ಕೋಟಾದ ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು 20ರ ಹರೆಯದ ವೈದ್ಯಕೀಯ ಆಕಾಂಕ್ಷಿ ಸಾವು

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ನಿವಾಸಿಯಾದ ಇಶಾಂಶು ಕಳೆದ ವರ್ಷ ಆಗಸ್ಟ್‌ನಲ್ಲಿ ಕೋಟಾಕ್ಕೆ ಬಂದು ವೈದ್ಯಕೀಯ ಪ್ರವೇಶ ಪರೀಕ್ಷೆಯ ನೀಟ್‌ಗೆ ತಯಾರಿ ನಡೆಸುತ್ತಿದ್ದರು. ಆತ ತನ್ನ ಮೂವರು ಹಾಸ್ಟೆಲ್ ಮೇಟ್‌ಗಳೊಂದಿಗೆ ಕಟ್ಟಡದ ಆರನೇ ಮಹಡಿಯಲ್ಲಿರುವ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದ

ಕೋಟಾದ ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು 20ರ ಹರೆಯದ ವೈದ್ಯಕೀಯ ಆಕಾಂಕ್ಷಿ ಸಾವು
ಪ್ರಾತಿನಿಧಿಕ ಚಿತ್ರ

Updated on: Feb 03, 2023 | 5:24 PM

ಕೋಟಾ: ಪಶ್ಚಿಮ ಬಂಗಾಳದ (West Bengal) 20 ವರ್ಷದ ನೀಟ್ (NEET) ಆಕಾಂಕ್ಷಿಯೊಬ್ಬರು ಇಲ್ಲಿನ ಜವಾಹರ್ ನಗರ ಪ್ರದೇಶದಲ್ಲಿನ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಇಶಾಂಶು ಭಟ್ಟಾಚಾರ್ಯ ಎಂಬ ವಿದ್ಯಾರ್ಥಿ ಆಯತಪ್ಪಿ ಬಾಲ್ಕನಿಯ ಅಲ್ಯೂಮಿನಿಯಂ ರೇಲಿಂಗ್‌ಗೆ ಬಿದ್ದಿದ್ದು ಆ ರೇಲಿಂಗ್ ಮುರಿದು ಬಿದ್ದು ಆತನ ಸಾವು ಸಂಭವಿಸಿದೆ ಎಂದು ಸರ್ಕಲ್ ಆಫೀಸರ್ ಅಮರ್ ಸಿಂಗ್ ಹೇಳಿದ್ದಾರೆ. ಅವರು ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಕರೆತಂದಿದ್ದು ವೈದರೂ ವಿದ್ಯಾರ್ಥಿ ಸಾವಿಗೀಡಾಗಿರುವುದಾಗಿ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ನಿವಾಸಿಯಾದ ಇಶಾಂಶು ಕಳೆದ ವರ್ಷ ಆಗಸ್ಟ್‌ನಲ್ಲಿ ಕೋಟಾಕ್ಕೆ ಬಂದು ವೈದ್ಯಕೀಯ ಪ್ರವೇಶ ಪರೀಕ್ಷೆಯ ನೀಟ್‌ಗೆ ತಯಾರಿ ನಡೆಸುತ್ತಿದ್ದರು. ಆತ ತನ್ನ ಮೂವರು ಹಾಸ್ಟೆಲ್ ಮೇಟ್‌ಗಳೊಂದಿಗೆ ಕಟ್ಟಡದ ಆರನೇ ಮಹಡಿಯಲ್ಲಿರುವ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದ.  ಮಧ್ಯರಾತ್ರಿಯ ಸುಮಾರಿಗೆ ಅವರು ತಮ್ಮ ಕೋಣೆಗೆ ಹಿಂತಿರುಗುತ್ತಿದ್ದಾಗ, ಆಯತಪ್ಪಿ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.

ಸಂತ್ರಸ್ತರ ಮೃತದೇಹವನ್ನು ಎಂಬಿಎಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವರ ಕುಟುಂಬ ಸದಸ್ಯರು ಬಂದ ನಂತರ ನಡೆಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ:Baba Ramdev: ಮೊದಲು ನಮಾಜ್ ಓದುವುದು, ನಂತರ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸುವುದು, ಭಯೋತ್ಪಾದನೆ ಸೃಷ್ಟಿಸುವುದು: ಬಾಬಾ ರಾಮ್​ದೇವ್

ಜನವರಿ 29 ರಂದು ಇದೇ ರೀತಿಯ ಘಟನೆಯಲ್ಲಿ, ಕೋಟಾದಲ್ಲಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಹಾರಾಷ್ಟ್ರದ 17 ವರ್ಷದ ಜೆಇಇ ಮೇನ್ಸ್ ಆಕಾಂಕ್ಷಿಯೊಬ್ಬರು ತಮ್ಮ ಹಾಸ್ಟೆಲ್ ಕಟ್ಟಡದ ಮೊದಲ ಮಹಡಿಯ ಬಾಲ್ಕನಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ