Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಸರ್ಕಾರ ಉದ್ಯೋಗ, ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ; ಪ್ರಧಾನಿ ನರೇಂದ್ರ ಮೋದಿ

ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿದೆ, ಜಿಎಸ್‌ಟಿಯನ್ನು ಹೊರತಂದಿದೆ, ಗಣಿಗಾರಿಕೆ ಮತ್ತು ರಕ್ಷಣಾ ವಲಯವನ್ನು ಖಾಸಗಿ ಹೂಡಿಕೆಗೆ ಮುಕ್ತಗೊಳಿಸಿದೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಉದ್ಯೋಗ, ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ; ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ಸುಷ್ಮಾ ಚಕ್ರೆ
|

Updated on: Oct 04, 2024 | 10:36 PM

ನವದೆಹಲಿ: ಮುಂದಿನ ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇ. 7ರ ಬೆಳವಣಿಗೆ ದರಕ್ಕಿಂತ “ಹೆಚ್ಚು ಉತ್ತಮ” ಪ್ರದರ್ಶನ ತೋರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೌಟಿಲ್ಯ ಆರ್ಥಿಕ ಸಮಾವೇಶದ 3 ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಲವಾದ ಆರ್ಥಿಕ ಮೂಲಭೂತಗಳೊಂದಿಗೆ ಭಾರತ ದೇಶವು ನಿರಂತರವಾಗಿ ಉನ್ನತ ಬೆಳವಣಿಗೆಯ ಹಾದಿಯಲ್ಲಿದೆ ಎಂದು ಒತ್ತಿ ಹೇಳಿದ್ದಾರೆ.

“ಕಳೆದ ವರ್ಷ ನಮ್ಮ ಆರ್ಥಿಕತೆಯು ಎಲ್ಲಾ ಮುನ್ಸೂಚನೆಗಳನ್ನು ಮೀರಿಸಿದೆ. ವಿಶ್ವಬ್ಯಾಂಕ್, IMF ಅಥವಾ ಮೂಡೀಸ್ ಎಲ್ಲರೂ ಭಾರತಕ್ಕೆ ಸಂಬಂಧಿಸಿದ ಮುನ್ಸೂಚನೆಗಳನ್ನು ಅಪ್‌ಗ್ರೇಡ್ ಮಾಡಿದ್ದಾರೆ. ಈ ಎಲ್ಲಾ ಸಂಸ್ಥೆಗಳು ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತವು ಶೇಕಡಾ 7ಕ್ಕಿಂತ ಹೆಚ್ಚು ಬೆಳೆಯುತ್ತದೆ ಎಂದು ಹೇಳಲಾಗುತ್ತಿದೆ. ನಾವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಕೌಟಿಲ್ಯ ಆರ್ಥಿಕ ಸಮಾವೇಶದ ಮೂರನೇ ಆವೃತ್ತಿಯ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ 32,800 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಹಾಯ ಮಾಡಲು ರಚನಾತ್ಮಕ ಸುಧಾರಣೆಗಳನ್ನು ಮುಂದುವರೆಸಲು ಬದ್ಧವಾಗಿದೆ. ಉದ್ಯೋಗಗಳು, ಕೌಶಲ್ಯಗಳು, ಸುಸ್ಥಿರ ಬೆಳವಣಿಗೆ ಮೋದಿ 3.0 ಸರ್ಕಾರದ ಕೇಂದ್ರಬಿಂದುವಾಗಿದೆ ಎಂದಿದ್ದಾರೆ.

ಭಾರತವು ದ್ವಿಚಕ್ರ ವಾಹನಗಳು ಮತ್ತು ಟ್ರಾಕ್ಟರ್‌ಗಳ ಅತಿದೊಡ್ಡ ಉತ್ಪಾದಕ ಮತ್ತು ಮೊಬೈಲ್ ಫೋನ್‌ಗಳ ಎರಡನೇ ಅತಿದೊಡ್ಡ ಉತ್ಪಾದಕವಾಗಿದೆ. 140 ಕೋಟಿ ಭಾರತೀಯರು ನಮ್ಮ ಶಕ್ತಿಯಾಗಿದ್ದು, ಭಾರತದ ಸುಧಾರಣೆಗಾಗಿ ಇನ್ನಷ್ಟು ರಚನಾತ್ಮಕ ಸುಧಾರಣೆಗಳನ್ನು ತರಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ