Telangana Results: ತೆಲಂಗಾಣ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಛಾಪು.. ಟ್ರಬಲ್ ಶೂಟರ್ ಮಂತ್ರ ತಂತ್ರ ಫಲ ಕಂಡಿದ್ದು ಹೀಗೆ

DK Shivakumar: ತೆಲಂಗಾಣ ಕಾಂಗ್ರೆಸ್ ನಾಯಕರ ಅಸಮಾಧಾನವನ್ನು ಹೋಗಲಾಡಿಸುವಲ್ಲಿ ಡಿಕೆ ಶಿವಕುಮಾರ್ ಅವರ ಮಂತ್ರ ಚೆನ್ನಾಗಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿ ತೆಲಂಗಾಣ ಕಾಂಗ್ರೆಸ್ ರಾಜಿ ಪಂಚಾಯ್ತಿಯಲ್ಲಿ ಡಿ.ಕೆ. ಅಧಿಪತ್ಯ ಪ್ರಭಾವ ಬೀರಿದೆ. ಆ ನಂತರ ಡಿ.ಕೆ. ಶಿವಕುಮಾರ್ ಮಂತ್ರಿಮಂಡಲವೂ ತೆಲಂಗಾಣ ಕಾಂಗ್ರೆಸ್ ನ ಅತೃಪ್ತಿಯನ್ನು ನಿಯಂತ್ರಿಸುವ ಕೆಲಸ ಮಾಡಿದೆ ಎನ್ನಬಹುದು.

Telangana Results: ತೆಲಂಗಾಣ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಛಾಪು.. ಟ್ರಬಲ್ ಶೂಟರ್ ಮಂತ್ರ ತಂತ್ರ ಫಲ ಕಂಡಿದ್ದು ಹೀಗೆ
ತೆಲಂಗಾಣ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಛಾಪು
Follow us
ಸಾಧು ಶ್ರೀನಾಥ್​
|

Updated on:Dec 04, 2023 | 4:45 PM

ತೆಲಂಗಾಣ ಅಸೆಂಬ್ಲಿ ಚುನಾವಣಾ ಫಲಿತಾಂಶ: ತೆಲಂಗಾಣ ವಿಧಾನಸಭೆ ಚುನಾವಣೆ ಮುಗಿದಿದೆ. ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನಡುವಿನ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿದಿದೆ. 119 ಕ್ಷೇತ್ರಗಳಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದರೆ, ಬಿಆರ್‌ಎಸ್ ಪಕ್ಷ 39, ಬಿಜೆಪಿ 8, ಎಂಐಎಂ 7 ಮತ್ತು ಸಿಪಿಐ 1 ಸ್ಥಾನಗಳನ್ನು ಗೆದ್ದಿದೆ. ಕರ್ನಾಟಕದ ಕಾಂಗ್ರೆಸ್​​ ರಾಜಕೀಯವೂ ಈ ಚುನಾವಣಾ ಪ್ರಚಾರದ ಮೇಲೆ ಪ್ರಭಾವ ಬೀರಿರುವುದು ಕುತೂಹಲಕಾರಿಯಾಗಿದೆ. ಮೇ 2023 ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು.. ನಂತರದ ಬೆಳವಣಿಗೆಗಳು ತೆಲಂಗಾಣ ಚುನಾವಣಾ ರಾಜಕೀಯದಲ್ಲಿ ಕಾಂಗ್ರೆಸ್ ಅಳವಡಿಸಿಕೊಂಡ ತಂತ್ರ ಅದರ ಚೇತರಿಕೆಯಲ್ಲಿ ಕೈವಾಡ ಹೊಂದಿತು ಎನ್ನಬಹುದು. ತೆಲಂಗಾಣದಲ್ಲಿ ಅದರಲ್ಲೂ ಈ ಆರು ತಿಂಗಳಲ್ಲಿ ಕಾಂಗ್ರೆಸ್ ಪುನಃಶ್ಚೇತನಕ್ಕೆ ಕರ್ನಾಟಕ ರಾಜಕೀಯ ಕೆಲಸ ಮಾಡಿದೆ ಎಂದು ಪರೋಕ್ಷವಾಗಿ ಹೇಳಬಹುದು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಉಪಮುಖ್ಯಮಂತ್ರಿ ಹಾಗೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರ ತಂತ್ರ ತೆಲಂಗಾಣದಲ್ಲಿ ಚೆನ್ನಾಗಿ ಕೆಲಸ ಮಾಡಿದೆ. ಹಾಗಾಗಿಯೇ ತೆಲಂಗಾಣ ಕಾಂಗ್ರೆಸ್ ರಾಜಕೀಯ ಬೆಂಗಳೂರಿನ ಮೂಲಕ ಹಾದುಹೋಗಿ ದೆಹಲಿಯ ಕೇಂದ್ರವಾಗಿ ಮುಂದುವರೆಯಿತು.

ತೆಲಂಗಾಣ ಕಾಂಗ್ರೆಸ್ ನಾಯಕರ ಅಸಮಾಧಾನವನ್ನು ಹೋಗಲಾಡಿಸುವಲ್ಲಿ ಡಿಕೆ ಶಿವಕುಮಾರ್ ಅವರ ಮಂತ್ರ ಚೆನ್ನಾಗಿ ಕೆಲಸ ಮಾಡಿದೆ. ಬೆಂಗಳೂರಿನಲ್ಲಿ ತೆಲಂಗಾಣ ಕಾಂಗ್ರೆಸ್ ರಾಜಿ ಪಂಚಾಯ್ತಿಯಲ್ಲಿ ಡಿ.ಕೆ. ಅಧಿಪತ್ಯ ಪ್ರಭಾವ ಬೀರಿದೆ ಎನ್ನಬಹುದು.. ಟಿ.ಪಿ.ಸಿ.ಸಿ ಮುಖ್ಯಸ್ಥ ರೇವಂತ್ ರೆಡ್ಡಿ ಸತತ ಡಿ.ಕೆ.ಶಿವಕುಮಾರ್ ಭೇಟಿ.. ನಂತರ ಭಟ್ಟಿ ವಿಕ್ರಮಾರ್ಕ, ಕೋಮಟಿ ರೆಡ್ಡಿ ವೆಂಕಟ ರೆಡ್ಡಿ ಪರಿಶ್ರಮ. ಆ ನಂತರ ಡಿ.ಕೆ. ಶಿವಕುಮಾರ್ ಮಂತ್ರಿಮಂಡಲವೂ ತೆಲಂಗಾಣ ಕಾಂಗ್ರೆಸ್ ನ ಅತೃಪ್ತಿಯನ್ನು ನಿಯಂತ್ರಿಸುವ ಕೆಲಸ ಮಾಡಿದೆ ಎನ್ನಬಹುದು.

ಆ ನಂತರ ಕೆ ಚಂದ್ರಶೇಖರರಾವ್​ ನೇತೃತ್ವದ ಬಿಆರ್ ಎಸ್ ಪಕ್ಷದ ನಾಯಕರನ್ನು ತೆಲಂಗಾಣ ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಡಿ.ಕೆ. ಶಿವಕುಮಾರ್ ಗುರುತರ ಕೆಲಸ ಮಾಡಿದೆ. ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಜೂಪಲ್ಲಿ ಕೃಷ್ಣರಾವ್, ತುಮ್ಮಲ ನಾಗೇಶ್ವರ ರಾವ್, ಮೈನಂಪಲ್ಲಿ ಹನುಮಂತ ರಾವ್… ಬಿಆರ್ ಎಸ್ ತೊರೆದಿದ್ದ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಡಿ.ಕೆ.ಶಿವಕುಮಾರ್ ಮತ್ತು ರೇವಂತ್ ರೆಡ್ಡಿ ಬೆಂಗಳೂರಿನ ವೇದಿಕೆಯಲ್ಲಿ ಹಲವು ನಾಯಕರನ್ನು ಭೇಟಿ ಮಾಡಿ ನಂತರ ಅವರನ್ನು ಕಾಂಗ್ರೆಸ್ ಗೆ ಕರೆತರುವ ಹಾದಿ ಸುಗಮಗೊಳಿಸಿದರು.

ಮೇಲಾಗಿ.. ವೈಎಸ್‌ಆರ್‌ಟಿಪಿ ಕಾಂಗ್ರೆಸ್‌ ವಿಲೀನ ವಿಚಾರದ ಚರ್ಚೆಯೂ ಬೆಂಗಳೂರಿನಲ್ಲೇ ನಡೆದಿದೆ. ವೈ.ಎಸ್. ಶರ್ಮಿಳಾ ಹಾಗೂ ಡಿ.ಕೆ.ಶಿವಕುಮಾರ್ ಭೇಟಿ ಬಳಿಕವೇ ಈ ವಿಷಯ ಬಯಲಿಗೆ ಬಂದಿದೆ. ಆ ನಂತರ ವೈಎಸ್ ಶರ್ಮಿಳಾ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರೂ ಕಾರಣಾಂತರಗಳಿಂದ ವಿಲೀನ ಕಾರ್ಯಗತವಾಗಲಿಲ್ಲ. ಶರ್ಮಿಳಾ ಅವರು ತೆಲಂಗಾಣದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು.. ಬಳಿಕ ಡಿಕೆ ಶಿವಕುಮಾರ್ ಅವರನ್ನು ಸಂಪರ್ಕಿಸಿದರು.. ಕೆಸಿಆರ್​​ ಸರ್ಕಾರದ ಆಎಳಿತ ವಿರೋಧಿ ಮತಗಳು ವಿಭಜನೆಯಾಗದಂತೆ… ಕಾಂಗ್ರೆಸ್ ಪಕ್ಷದೊಂದಿಗೆ ಸಹಕರಿಸುವಂತೆ ಮನವಿ ಮಾಡುವಲ್ಲಿ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದರು.

ಆದರೆ, ಕರ್ನಾಟಕದಲ್ಲಿ ಅಧಿಕಾರ ಗದ್ದುಗೆ ಹಿಡಿದ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲೂ ಅದೇ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದೆ. ತೆಲಂಗಾಣ ರಾಜಕೀಯ ಹಾಗೂ ಇಲ್ಲಿನ ಪರಿಸ್ಥಿತಿಯನ್ನು ನೇರವಾಗಿ ಅರಿತುಕೊಂಡಿರುವ ಡಿ.ಕೆ.ಶಿವಕುಮಾರ್ ಅವರ ಕಾರ್ಯತಂತ್ರಗಳನ್ನೂ ಪಕ್ಷ ಪರಿಗಣಿಸಿದೆ. ಮೇಲಾಗಿ ಡಿ.ಕೆ. ಅಸ್ತ್ರ ಪ್ರಚಾರದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಿಆರ್‌ಎಸ್ ತಂತ್ರಗಳನ್ನು ಎದುರಿಸುವ ಭಾಷಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತೆಲಂಗಾಣದಲ್ಲಿ ಪ್ರಚಾರ ಮುಗಿಯುವವರೆಗೂ ವ್ಯಾಪಕ ಸಂಚಾರ ನಡೆಸಿದ ಡಿಕೆ ಶಿವಕುಮಾರ್ ಇಲ್ಲಿನ ರಾಜಕೀಯ ಸ್ಥಿತಿಗೆ ತಕ್ಕಂತೆ ತಮ್ಮ ಬ್ರ್ಯಾಂಡ್ ರಾಜಕಾರಣ ಮಾಡಿದರು. ಮೇಲಾಗಿ.. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜಕೀಯ ತಂತ್ರಗಾರ ಸುನೀಲ್ ಕಣುಗೂಲು, ಡಿಕೆ ಶಿವಕುಮಾರ್ ಅವರ ಮಂತ್ರ ಚೆನ್ನಾಗಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಆರು ಗ್ಯಾರಂಟಿಗಳ ತಂತ್ರವನ್ನು ಜನರ ಬಳಿಗೆ ಕೊಂಡೊಯ್ಯುವಲ್ಲಿಯೂ ಕಾಂಗ್ರೆಸ್ ನ ತಂತ್ರ ಯಶಸ್ವಿಯಾಗಿದೆ.

ಚುನಾವಣೆ ಬಳಿಕ ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದ್ದು, ಶಾಸಕರ ಖರೀದಿ ಪ್ರಕರಣ ಮುನ್ನೆಲೆಗೆ ಬಂದಿತ್ತು. ಹಲವು ಶಾಸಕರು ಪಕ್ಷ ಬದಲಾಯಿಸಲಿದ್ದಾರೆ ಎಂಬ ವದಂತಿ ಹರಡಿದ್ದರಿಂದ ಕಾಂಗ್ರೆಸ್ ನಾಯಕತ್ವ ಎಚ್ಚೆತ್ತುಕೊಂಡಿತ್ತು. ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ರಂಗಕ್ಕೆ ಕರೆತರಲಾಯಿತು. ಫಲಿತಾಂಶ ಬರುವ ಒಂದು ದಿನ ಮುಂಚಿತವಾಗಿ ತೆಲಂಗಾಣಕ್ಕೆ ತೆರಳುವಂತೆ ಹೈಕಮಾಂಡ್​​ ಸೂಚಿಸಿದ್ದರಿಂದ ಡಿಕೆ ಶಿವಕುಮಾರ್ ತರಾತುರಿಯಲ್ಲಿ ಹೈದರಾಬಾದ್ ತಲುಪಿಕೊಂಡಿದ್ದರು.

ಅದರ ಬೆನ್ನಲ್ಲೇ ಕರ್ನಾಟಕದ ಸಚಿವರು ಮತ್ತು ಶಾಸಕರಿಗೂ ತೆಲಂಗಾಣಕ್ಕೆ ಬರುವಂತೆ ಸೂಚಿಸಲಾಗಿತ್ತು. ಎಲ್ಲ ಶಾಸಕರನ್ನೂ ಹೈದರಾಬಾದ್‌ಗೆ ಕರೆತರಲು ಕರ್ನಾಟಕ ನಾಯಕರಿಗೆ ಆದೇಶಿಸಲಾಗಿತ್ತು. ಈ ವಿದ್ಯಮಾನಗಳ ಸಮ್ಮುಖದದಲ್ಲಿ ಡಿಕೆಶಿ ತಂತ್ರಗಳು ಉತ್ತಮ ಫಲಿತಾಂಶ ನೀಡಿವೆ ಎನ್ನಬಹುದು. ಹಿಂದಿನ ಅನುಭವಗಳನ್ನು ಇಟ್ಟುಕೊಂಡು.. ಡಿಕೆಶಿ ನಾಯಕತ್ವವು ತೆಲಂಗಾಣ ಕಾಂಗ್ರೆಸ್ ನಲ್ಲಿ ಇನ್ನಷ್ಟು ಜೋಶ್ ತುಂಬಿದ್ದರಲ್ಲಿ ಎರಡು ಮಾತಿಲ್ಲ.

Also read: ತೆಲಂಗಾಣ ಕಾಂಗ್ರೆಸ್ ಶಾಸಕರ ರಕ್ಷಣೆಗೆ ಹೈದರಾಬಾದ್​​ ತಲುಪಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಮತ್ತು ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ನೇತೃತ್ವದ ತಂಡ ರಾಜಭವನಕ್ಕೆ ತೆರಳಿ ರಾಜ್ಯಪಾಲ ತಮಿಳಿ ಸೈ ಅವರಿಗೆ ಪತ್ರ ಬರೆದುಸ ಸರ್ಕಾರ ರಚನೆಗೆ ಆಹ್ವಾನಿಸುವಂತೆ ಮನವಿ ಮಾಡಿದೆ. ಬಳಿಕ ಗಚ್ಚಿಬೌಲಿಯ ಹೋಟೆಲ್‌ನಲ್ಲಿ ಡಿ.ಕೆ.ಶಿವಕುಮಾರ್, ಎಐಸಿಸಿ ವೀಕ್ಷಕರಾದ ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ಸುರ್ಜೇವಾಲಾ ಅವರು ವಿಜೇತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದರು.

ಹಿಂದಿನ ಸಂದರ್ಭಗಳು ಮತ್ತು ಅನುಭವಗಳನ್ನು ಇಟ್ಟುಕೊಂಡು ತೆಲಂಗಾಣ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಹಲವು ವ್ಯವಹಾರಗಳನ್ನು ಪಕ್ಷದ ಮುಖ್ಯಸ್ಥರು ಡಿಕೆ ಶಿವಕುಮಾರ್ ಅವರಿಗೆ ವಹಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾಗಿ ತೆಲಂಗಾಣ ರಾಜಕೀಯದಲ್ಲಿ ಡಿ.ಕೆ. ಶಿ. ಮಂತ್ರ ಚೆನ್ನಾಗಿ ಕೆಲಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಹಕಾರಿಯಾಗಿದೆ ಎಂಬ ವಿಶ್ಲೇಷಣೆಗಳು ಮುನ್ನೆಲೆಗೆ ಬಂದಿರುವುದನ್ನು ಗಮನಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:43 pm, Mon, 4 December 23