇಶದಿಂದಲೂ ಬಿಜೆಪಿಯನ್ನು ಕಿತ್ತೊಗೆಯಲು ವಿಫಲವಾದ ಕಾಂಗ್ರೆಸ್‌ಗೆ ತೆಲಂಗಾಣ ಗೆಲುವಿನ ರೇಖೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ